ಅನಧಿಕೃತ ಪಾರ್ಕಿಂಗ್ ವಿರುದ್ದ ಕಾರ್ಯಚರಣೆಗೆ ಮೇಯರ್ ಕವಿತಾ ಸನೀಲ್ ನಗರ ದರ್ಶನ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಸಂಚಾರಿ ಪೋಲಿಸರ ಜೋತೆಗೆ ಸೇರಿಕೊಂಡು ನಗರದಲ್ಲಿ ಸಂಚಾರಿ ಸಮಸ್ಯೆಗಳನ್ನು ತಿಳಿಯುವ ಸಲುವಾರಿ ಪಿವಿಎಸ್ ಸರ್ಕಲ್ ಬಳಿಯಿಂದ ಸ್ಟೇಟ್ ಬ್ಯಾಂಕ್ ತನಕ ಬುಧವಾರ ನಗರ ದರ್ಶನ ನಡೆಸಿದರು. ಈವೇಳೆ ಸನೀಲ್ ನಗರದಲ್ಲಿನ ಸಮಸ್ಯೆಗಳ ಮಾಹಿತಿಯನ್ನು ಪಡೆದುಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರತಿ ತಿಂಗಳು ನಗರದಲ್ಲಿನ ಸಮಸ್ಯೆಗಳನ್ನು ಅರಿಯುವ ಸಲುವಾಗಿ ನಗರ ದರ್ಶನವನ್ನು ಹಮ್ಮಿಕೊಂಡಿದ್ದು ಜನರ ಸಮಸ್ಯೆಗಳನ್ನು ಅರಿಯಲು ಇದು ಸಹಕಾರಿಯಾಗಲಿದೆ. ಟ್ರಾಫಿಕ್ ಸಂಬಂಧಿಸಿದ ಸಭೆಯಲ್ಲಿ ಪ್ರತಿಬಾರಿ ನಗರದ ಸಂಚಾರದ ಕುರಿತು ದೂರುಗಳು ಬರುತ್ತಿದ್ದು ಇದನ್ನು ನಿಯಂತ್ರಿಸಲು ಪ್ರಯತ್ನಿಸಲಾಗುವುದು ಎಂದರು. ನಗರದಲ್ಲಿನ ಅನಧಿಕೃತ ಗೂಡಂಗಡಿಗಳನ್ನು ತೆರವುಗಳಿಸಲು ನಿರ್ಧರಿಸಿದ್ದು, ಬೀದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕಾ ವ್ಯವಸ್ಥೆಯನ್ನು ಮಾಡಿದ್ದು ಅಲ್ಲಿ ಅವರು ವ್ಯಾಪಾರ ಮಾಡಲು ತಯಾರಿಲ್ಲ. ಸೂಕ್ತ ಸ್ಥಳಾವಕಾಶ ನೀಡಿದ ಮೇಲೂ ಅಲ್ಲಿ ಅವರು ವ್ಯಾಪಾರ ಮಾಡದೇ ಇರುವುದು ಸರಿಯಲ್ಲ ನಗರದ ಸಂಚಾರ ಸಮಸ್ಯೆ ನಿಯಂತ್ರಿಸಲು ಅವರೂ ಕೂಡ ಪಾಲಿಕೆಯೊಂದಿಗೆ ಸಹಕರಿಸಬೇಕಾಗಿದೆ. ಬೀದಿ ವ್ಯಾಪಾರಿಗಳು ರಸ್ತೆಯ ಫುಟ್ ಪಾತ್ ಗಳನ್ನು ಅತಿಕ್ರಮಿಸಿದರ ಪರಿಣಾಮ ಜನರಿಗೆ ನಡೆದಾಡಲು ಕಷ್ಟವಾಗುತ್ತಿದೆ. ನನ್ನ ಅವಧಿಯಲ್ಲಿ ನಗರದರ್ಶನವನ್ನು ಮುಂದುವರೆಸುವುದರೊಂದಿಗೆ ಅನಧಿಕೃತ ಪಾರ್ಕಿಂಗ್, ಅನಧಿಕೃತ ಗೂಡಂಗಡಿಗಳ ತೆರವು ನಿರಂತರವಾಗಿ ನಡೆಸಲಾಗುವುದು ಅಲ್ಲದೆ ಯಾರ ಒತ್ತಡಕ್ಕೂ ಮಣಿಯದೆ ಪಾಲಿಕೆ ಕೆಲಸ ಮಾಡಲಿದೆ ಎಂದರು.
ಗೂಡಂಗಡಿದಾರು ಅತಿಕ್ರಮಿಸಿದ ರಸ್ತೆಯ ಜಾಗವನ್ನು ಕೂಡಲೇ ತೆರವುಗೊಳಿಸುವಂತೆ ಮೇಯರ್ ಈ ವೇಳೆ ಎಚ್ಚರಿಕೆ ನೀಡಿದರು ಅಲ್ಲದೆ ಅನಧಿಕೃತವಾಗಿ ವ್ಯಾಪಾರ ಮಾಡುವವರ ವಿರುದ್ದ ಸೂಕ್ತ ಕ್ರಮಕ್ಕೆ ಸೂಚಿಸಿದರು.
ಈ ವೇಳೆ ಡಿಸಿಪಿ ಹನುಮಂತರಾಯ, ಎಸಿಪಿ ತಿಲಕಚಂದ್ರ, ಟ್ರಾಫಿಕ್ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್, ಪಾಲಿಕೆಯ ಅಧಿಕಾರಿಗಳು ಉಪಸ್ಥಿತತರಿದ್ದರು.