ಕಾರ್ಕಳ : ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ಶೀಘ್ರ ಸ್ಪಂದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಸೂಚನೆ ನೀಡಿದ್ದಾರೆ.
ಅವರು ಕಾರ್ಕಳದ ಪ್ರವಾಸಿ ಮಂದಿರದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿ ಮಾತನಾಡಿ ಕಡತಗಳನ್ನು ಬಾಕಿಯಿರಿಸಿ ಜನರನ್ನು ಸತಾಯಿಸಿದೆ, ಸರಕಾರದಿಂದ ದೊರಕುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಕ್ಲಪ್ತ ಸಮಯದಲ್ಲಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ನಡೆಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ಮುಂದಿನ ಸಭೆಯ ಒಳಗೆ ವಿಲೇವಾರಿ ಮಾಡುವಂತೆ ಆದೇಶಿಸಿದರು.
94 ಸಿ ಜಮೀನಿನ ಬಗ್ಗೆ ಸರಕಾರ ಈ ಹಿಂದೆ ನಿರ್ಧರಿಸಿದ ಕರ ಮೌಲ್ಯ ಹೆಚ್ಚಾಗಿದ್ದು ಮರು ಪರೀಶೀಲನೆ ನಡೆಸಿ 3 ಸಾವಿರದಿಂದ 5 ಸಾವಿರ ರೂ ವರೆಗೆ ನಿರ್ಥರಿಸಿದ್ದು, ಪಜಾತಿ.ಪಪಂಗಡದವರಿಗೆ ವಿಶೇಷ ರಿಯಾಯತಿ ನೀಡಿದೆ. ತಾಲೂಕು ಕಚೇರಿಗಳಿಗೆ ಈ ಆದೇಶ ಬರುವ ತನಕ ಫಲಾನುಭವಿಗಳು ಕರ ಮೌಲ್ಯ ಪಾವತಿಸದೆ ಕಾಯಬೇಕು ಎಂದು ಸಚಿವರು ಸೂಚನೆ ನೀಡಿದರು.
ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅವೆಲಿನ್ ಆರ್ ಲೂಯಿಸ್ ಉಪ ತಹಶೀಲ್ದಾರ ಮಾಧವ ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 25 ನೇ ಪುಣ್ಯತಿಥಿ ಆಚರಣೆ
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 25 ನೇ ಪುಣ್ಯತಿಥಿ ಪ್ರಯುಕ್ತ ಕಾರ್ಕಳ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಯುವ ಕಾಂಗ್ರೆಸ್ ವಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಹಾಲು, ಹಣ್ಣು ಹಂಪಲು ವಿತರಿಸಿದರು.
ಮಾಜಿ ಶಾಸಕ ಎಚ್ ಗೋಪಾಲ ಭಂಡಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ಮಾಳ ಗ್ರಾಪಂ ಅಧ್ಯಕ್ಷ ಅಜಿತ್ ಹೆಗ್ಡೆ, ಪುರಸಭೆ ಸದಸ್ಯರಾದ ಸುಭಿತ್ ಕುಮಾರ್, ಎನ್ ವಂದನಾ ಜತ್ತನ್ನ, ತಾಪಂ ಸದಸ್ಯ ಸುಧಾಕರ್ ಶೆಟ್ಟಿ, ಅಸ್ಲಾಂ, ವಿಘ್ನೇಶ್ ಕಿಣಿ, ನಾಗೇಶ್ ಮತ್ತಿತರು ಉಪಸ್ಥಿತರಿದ್ದರು,