ಅನಾಥ ಮಹಿಳೆಗೆ ಮದರ್ ತೆರೆಸಾ ಆಶ್ರಮದಲ್ಲಿ ನೆಲೆ ಕಲ್ಪಿಸಿದ ಮ್ಯಾಂಗಲೋರಿಯನ್ ತಂಡ!

Spread the love

ಅನಾಥ ಮಹಿಳೆಗೆ ಮದರ್ ತೆರೆಸಾ ಆಶ್ರಮದಲ್ಲಿ ನೆಲೆ ಕಲ್ಪಿಸಿದ ಮ್ಯಾಂಗಲೋರಿಯನ್ ತಂಡ!

ಹೆಸರಾಂತ ಪತ್ರಕರ್ತ ಲೇಖಕ ಕುಶವಂತ್ ಸಿಂಗ್ ಒಮ್ಮೆ ಪುನೀತೆ ಮದರ್ ತೆರೆಸಾ ಅವರ ಬಳಿ ಕೇಳುತ್ತಾರೆ. ತೆರೆಸಾ ನಿನ್ನಲ್ಲಿ ಸಾಯುತ್ತಿರುವವರ ಮತ್ತು ನೋಯುತ್ತಿರುವವರ ಬಗ್ಗೆ ಆಸಕ್ತಿ ಯಾಕೆ, ಯಾವಾಗ ಮೂಡಿತು?

ಅದಕ್ಕೆ ಉತ್ತರಿಸಿದ ಮದರ್ ತೆರೆಸಾ ಅದು ನನ್ನ ಒಳಗಿನ ದನಿ, ದೇವರ ಪ್ರೇರಣೆ, ಸಾಮಾನ್ಯವಾಗಿ ಯಾರಿಗೂ ಸಾಯುತ್ತಿರುವ ವೃದ್ಧರು, ನೋವಿನಿಂದ ಒದ್ದಾಡುತ್ತಿರುವ ರೋಗಿಗಳು, ಅವಮಾನದಿಂದ ಬೇಯುತ್ತಿರುವ ಅಂಗವಿಕಲರು ಇಷ್ಟವಾಗುವುದಿಲ್ಲ. ಹಾಗೆ ಯಾರಿಗೂ ಬೇಡವಾದವರು ನನಗೆ ಬೇಕು, ಯಾಕೆಂದರೆ ಯಾರೂ ಅವರನ್ನು ಪ್ರೀತಿಸುವುದಿಲ್ಲ; ಅವರ ಬಗ್ಗೆ ಕಾಳಜಿ ವಹಿಸಿಕೊಳ್ಳುವುದಿಲ್ಲ..

ಮಂಗಳೂರು: ಕಲ್ಕತ್ತಾದ ಕೊಳಚೆಗೇರಿಗಳ ಹಲವು ಅನಾಥ ಮಹಿಳೆಯರು ಮತ್ತು ಮಕ್ಕಳು ಕೊಳಕು ದೇಹದಲ್ಲಿ ಇದ್ದರೂ ಕೂಡ ಅವರನ್ನು ಮಮತೆಯಿಂದ ಎತ್ತಿಕೊಂಡು ಅವರನ್ನು ಕಣ್ಣಿರು ಒರೆಸಿ ಅವರ ಸುಖದುಃಖಗಳಿಗೆ ಸ್ಪಂದಿಸುವ ಆಮ್ಮ ಆಗಿದ್ದರು. ಅವರು ವಿಶ್ವದಾದ್ಯಂತ ಆರಂಭಿಸಿ ಸೇವಾ ಸಂಸ್ಥೆಗಳು ಅನಾಥರ ಬಾಳಿಕೆ ನೆಮ್ಮದಿಯ ತಾಣಗಳಾಗುತ್ತಿವೆ. ಅದರಂತೆ ಮಾದ್ಯಮದೊಂದಿಗೆ ಸೇವೆಯ ಕನಸನ್ನು ಹೊತ್ತ ಮ್ಯಾಂಗಲೋರಿಯನ್ ಸುದ್ದಿ ತಂಡ ಅನಾಥವಾಗಿ ರಸ್ತೆಯಲ್ಲಿ ಬಿದ್ದ ಅನಾಥ ಮಹಿಳೆಯೋರ್ವರನ್ನು ಮದರ್ ತೆರೆಸಾ ಆಶ್ರಮಕ್ಕೆ ಸೇರಿಸಿ, ಮಹಿಳೆಗೆ ನೆಲೆ ಕಲ್ಪಿಸುವುದರೊಂದಿಗೆ ಮಾನವೀಯತೆಯನ್ನು ಮೆರೆದಿದೆ.

image003mother-theresa-asha-20160731-003 image002mother-theresa-asha-20160731-002 image001mother-theresa-asha-20160731-001 image002asha-mother-teresa-home-20160730-002 image003asha-mother-teresa-home-20160730-003 asha-mother-theresa-20160731 image011asha-mother-teresa-home-20160730-011 image012asha-mother-teresa-home-20160730-012 image013asha-mother-teresa-home-20160730-013

ಜುಲೈ 30 ರಂದು ಸಾಮಾಜಿಕ ಕಾರ್ಯಕರ್ತ ಆಲ್ವಿನ್ ಎಂಬವರಿಂದ ಮ್ಯಾಂಗಲೋರಿಯನ್ ತಂಡದ ಸದಸ್ಯರೊಬ್ಬರಿಗೆ ಫೋನ್ ಕರೆ  ಮಾಡಿ ಮಹಿಳೆಯೋರ್ವರು ನಡೆಯಲು ಸಾಧ್ಯವಾಗದೆ ವಾಕರ್ ನೊಂದಿಗೆ ಬಿಗ್ ಬಜಾರ್ ಬಳಿಯ ರಸ್ತೆಯ ಬದಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಿದ ತಕ್ಷಣ ಮ್ಯಾಂಗಲೋರಿಯನ್ ತಂಡ ಸ್ಥಳಕ್ಕೆ ಧಾವಿಸುತ್ತದೆ. ಇದೇ ವೇಳೆ ಆಲ್ವಿನ್ ಅವರು 108 ಅಂಬುಲೆನ್ಸ್ ಹಾಗೂ ಉರ್ವ ಪೋಲಿಸರಿಗೆ ಮಾಹಿತಿ ನೀಡುತ್ತಾರೆ.

ಮಹಿಳೆಯ ಕುರಿತು ಮಾಹಿತಿ ಸಂಗ್ರಹಿಸಿದ ಮ್ಯಾಂಗಲೋರಿಯನ್ ತಂಡಕ್ಕೆ ಮಹಿಳೆಯ ಕರುಣಾಜನಕ ಕಥೆಯ ಅನಾವರಣವಾಗುತ್ತದೆ. ಆಶಾ (45) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಎರಡು ವರುಷಗಳ ಹಿಂದೆ ಆಕೆಯ ಮಗ ಸ್ಟೇಟ್ ಬ್ಯಾಂಕ್ ಬಳಿ ಕುಸಿದು ಬಿದ್ದು ಸಾವನಪ್ಪಿದ ಸುದ್ದಿ ಆಶಾ ಅವರಿಗೆ ತಲುಪಿತು. ಗಾಬರಿಯಿಂದ ಸ್ಥಳಕ್ಕೆ ಧಾವಿಸುವ ವೇಳೆ ಆಸ್ಪತ್ರೆಯ ಮೆಟ್ಟಿಲಿನಿಂದ ಜಾರಿ ಬಿದ್ದರು. ಆ ವೇಳೆ ಅದರ ನೋವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅಲ್ಲಿಂದ ಹೋದ ಆಕೆಗೆ ಕೆಲಸಮಯದ ಬಳಿಕ ಬೆನ್ನು ನೋವು ಕಾಣಿಸಿಕೊಂಡಿತು. ಕೆಲವು ವರುಷಗಳಲ್ಲಿ ಆಕೆಯ ಪತಿ ಕೂಡ ನಿಧನರಾದರು.

ಆಶಾ ಅವರು ತನ್ನ ಕಥೆಯನ್ನು ಮುಂದುವರೆಸುತ್ತಾ ಒಂದು ವರ್ಷದ ಹಿಂದೆ ವಿಪರೀತ ಬೆನ್ನು ನೋವು ಕಾಣಿಸಕೊಂಡ ಪರಿಣಾಮ ವೈದ್ಯರಲ್ಲಿ ಪರೀಕ್ಷಿಸಿದಾಗ ಶಸ್ತ್ರಚಿಕಿತ್ಸೆ ನಡೆಸುವಂತೆ ಸೂಚಿಸಲಾಯಿತು. ಅದರ ಬಳಿಕ   ವಾಕರ್ ಇಲ್ಲದೆ ನಡೆಯುವುದು ಆಶಾಗೆ ಅಸಾಧ್ಯವಾಯಿತು. ಅವರಿಗೆ ಇನ್ನೋರ್ವ ಮಗಳಿದ್ದು ಮದುವೆಯಾಗಿ ಕಾಸರಗೋಡಿನಲ್ಲಿ ಇದ್ದಾರೆ. ಇತ್ತ ನಡೆಯಲೂ ಶಕ್ತರಾಗದೆ, ಮನೆಯಲ್ಲಿ ನೋಡಿಕೊಳ್ಳುವವರು ಯಾರು ಇಲ್ಲದೆ ಆಶಾ ಅನಾಥರಾಗಿ ರಸ್ತೆಯಲ್ಲಿ ಬೀಳುವ ಪರಿಸ್ಥಿತಿ ಉಂಟಾಯಿತು.

image008asha-mother-teresa-home-20160730-008 image009asha-mother-teresa-home-20160730-009 image010asha-mother-teresa-home-20160730-010 image005asha-mother-teresa-home-20160730-005 image006asha-mother-teresa-home-20160730-006 image007asha-mother-teresa-home-20160730-007 mother-teresa-03072016 (7) image001asha-mother-teresa-home-20160730-001 image004asha-mother-teresa-home-20160730-004

ಸ್ಥಳಕ್ಕೆ ಆಗಮಿಸಿದ 108 ಅಂಬುಲೆನ್ಸ್ ಆಶಾರನ್ನು ಉರ್ವ ಪೋಲಿಸರ ಸೂಚನೆಯಂತೆ ಮದರ್ ತೆರೆಸಾ ಆಶ್ರಮಕ್ಕೆ ಸ್ಥಳಾಂತರಿಸಲಾಯಿತು. ಮದರ್ ತೆರೆಸಾ ಆಶ್ರಮದ ಧರ್ಮಭಗಿನಿಯರು ಆಶಾರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸುವುದರೊಂದಿಗೆ ಉತ್ತಮ ವಾಸ್ತವ್ಯ ನೀಡುವ ಭರವಸೆಯನ್ನು ಕೂಡ ನೀಡಿದ್ದಾರೆ.

ಅನಾಥಳಾಗಿ ರಸ್ತೆಯಲ್ಲಿ ಬಿದ್ದ ತನ್ನನ್ನು ಸೂಕ್ತ ವಸತಿ ವ್ಯವಸ್ಥೆ ಮಾಡಿದ ಮ್ಯಾಂಗಲೋರಿಯನ್ ತಂಡ ಹಾಗೂ ಸಮಾಜ ಸೇವಕ ಆಲ್ವಿನ್ ಅವರ ಮಾನವೀಯ ಗುಣಕ್ಕೆ ಆಶಾ ಕಣ್ಣಾಲಿಗಳು ತುಂಬಿಕೊಂಡು ಧನ್ಯವಾದ ಅರ್ಪಿಸಿದರು.

ನಾವು ಮಾಡುವ ಕೆಲಸ ಇತರರಿಗೆ ಮಾದರಿಯಾಗುವಂತಿರಬೇಕು ಎನ್ನುವ ಮದರ್ ತೆರೆಸಾ ಮಾತಿನಂತೆ ಮ್ಯಾಂಗಲೋರಿಯನ್ ಮಾಧ್ಯಮ ತಂಡದ ಕೆಲಸ ಪ್ರತಿಯೊಬ್ಬರಿಗೂ ಮಾದರಿ ಎನ್ನುತ್ತಾರೆ ಸಾರ್ವಜನಿಕರು.


Spread the love