Home Mangalorean News Kannada News ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ – ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ 

ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ – ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ 

Spread the love

ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ – ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ 

ಮಂಗಳೂರು: ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳ ಪರ ಕೆಲಸ ಮಾಡದೇ ನೊಂದವರ, ಬಡವರ ಪರ ಕೆಲಸ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದರು.

ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದರ ಸಭೆ ಮತ್ತು ಜಿಲ್ಲಾ ಮಟ್ಟದ ದಲಿತ ಮುಖಂಡರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಯ ಸೌಲಭ್ಯಗಳನ್ನು ಸಮುದಾಯದ ಜನರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಭಾಗಹಿಸಿ ಮಾತನಾಡಿದ ದಲಿತ ಮುಖಂಡರು, ಮುಂಬರುವ ಬಾಬ ಸಾಹೇಬರ ಜಯಂತಿ ದಿನದ ಮುಂಚಿತವಾಗಿ ಮಂಗಳೂರು ಅಂಬೇಡ್ಕರ್ ಭವನದ ಉದ್ಘಾಟನೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಜಿಲ್ಲೆಯ ಕೆಲವೊಂದು ಕಡೆಯಲ್ಲಿ ಅಂಬೇಡ್ಕರ್ ಭವನದ ನಿರ್ಮಾಣದ ವಿಚಾರದಲ್ಲಿ ಅಧಿಕಾರಿಗಳು ಹಲವು ನೆಪ ನೀಡಿ ಭವನದ ನಿರ್ಮಾಣವಾದಂತೆ ತಡೆಗಟ್ಟುತ್ತಿದು ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎಸ್.ಸಿ. ಮತ್ತು ಎಸ್.ಟಿ ಸುಳ್ಳು ಜಾತಿ ಪ್ರಮಾಣ ಪ್ರತವನ್ನು ನೀಡಿ ಅದರ ಮೂಲಕ ಎಸ್.ಸಿ. ಮತ್ತು ಎಸ್.ಟಿ. ಜಾತಿಗೆ ಮೀಸಲಿಟ್ಟ ಟೆಂಡರ್‍ಗಳನ್ನು ಬ್ಭೆರೆಯವರು ಪಡೆಯುತ್ತಿದ್ದು, ಅವರ ವಿರುಧ್ಧ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾಮಗಾರಿ ಟೆಂಡರ್ ನೀಡುವ ಸಮಯದಲ್ಲಿ ಅಧಿಕಾರಿಗಳು ತಾರತ್ಯಮ ತೋರುತ್ತಿದ್ದು, ಇದರಿಂದ ಸಾಮಾನ್ಯ ಜನರು ಟೆಂಡರ್‍ನಲ್ಲಿ ಭಾಗವಹಿಸುವುದು ಸಾಧ್ಯವಾಗುತ್ತಿಲ.್ಲ ಹೀಗೆ ಸುಳ್ಳು ಪ್ರಮಾಣ ಪತ್ರ ನೀಡಿದವರಿಗೆ ಟೆಂಡರ್ ನೀಡುವುದಾದರೆ ಮೀಸಲಾತಿ ಯಾಕೆ ಬೇಕು ಎಂದು ಅಧಿಕಾರಿಗಳಲ್ಲಿ ಜನ ಸಾಮಾನ್ಯರು ಪ್ರಶ್ನಿಸಿದರು.

ಧಾರ್ಮಿಕ ದತ್ತಿ ಇಲಾಖೆಯಲ್ಲಿ ಎಸ್.ಸಿ. ಮತ್ತು ಎಸ್.ಟಿ ಸಮುದಾಯದವರಿಗೆ ಯಾವುದೇ ಉದ್ಯೋಗವಕಾಶಗಳು ಸಿಗುತ್ತಿಲ್ಲ, ಅ ಇಲಾಖೆಯಲ್ಲಿ ತಾರತಮ್ಯ ನಡೆಯುತ್ತಿದೆ. ಕೆಳಹಂತದ ಕೆಲಸಗಳಿಗೆ ಮಾತ್ರ ನೇಮಕ ಮಾಡುಕೊಳ್ಳುತ್ತಿದ್ದಾರೆ ಎಂದು ದಲಿತ ಮುಖಂಡರು ತಿಳಿಸಿದರು.

ಈ ಸಭೆಯಲ್ಲಿ ಆಪರ ಜಿಲ್ಲಾಧಿಕಾರಿ ಎಮ್.ಜೆ ರೂಪಾ, ಸಹಾಯಕ ಆಯುಕ್ತ ಮದನ್ ಮೋಹನ್, ಮ.ನ.ಪಾ ಉಪ ಆಯುಕ್ತ ಸಂತೋಷ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಬಿ. ಯೋಗೀಶ್, ಮಂಗಳೂರು ಎಸ್.ಪಿ. ಲಕ್ಷ್ಮೀ ಪ್ರಸಾದ್, ಐ. ಎ.ಎಸ್. ಪ್ರೋಬೆಫನರ್ ರಾಹುಲ್ ಸಿಂಧೆ, ಪುತ್ತೂರು ಎ.ಸಿ ಯತೀಶ್, ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಮತ್ತು ಮತ್ತಿತರರು ಉಪಸ್ಥಿತ್ತರಿದರು.


Spread the love

Exit mobile version