ಅನಧಿಕೃತ ಒತ್ತುವರಿ ತೆರವು ; ಮುಂದುವರೆದ ಮೇಯರ್ ಕವಿತಾ ಸನೀಲ್ ಕಾರ್ಯಾಚರಣೆ
ಮಂಗಳೂರು: ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪೂರಕ ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನೀಲ್ ಶುಕ್ರವಾರ ಬೆಳಿಗ್ಗೆ ಆರಂಭಿಸಿದ್ದಾರೆ.
ನಗರದ ರಾವ್ ಆ್ಯಂಡ್ ರಾವ್ ರಸ್ತೆಯ ಮಿಷನ್ ಸ್ಟ್ರೀಟ್ ಬಳಿ ಪಾರ್ಕಿಂಗ್ ಅತಿಕ್ರಮಣ ತೆರವು ಕಾರ್ಯಾಚರಣೆ ಮೇಯರ್ ನೇತೃತ್ವದಲ್ಲಿ ಆರಂಭವಾಗಿದ್ದು, ರಸ್ತೆಯ ಬದಿಯಲ್ಲಿ ಜಾಗವನ್ನು ಅತಿಕ್ರಮಿಸಿ ಕಟ್ಟಿದ ಕಟ್ಟಡ ಹಾಗೂ ಇತರ ಅತಿಕ್ರಮಿಸಿದ ಜಾಗಗಳನ್ನು ಜೆಸಿಬಿ ಮೂಲಕ ತೆರವುಗೋಳಿಸಲಾಯಿತು. ಅನಧಿಕೃತ, ಪಾರ್ಕಿಂಗ್, ಗೂಡಂಗಡಿಳನ್ನೂ ಕೂಡ ಈ ಸಂದರ್ಭದಲ್ಲಿ ತೆರವುಗೊಳೀಸಲಾಯಿತು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನೀಲ್ ನಾವು ಅನಧಿಕೃತವಾಗಿ ಸಂಚಾರಕ್ಕ ತೊಡಕಾಗುವ ರೀತಿಯಲ್ಲಿ ಕಟ್ಟಿದ ಕಟ್ಟಡ ಹಾಗೂ ಇತರ ಗೂಡಂಗಡಿಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಈ ಭಾಗದಲ್ಲಿ ಪಾದಾಚಾರಿಗಳು, ಹಾಗೂ ವಾಹನಗಳು ಸಂಚರಿಸಲು ಅನಧಿಕೃತ ಒತ್ತುವರಿಯಿಂದಾಗಿ ಸಮಸ್ಯೆಗಳು ಉಂಟಾಗಿದ್ದವು, ಮನಾಪಾಗೆ ಒಮ್ಮೆ ದಾನಪತ್ರ ನೀಡಿದ ಬಳಿಕ ಕಟ್ಟಡದಾರರು ಮತ್ತೆ ಆ ಸ್ಥಳವನ್ನು ಒತ್ತುವರಿ ಮಾಡುವುದು ಸರಿಯಲ್ಲ ಅವರು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದರು.