Spread the love
ಅನುಮತಿ ಪಡೆಯದೇ ಪ್ರತಿಭಟನೆ – ಪ್ರಕರಣ ದಾಖಲು
ಮಂಗಳೂರು: ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಆರೋಪದ ಮೇರೆಗೆ ಪಿ ಎಫ್ ಐ, ಸಿ ಎಫ್ ಐ ಮತ್ತು ಎಸ್ ಡಿ ಪಿಐ ಸಂಘಟನೆಗಳ ಮುಖಂಡರ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೈಕಂಬ ಎಂಬಲ್ಲಿ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿರುವುದಾಗಿ, ಈ ವೇಳೆ ಪೊಲೀಸರು ಕಾನೂನು ಉಲ್ಲಂಘನೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿ ಕೂಟವನ್ನು ಪೊಲೀಸರು ಚದುರಿಸಿದ್ದಾರೆ.
ಸಂಘಟನೆಗಳ ಮುಖಂಡರಾದ ಫಾಹದ್, ಇಸಾಕ್ ಶಾಂತಿ ಅಂಗಡಿ, ನೌಶೀರ್, ಅಶ್ರಫ್ ಸೇರಿದಂತೆ ಸುಮಾರು 30 ಮಂದಿ ಅನುಮತಿ ಪಡೆಯದೇ ಧ್ವನಿವರ್ದಕ ಬಳಿಸಿ ಪ್ರತಿಭಟನೆ ನಡೆಸಿದ್ದು ಅವರ ಮೇಲೆ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Spread the love