Home Uncategorized ಅನ್ನಭಾಗ್ಯದ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ- ಸೊತ್ತು ವಶ

ಅನ್ನಭಾಗ್ಯದ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ- ಸೊತ್ತು ವಶ

Spread the love

ಅನ್ನಭಾಗ್ಯದ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ- ಸೊತ್ತು ವಶ

ಮಂಗಳೂರು: ಸಾರ್ವಜನಿಕ ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಸೊತ್ತನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದಿನಾಂಕ 01-05-2019 ರಂದು ಸಮಯ ಮದ್ಯಾಹ್ನ 1.00 ಗಂಟೆಗೆ ಪಿರ್ಯಾದಿದಾರರಿಗೆ ದೊರೆತ ಖಚಿತ ಮಾಹಿತಿಯಂತೆ ಸಮಯ 2.00 ಗಂಟೆಗೆ ಬಿ ಮೂಡ ಗ್ರಾಮದ ಗೂಡಿನಬಳಿ ಇರುವ ಅಬ್ದುಲ್ ಹಕೀಂ ರವರ ಬಾಬ್ತು ಕಟ್ಟಡದ ಬಳಿ ಹೋಗಿ ನೋಡಿ ದಾಳಿ ನಡೆಸಲಾಗಿ ಸದ್ರಿ ಕಟ್ಟಡದ ಎದುರುಗಡೆ KL 14 V 4970 ನೇ PIK UP ವಾಹನ ಇದ್ದು, ಇದರಲ್ಲಿ ಮೂಟೆಗಳನ್ನು ಹೇರಿದ್ದು ಕಂಡು ಬರುತ್ತದೆ. ಸದ್ರಿ ವಾಹನದಲ್ಲಿದ್ದ ವ್ಯಕ್ತಿಯಾದ ಅಬ್ದುಲ್ ಸಲಾಂ ರವರನ್ನು ವಿಚಾರಿಸಲಾಗಿ ಇದರಲ್ಲಿ ಅಕ್ಕಿ ಇದ್ದು, ಇದನ್ನು ಕೇರಳಕ್ಕೆ ಸಾಗಿಸುತ್ತಿರುವುದಾಗಿದೆ, ಸದ್ರಿ ಅಕ್ಕಿಯನ್ನು ಸಾಗಿಸಲು ಯಾವುದೇ ದಾಖಲಾತಿಗಳು ಇಲ್ಲವೆಂದು ತಿಳಿಸಿದರು. ಆ ವೇಳೆಯಲ್ಲಿ ಅಲ್ಲಿಯೇ ಇದ್ದ ಸದ್ರಿ ಕಟ್ಟಡದ ಮಾಲಿಕರು ನೀಡಿದ ಅಕ್ಕಿಯನ್ನು ಹೇರಿದ್ದಾಗಿ ತಿಳಿಸಿರುತ್ತಾರೆ.

ಅದರಂತೆ ಸದ್ರಿ ಕಟ್ಟಡದ ಮಾಲಿಕರನ್ನು ವಿಚಾರಿಸಲಾಗಿ, ಸದ್ರಿ ಅಕ್ಕಿಯು ಕರ್ನಾಟಕ ರಾಜ್ಯದ ಪಡಿತರ ಅಕ್ಕಿಯಾಗಿರುವುದಾಗಿವುದಾಗಿ ಕಂಡು ಬಂದಿದ್ದು, ಸದ್ರಿ ಮಾಲಿಕರು ಜನರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಅಕ್ಕಿಯನ್ನು ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಅದರಂತೆ ಅಕ್ಕಿ ಮೂಟೆಗಳನ್ನು ನೋಡಲಾಗಿ ವಾಹನದಲ್ಲಿದ್ದ 50 ಕೆಜಿ ತೂಕದ 60 ಚೀಲಗಳು ಹಾಗೂ ಅಂಗಡಿಯಲ್ಲಿದ್ದ ತಲಾ 50 ಕೆ.ಜಿ ತೂಕದ 27 ಬ್ಯಾಗ್ ಗಳು, 40 ಕೆ.ಜಿ ತೂಕದ 28 ಚೀಲಗಳ ಅಕ್ಕಿಯನ್ನು ತೂಗು ಯಂತ್ರ (Every), ಹೋಲಿಗೆ ಯಂತ್ರಗಳು – 02, ಹಾಗೂ KL 14 V 4970 ನೇ PIK UP ವಾಹನವನ್ನು ಪಂಚರ ಸಮಕ್ಷಮ ಸ್ವಾಧಿನ ಪಡಿಸಿಕೊಂಡಿದ್ದು, ಆರೋಪಿಗಳು ಸೇರಿ ಕರ್ನಾಟಕ ಸರ್ಕಾರದ ಪಡಿತರ ಅಕ್ಕಿಯನ್ನು ಅಕ್ರಮ ದಾಸ್ತನು ಇರಿಸಿ, ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳವರೇ ಶ್ರೀನಿವಾಸ ( 58) ಆಹಾರ ನಿರೀಕ್ಷಕರು, ಬಂಟ್ವಾಳ ತಾಲೂಕು ಎಂಬವರ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ : 3,7 ಕರ್ನಾಟಕ ಅವಶ್ಯಕ ವಸ್ತುಗಳ ಕಾಯ್ದೆ 1955, ಹಾಗೂ 4, 5 ಕರ್ನಾಟಕ ಅಗತ್ಯ ವಸ್ತುಗಳ ದರ ಮತ್ತು ದಾಸ್ತನು ನಿರ್ವಹಣಾ ಆದೇಶ 1981 ನಿಯಮ ಮತ್ತು 18 ಕರ್ನಾಟಕ ಅವಶ್ಯಕ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ ನಿಯಂತ್ರಣ ಆದೇಶ 2016 ರಂತೆ ನಿಯಮ ಉಲಂಘನೆ.ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ


Spread the love

Exit mobile version