Home Mangalorean News Kannada News ಅದಮಾರು ಪರ್ಯಾಯ ಪೂರ್ವಭಾವಿಯಾಗಿ ಅಕ್ಕಿ ಮಹೂರ್ತ ಸಂಪನ್ನ

ಅದಮಾರು ಪರ್ಯಾಯ ಪೂರ್ವಭಾವಿಯಾಗಿ ಅಕ್ಕಿ ಮಹೂರ್ತ ಸಂಪನ್ನ

Spread the love

ಅದಮಾರು ಪರ್ಯಾಯ ಪೂರ್ವಭಾವಿಯಾಗಿ ಅಕ್ಕಿ ಮಹೂರ್ತ ಸಂಪನ್ನ

ಉಡುಪಿ: ಅದಮಾರು ಮಠಾಧೀಶರು 2020ರಕ್ಕು ಪರ್ಯಾಯ ಪೀಠವನ್ನೇರಲಿದ್ದು ಪೂರ್ವಭಾವಿಯಾಗಿ ಅಕ್ಕಿ ಮುಹೂರ್ತವು ಭಕ್ತಿ, ಶ್ರದ್ಧೆ, ಸಂಭ್ರಮದೊಂದಿಗೆ ಬುಧವಾರ ನಡೆಯಿತು.

2020ರ ಜನವರಿ 18ರಂದು ಉಡುಪಿಯ ಅದಮಾರು ಮಠದ ಪರ್ಯಾಯೋತ್ಸವ ನಡೆಯಲಿದೆ. ಅಂದರೇ ಮುಂದಿನ 2 ವರ್ಷಗಳ ಕಾಲ ಕೃಷ್ಣ ಮಠದಲ್ಲಿ ಕೃಷ್ಣನ ಪೂಜೆಯ ಅಧಿಕಾರ ಮತ್ತು ನಿತ್ಯ ಹತ್ತಾರು ಸಾವಿರ ಭಕ್ತರಿಗೆ ಅನ್ನದಾಸೋಹದ ಕರ್ತವ್ಯ ಅದಮಾರು ಮಠದ್ದಾಗಿರುತ್ತದೆ.

ಇದಕ್ಕೆ ಪೂರ್ವಭಾವಿಯಾಗಿ ಮುಂದಿನ 2 ವರ್ಷಗಳ ಕಾಲ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಮಧ್ಯಾಹ್ನದ ಊಟಕ್ಕೆ ಬೇಕಾಗುವ ಅಕ್ಕಿಯನ್ನು ಸಂಗ್ರಹಿಸುವ “ಅಕ್ಕಿ ಮುಹೂರ್ತ” ಬುಧವಾರ ಅದಮಾರು ಮಠದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಅಕ್ಕಿಯ ಮುಡಿಗಳನ್ನು ರಥಬೀದಿಯಲ್ಲಿ ಮಂಗಳ ವಾದ್ಯ ಘೋಷಗಳೊಂದಿಗೆ ಮೆರವಣಿಗೆ ಮಾಡಿ, ಕೃಷ್ಣ ಮಠದಲ್ಲಿ ಪೂಜೆ ಸಲ್ಲಿಸಿ, ಪುನಃ ಅದಮಾರು ಮಠಕ್ಕೆ ತಂದು ವಿದ್ಯುಕ್ತವಾಗಿ ಮುಹೂರ್ತ ನಡೆಸಲಾಯಿತು.

ಅದಮಾರು ಮಠದ ಕಿರಿಯ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ ಮುಂದಿನ 2 ವರ್ಷ ಕೃಷ್ಣ ಮಠದಲ್ಲಿ ಅನ್ನಪ್ರಸಾದಕ್ಕೆ 18 ದೇಸಿ ತಳಿಯ ಅಕ್ಕಿಯನ್ನು ಅಯ್ಕೆ ಮಾಡಲಾಗಿದೆ. ಈ ಅಕ್ಕಿಯನ್ನು ಸಾವಯವ ರೀತಿಯಲ್ಲಿ ಬೆಳೆಸುವ ರೈತರಿಂದಲೇ ನೇರವಾಗಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಧ್ಯವರ್ತಿಗಳಿಲ್ಲದೇ ರೈತರಿಗೆ ಲಾಭವಾಗಲಿದೆ, ಭಕ್ತರಿಗೂ ಆರೋಗ್ಯಕರ ಊಟ ಸಿಗಲಿದೆ, ವಿನಾಶದ ಅಂಚಿನಲ್ಲಿರುವ ಅಕ್ಕಿ ತಳಿಗಳನ್ನು ಉಳಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾವಯವ ದಾಸೋಹದ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಗಳಾಗಿದ್ದರು.


Spread the love

Exit mobile version