ಅನಿವಾಸಿ ಕನ್ನಡಿಗರನ್ನು ಕರೆತಂದು ಸೂಕ್ತ ವ್ಯವಸ್ಥೆ ಕಲ್ಪಿಸದೆ ಸತಾಯಿಸಿದ ದ.ಕ ಜಿಲ್ಲಾಡಳಿತ: ಎಸ್.ಡಿ.ಪಿ.ಐ ಆರೋಪ
ಮಂಗಳೂರು:- ಕೊರೋನಾ ಲಾಕ್ ಡೌನ್ ನಂತರ ಮೊದಲ ಬಾರಿಗೆ ಅನಿವಾಸಿ ಕನ್ನಡಿಗರನ್ನು ಕರೆತಂದ ಮೊದಲ ವಿಮಾನದ ಪ್ರಯಾಣಿಕರನ್ನೇ ಸೂಕ್ತ ವ್ಯವಸ್ಥೆ ಕಲ್ಪಿಸದೆ ಸತಾಯಿಸಿದ ಜಿಲ್ಲಾಡಳಿತದ ಕಾರ್ಯವೈಖರಿಯು ಖಂಡನೀಯವಾಗಿದೆ.
ಈ ಮೊದಲೇ ಜಿಲ್ಲಾಡಳಿತ 17 ಶುಲ್ಕ ಸಹಿತ ಹೋಟೆಲ್ ಲಾಡ್ಜ್ ಗಳನ್ನು, ಮತ್ತು ಒಂಬತ್ತು ಸಂಘ ಸಂಸ್ಥೆಗಳು ಅಧೀನದಲ್ಲಿರುವ ಕಟ್ಟಡಗಳಲ್ಲಿ ಕ್ವಾರಂಟೈನ್ಗೆ ಅನುಮತಿ ನೀಡಿ ದೃಡೀಕರಿಸಿತ್ತು. ಅದರಲ್ಲಿ ಅಲ್ ಮದೀನ ಮಂಜನಾಡಿ ಮತ್ತು ದಾರುಲ್ ಇರ್ಶಾದ್ ಮಾಣಿಯಲ್ಲಿ ಉಚಿತವಾಗಿ ಕ್ವಾರಂಟೈನ್ ವ್ಯವಸ್ಥೆ ಮಾಡಿಕೊಡುವುದೆಂದು ಅದರ ಪಧಾದಿಕರಿಗಳು ಸ್ಪಷ್ಟ ಪಡಿಸಿದ್ದರು.
176 ಪ್ರಯಾಣಿಕರಲ್ಲಿ 33 ಮಂದಿಯನ್ನು ಹೊರತುಪಡಿಸಿ ಉಳಿದವರೆಲ್ಲರು ಲಾಡ್ಜ್ ಗಳನ್ನು ಬುಕ್ ಮಾಡಿದ್ದರು, ಉಳಿದವರಲ್ಲಿ ಹೆಚ್ಚಿನ ಮಂದಿ ವಿಸಿಟ್ ವೀಸಾದಲ್ಲಿ ತೆರಳಿದವರೆ ಹೆಚ್ಚಾಗಿರುವುದರಿಂದ ತಮ್ಮಲ್ಲಿ ಹಣವಿಲ್ಲದೆ ಇರುವುದರಿಂದ ಉಚಿತ ಕ್ವಾರಂಟೈನ್ ಕೇಂದ್ರಗಳಿಗೆ ತೆರಳುವೆವು ಎಂದು ಮೊದಲೇ ತಿಳಿಸಿದ್ದರು. ಆದರೆ ಮಂಜನಾಡಿ ಮತ್ತು ಮಾಣಿಯ ಸಂಸ್ಥೆಗಳಿಗೆ ಜಿಲ್ಲಾಡಳಿತ ನೇಮಕಗೊಳಿಸಿಧ್ದ ಆಡಳಿತಾಧಿಕರಿಗಳು ಅಲ್ಲಿಗೆ ವೈದ್ಯಕೀಯ ವ್ಯವಸ್ಥೆಯನ್ನು ಮಾಡಲು ವಿಫಲರಾಗಿದ್ದ ಕಾರಣ ಉಚಿತ ಕ್ವಾರಂಟೈನ್ ಗೆ ಹೋಗುವುದಾಗಿ ತಿಳಿಸಿದ್ದ ಪ್ರಯಾಣಿಕರನ್ನು ಕೂಡ 2000ರೂ. ಪಾವತಿಸಿ ಹೋಟೆಲ್ ರೂಂ ಗಳಿಗೆ ತೆರಳಲು ಬಲವಂತ ಪಡಿಸಿರುವುದು ನಾಚಿಗೇಡಿನ ವಿಚಾರವಾಗಿದೆ.
ಕೋವಿಡ್-19 ಲಾಕ್ ಡೌನ್ ನಡುವೆ ವಿದೇಶದಿಂದ ಬರುವ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದ್ದ ಜಿಲ್ಲಾಡಳಿತ, ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿ ಮಕ್ಕಳು ವೃದ್ದರು ಹಾಗೂ ಗರ್ಭಿಣಿ ಪ್ರಯಾಣಿಕರನ್ನು ಸತಾಯಿಸಿದಲ್ಲದೇ, ಲಗೇಜ್ ಗಳನ್ನು ತೆಗೆಯಲು ಸಿಬ್ಬಂದಿಗಳನ್ನು ನೇಮಿಸದೇ ಮತ್ತು ಪ್ರಸ್ತುತ ಯಾವುದೇ ಹೋಟೆಲ್ಗಳ ವ್ಯವಸ್ಥೆ ಇಲ್ಲ ಎಂಬ ಅರಿವಿದ್ದರು ರಾತ್ರಿ ಮೂರು ಗಂಟೆಯವರೆಗು ಅನ್ನಾಹಾರದ ವ್ಯವಸ್ಥೆ ಕೂಡ ಮಾಡದೇ ನಿರ್ಲಕ್ಷ್ಯ ವಹಿಸಿ ದ.ಕ ಜಿಲ್ಲಾಡಳಿತದ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮಾತ್ರವಲ್ಲದೆ ವಿದೇಶದಿಂದ ಬಂದ ಪ್ರಯಾಣಿಕರಿಗೆ ಸರಕಾರದ ವತಿಯಿಂದಲೇ ಕೇರಳ ಸರ್ಕಾರದ ಮಾದರಿಯಲ್ಲಿ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಜಿಲ್ಲಾಡಳಿತ ಪ್ರತೀ ದಿನದ ಕ್ವಾರಂಟೈನ್ಗೆ 2000 ರುಪಾಯಿ ಶುಲ್ಕ ವಿಧಿಸಿದ್ದು ವಿಪರ್ಯಾಸವಾಗಿದೆ. ಅದೇ ರೀತಿಯಲ್ಲಿ ಉಚಿತವಾಗಿ ಕ್ವಾರಂಟೈನ್ ವ್ಯವಸ್ಥೆ ನೀಡುವ ಬಗ್ಗೆ ಎರಡು ಇಸ್ಲಾಮಿಕ್ ಸರಕಾರೇತರ ಸಂಸ್ಥೆಗಳು ಮುಂದೆ ಬಂದಿದ್ದರು ಅಲ್ಲಿ ಜಿಲ್ಲಾಡಳಿತ ಯಾವುದೇ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸದೇ ಪ್ರಯಾಣಿಕರ ಬಗ್ಗೆ ಅಸಡ್ಡೆ ತೋರಿದ್ದು ಬಹಳಷ್ಟು ಗಂಭೀರವಾಗಿ ಪರಿಗಣಿಸಬೇಕಿದೆ.
ಪ್ರಥಮ ವಿಮಾನದಲ್ಲೆ ಇಷ್ಟೆಲ್ಲಾ ಆವಾಂತರ, ಗೊಂದಲ, ಅವ್ಯವಸ್ಥೆ, ನಿರ್ಲಕ್ಷ್ಯ ನಡೆದರೆ ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಪ್ರಯಾಣಿಕರು ಆಗಮಿಸುವವರಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಇನ್ನೂ ಮುಂದಾಕ್ಕಾದರು ಅನಿವಾಸಿ ಪ್ರಯಾಣಿಕರಿಗೆ ಸೂಕ್ತ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡಿ ಕೊಡಬೇಕೆಂದು ಎಸ್.ಡಿ.ಪಿ.ಐದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.