ಅನುಮಾನದ ಮೇಲೆ ಮದರಸ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಪಿ.ಎಫ್.ಐ ಮಧ್ಯಸ್ಥಿಕೆಯಲ್ಲಿ ಬಿಡುಗಡೆ
ಮಂಗಳೂರು:- ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಉಡುಪಿ ಮತ್ತು ಮಂಗಳೂರಿನಲ್ಲಿ ಮದರಸ ಮತ್ತು ಶಾಲಾ ವ್ಯಾಸಂಗಕ್ಕಾಗಿ ರೈಲಿನ ಮೂಲಕ ಪ್ರಯಾಣಿಸುತ್ತಿದ್ದ 43 ವಿದ್ಯಾರ್ಥಿಗಳನ್ನು ಅನುಮಾನದ ದೃಷ್ಟಿಯಿಂದ ರೈಲ್ವೆ ಪೊಲೀಸರು ವಶಪಡಿಸಿ ವಿಚಾರಣೆ ನಡೆಸಿದ್ದು, ಸುದ್ದಿ ತಿಳಿದ ಕೂಡಲೇ ಪೊಲೀಸ್ ಠಾಣೆಗೆ ಆಗಮಿಸಿದ ಪಾಪ್ಯುಲರ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷ ನವಾಜ್ ಉಳ್ಳಾಲ್ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಮಸೂದ್ ಅಗ್ನಾಡಿ ಅವರ ನೇತೃತ್ವದಲ್ಲಿ ಮಂಗಳೂರಿನ ಕೆ ಎಂ ಮಸೂದ್ ರವರ ಮಾಲಕತ್ವದ ಮದರಸಕ್ಕೆ ವ್ಯಾಸಂಗಕ್ಕೆ ಬಂದಿದ್ದ ಬಿಹಾರ ಮೂಲದ 30 ವಿದ್ಯಾರ್ಥಿಗಳನ್ನು ಅವರ ರಕ್ಷಕರ ನೇತೃತ್ವದಲ್ಲಿ ಗುರುತಿನ ಪತ್ರವನ್ನು ಪರಿಶೀಲಿಸಿ ಮಗಳೂರಿನ ಮದರಸ ಕಳುಹಿಸಲಾಯಿತು.
ಇನ್ನುಳಿದ 13 ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು ಪಶ್ಚಿಮ ಬಂಗಾಳದವರಾಗಿದ್ದು 11 ವಿದ್ಯಾರ್ಥಿಗಳು ಬಿಹಾರದವರಾಗಿದ್ದರು ಈವರೆಲ್ಲರೂ 5 ರಿಂದ 8 ವರ್ಷದ ಒಳಗಿನ ಸಣ್ಣ ಮಕ್ಕಳಾಗಿದ್ದು ಉಡುಪಿಯ ಮದರಸ ಹೋಗಬೇಕಾಗಿದ್ದ ಇವರು ತಪ್ಪಿ ಮಂಗಳೂರಿನಲ್ಲಿ ಇಳಿದಿದ್ದರು ಇವರಲ್ಲಿ 8 ಮಕ್ಕಳ ಬಳಿ ಆಧಾರ್ ಕಾರ್ಡ್ ಇದ್ದು ಉಳಿದವರ ಬಳಿ ಇತರ ಗುರುತಿನ ಚೀಟಿ ಇತ್ತು, ಕೊನೆಗೆ ಉಡುಪಿಯ ಮದರಸವನ್ನು ಸಂಪರ್ಕಿಸಿ ಅವರು ಬರುವವರೆಗೂ ಬೋಂದೆಲ್ ನ ಶಿಶು ಕಲ್ಯಾಣ ಮಂದಿರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.
ಪಾಪ್ಯುಲರ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷ ನವಾಜ್ ಉಳ್ಳಾಲ್ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಮಸೂದ್ ಅಗ್ನಾಡಿಯವರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ವ್ಯವಸ್ಥೆಯನ್ನು ಮಾಡಿರುತ್ತಾರೆ