ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಲೈಂಗಿಕ ಕಿರುಕುಳ ಆರೋಪಿ ಪೇದೆಗೆ ಡಿಸಿಪಿ ಅಣ್ಣಾಮಲೈ​ರಿಂದ ಗೇಟ್​ ಪಾಸ್

Spread the love

ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಲೈಂಗಿಕ ಕಿರುಕುಳ ಆರೋಪಿ ಪೇದೆಗೆ ಡಿಸಿಪಿ ಅಣ್ಣಾಮಲೈ​ರಿಂದ ಗೇಟ್​ ಪಾಸ್

ಬೆಂಗಳೂರು: ಖಡಕ್​ ಅಧಿಕಾರಿ ಅಣ್ಣಾಮಲೈ ಅವರು ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಪೇದೆಗೆ ಗೇಟ್​ ಪಾಸ್​ ನೀಡಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿರುವ ಅಣ್ಣಾಮಲೈ ಅವರು ಗಿರಿನಗರ ಠಾಣೆಯ ಪೇದೆ ಸುದರ್ಶನ ಆಸ್ಕಿನ್​ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ದಂತ ವೈದ್ಯೆಯೊಬ್ಬರು ಸುದರ್ಶನ್​ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೊದಲಿಗೆ ಹಲ್ಲು ನೋವಿನ ವಿಚಾರವಾಗಿ ವೈದ್ಯಕೀಯ ಚಿಕಿತ್ಸೆಗೆ ವೈದ್ಯೆಯನ್ನ ಸುದರ್ಶನ್​ ಭೇಟಿಯಾಗಿದ್ದ. ಈ ವೇಳೆ ಇಬ್ಬರ ನಡುವೆ ನಂಬರ್​ ವಿನಿಮಯವಾಗಿತ್ತು. ಮೊದಲಿಗೆ ಮಾಮೂಲಿಯಂತಿದ್ದ ಸುದರ್ಶನ್ ನಂತರ ಪೋನಿನಲ್ಲಿ ಅಸಭ್ಯವಾಗಿ ಮಾತಾಡಲು ಶುರು ಮಾಡಿದ್ದ ಎಂದು ವೈದ್ಯೆ ಆರೋಪಿಸಿದ್ದಾರೆ.

ಮನೆ ಬದಲಾಯಿಸಿದರೂ ಪೋನ್ ಮಾಡುವುದನ್ನು ಬಿಡದ ಸುದರ್ಶನ್, ಸಲುಗೆಯಿಂದ ವರ್ತಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ. ಈ ಹಿನ್ನಲೆ ಇದೇ ತಿಂಗಳ 6ರಂದು ಜ್ಞಾನ ಭಾರತಿ ಠಾಣೆಗೆ ದೂರು ನೀಡಿದ್ದೆ. ಆಗ ಸುದರ್ಶನ್​ನಿಂದ ಮುಚ್ಚಳಿಕೆ ಬರೆಯಿಸಿಕೊಂಡು ರಾಜಿ ಸಂಧಾನ ಮಾಡಲಾಗಿತ್ತು. ಆದರೆ, ಪುನಃ ಕರೆ ಮಾಡಿ ಬೆದರಿಕೆ ಹಾಕುವುದು ಮುಂದುವರಿಸಿದ್ದ. ಹೀಗಾಗಿ ಜ್ಞಾನ ಭಾರತಿ ಠಾಣೆಯಲ್ಲಿ ಸೆಕ್ಷನ್ 354, 506 ಅಡಿಯಲ್ಲಿ ಮತ್ತೆ ಪ್ರಕರಣ ದಾಖಲಿಸಲಾಯಿತು ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.


Spread the love