ಅನಾಥ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಕೆ

Spread the love

ಅನಾಥ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಕೆ

ಉಡುಪಿ: ಅನಾಥ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಕುಂದಾಪುರ ನಮ್ಮಭೂಮಿಯ ರಾಮಾಂಜಿ ಸೋಮವಾರ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನಿಕಟಪೂರ್ವ ಅಧ್ಯಕ್ಷ ಕೆ.ಜಯ ಪ್ರಕಾಶ್ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿದರು.

ಸಮಾಜದಲ್ಲಿ ಅನಾಥರಾಗಿರುವ ಮಕ್ಕಳು ಜಾತಿ ವಿಷಯದಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಜಂಟಿಯಾಗಿ ನೀಡಲಾಗುತ್ತದೆ. ಶಿಕ್ಷಣ, ಉದ್ಯೋಗ ಸಹಿತ ಹಲವಾರು ಅಗತ್ಯಗಳಿಗೆ ಜಾತಿ ಪ್ರಮಾಣ ಪತ್ರ ಅತ್ಯಗತ್ಯವಾಗಿದೆ. ಆದರೆ ಅನಾಥ ಮಕ್ಕಳಿಗೆ ತಮ್ಮ ಹುಟ್ಟಿದ ಮೂಲವೇ ಗೊತ್ತಿರದ ಕಾರಣ ಕನಿಷ್ಠ ಜಾತಿಯ ಕಲ್ಪನೆಗೆ ಆಧಾರವೇ ಇಲ್ಲವಾಗಿದೆಂದು ಮನವಿಯಲ್ಲಿ ತಿಳಿಸಲಾಗಿದೆ.

ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ ತಹಶೀಲ್ದಾರ್ ಸಹಿತ ಸಂಬಂಧ ಪಟ್ಟ ಅಧಿಕಾರಿಗಳು ಪೂರಕ ದಾಖಲೆ ಕೇಳುತ್ತಾರೆ. ಅವುಗಳನ್ನು ಒದಗಿಸಲು ಅನಾಥ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಆದುದರಿಂದ ಅನಾಥ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ಒದಗಿಸಲು ಸರಕಾರದ ಮಟ್ಟದಲ್ಲಿ ವಿಶೇಷ ಕ್ರಮವನ್ನು ತೆಗೆದು ಕೊಳ್ಳಬೇಕು. ಅನಾಥ ಮಕ್ಕಳ ವಸತಿ, ಶಿಕ್ಷಣ, ಉದ್ಯೋಗ, ಮೀಸಲಾತಿ ಮೊದಲಾದ ವಿಷಯಗಳ ಕುರಿತು ಶಾಸನಾತ್ಮಕ ಕ್ರಮಕೈಗೊಳ್ಳಲು ಸರಕಾರ ಸಮಿತಿ ಯನ್ನು ರಚಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.


Spread the love