ಅನುಭವದ ಮೂಲಕ ಬರುವ ಬುದ್ಧಿವಂತಿಕೆ ಮಾದರಿ ಶಿಕ್ಷಣದ ಲಕ್ಷಣ–ಧರ್ಮಾಧ್ಯಕ್ಷ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ಮಂಗಳೂರು : “ಅಲೋಶಿಯಸ್ ಶಿಕ್ಷಣ ಸಂಸ್ಥೆ ಸಮಾಜಕ್ಕೆಕೊಟ್ಟಕೊಡುಗೆ ,ಉನ್ನತ ಶಿಕ್ಷಣದೊಂದಿಗೆ ಮಾದರಿ ಶಿಕ್ಷಣವನ್ನು ಮೌಲ್ಯಾತ್ಮಕವಾಗಿ ನೀಡಿದ ಸಂಸ್ಥೆ ಇದು. ಅನುಭವದ ಮೂಲಕ ಬರುವ ಬುದ್ಧಿವಂತಿಕೆಯೇ ಮಾದರಿ ಶಿಕ್ಷಣದ ಲಕ್ಷಣ.ಶಿಕ್ಷಣ ಸಂಸ್ಥೆ ಎಂದರೆಆಧುನಿಕ ಸೌಲಭ್ಯಗಳೊಂದಿಗೆ ಮಕ್ಕಳ ಮನಸ್ಸನ್ನು ಅರಳಿಸುವ ಕೇಂದ್ರವಾಗಬೇಕು.ಮನುಷ್ಯಧರ್ಮವೆಂದರೆಎಲ್ಲರೊಂದಿಗೆಕೂಡಿ ಬಾಳುವುದು.ದೇವರ ನಡೆ ಮನುಷ್ಯನ ನುಡಿಯಾಗಬೇಕುಇದನ್ನು ಕಲಿಸುವುದೇ ನಿಜವಾದ ಶಿಕ್ಷಣ” ಎಂದು ಮಂಗಳೂರು ಧರ್ಮಪ್ರಾಂತ್ಯದಧರ್ಮಾಧ್ಯಕ್ಷರಾದ ವಂದನೀಯರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು ಅವರು ಸಂತ ಅಲೋಶಿಯಸ್ ಗೊನ್ಝಾಗ ಸಿಬಿಎಸ್ಇ ಶಾಲೆಯ ನೂತನಕಟ್ಟಡದಉದ್ಘಾಟನಾ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು ಕಳೆದ 139ವರ್ಷಗಳಿಂದ ಮಕ್ಕಳ ಮನಸ್ಸುಕಟ್ಟುವ ಕೆಲಸ ಮಾಡುತ್ತಿದೆಎಂದರು.
ನೂತನಕಟ್ಟಡದಉದ್ಘಾಟನೆಯನ್ನು ನೆರವೇರಿಸಿದ ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರೊವಿನ್ಶಿಯಲ್‍ರೆ| ಡಾ| ಸ್ಟಾನಿಸ್ಲಸ್‍ಡಿಸೋಜಾಎಸ್.ಜೆಇವರುಇಂತಹ ಸುಂದರ ಮತ್ತುಆದರ್ಶ ಮಾದರಿ ಶಿಕ್ಷಣ ಸೌಧವನ್ನು ಸಮಾಜಕ್ಕೆ ಅರ್ಪಿಸಿದ ಮಂಗಳೂರು ಜೆಸ್ವಿಟ್ ಎಜುಕೇಶನ್ ಸೊಸೈಟಿಯನ್ನು ಅಭಿನಂದಿಸಿದರು.ದೇವರುಕೊಟ್ಟ ಶಕ್ತಿಯ ಮೂಲಕ ಈ ಸುಂದರಕಟ್ಟಡಕ್ಕೆರೂಪುಕೊಟ್ಟಎಲ್ಲರಿಗೂಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್‍ರೆ| ಫಾ| ಡೈನೇಶಿಯಸ್ ವಾಝ್ ಎಸ್ಜೆ ಇವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಗೊನ್ಝಾಗಾ ಸಿಬಿಎಸ್ಇ ಶಾಲೆಯ ಮ್ಯಾನೇಜರ್ ಹಾಗೂ ಸಂತ ಅಲೋಶಿಯಸ್ ಪ.ಪೂ ಕಾಲೇಜಿನ ಪ್ರಾಂಶುಪಾಲರಾದರೆ| ಫಾ| ಮೆಲ್ವಿನ್ ಮೆಂಡೋನ್ಸಾ ಎಸ್ಜೆ, ಲಿಟ್ಲ್‍ರಾಕ್‍ಇಂಡಿಯನ್ ಸ್ಕೂಲ್ ಬ್ರಹ್ಮಾವರಇದರ ನಿರ್ದೇಶಕರಾದ ಪ್ರೊ| ಮಾಥ್ಯು ನೈನಾನ್, ನಿಕಟ ಪೂರ್ವರೆಕ್ಟರ್‍ರೆ|ಫಾ| ಡೆನ್ಝಿಲ್ ಲೋಬೊ ಎಸ್ಜೆ, ಮಂಗಳೂರು ಜೆಸ್ವಿಟ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರೆ|ಫಾ| ಡೆನ್ಝಿಲ್ ಲೋಬೊ ಎಸ್ಜೆ ಸಂತ ಅಲೋಶಿಯಸ್ ಹೈಸ್ಕೂಲಿನ ನಿಕಟ ಪೂರ್ವ ಮುಖ್ಯೋಪಾಧ್ಯಾಯರಾದರೆ| ಫಾ| ಜಾನ್ ಬಿ, ಮೆಂಡೋನ್ಸಾ ಎಸ್ಜೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಜೆಸಿಂತಾ ಡಿಕೋಸ್ತಾಕಾರ್ಯಕ್ರಮ ನಿರ್ವಹಿಸಿ ಗೊನ್ಝಾಗಾ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಗ್ರೇಸ್ ನೊರೊನ್ಹಾ ವಂದಿಸಿದರು.