Home Mangalorean News Kannada News ಅಪಘಾತದಲ್ಲಿ ಬಲಿಯಾಗಿ ಅಂಗದಾನ, ಸಾರ್ಥಕತೆ ಮೆರೆದ ದಾನಿ ;   ಪ್ರಯೋಜನ ಪಡೆದ 5 ರೋಗಿಗಳು

ಅಪಘಾತದಲ್ಲಿ ಬಲಿಯಾಗಿ ಅಂಗದಾನ, ಸಾರ್ಥಕತೆ ಮೆರೆದ ದಾನಿ ;   ಪ್ರಯೋಜನ ಪಡೆದ 5 ರೋಗಿಗಳು

Spread the love

ಅಪಘಾತದಲ್ಲಿ ಬಲಿಯಾಗಿ ಅಂಗದಾನ, ಸಾರ್ಥಕತೆ ಮೆರೆದ ದಾನಿ ;   ಪ್ರಯೋಜನ ಪಡೆದ 5 ರೋಗಿಗಳು

ಮಣಿಪಾಲ 14 ಡಿಸೆಂಬರ್ 2017: ಕುಂದಾಪುರ ಕೋಟಾ ಹೈಸ್ಕೂಲ್ ಬಳಿ ಡಿಸೆಂಬರ್ 12  ರಂದು ಅಪರಾಹ್ನ 12 ಗಂಟೆಗೆ ರಸ್ತೆ ಅಪಘಾತ ಸಂಭವಿಸಿತ್ತು. ಅದರಲ್ಲಿ ಇಬ್ಬರು ಸದಸ್ಯರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನಪ್ಪಿದ್ದು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಸಂಬಂಧಿ 36 ವರ್ಷದ ಕಸ್ತೂರಿ ಪೂಜಾರಿ ಅಫಘಾತದ ಪರಿಣಾಮದಿಂದ ತಲೆ ಗಾಯ, ಸೊಂಟ ಮುರಿತದ ಜೊತೆ ಬಲತೊಡೆ ಮುರಿತವನ್ನು ಹೊಂದಿದ್ದರು.

ಕಸ್ತೂರಿ ಅವರನ್ನು ಡಿಸೆಂಬರ್ 13 ರಂದು ಸಂಜೆ 6 ಗಂಟೆಗೆ ವೈದ್ಯರ ಅಧಿಕೃತ ಸಮಿತಿಯು 1994 ಇಸವಿಯ ನಿಯಮಾವಳಿ ಮತ್ತು ಕಾರ್ಯವಿಧಾನಗಳ ಪ್ರಕಾರ ಮೆದುಳಿನ ಮರಣ ಹೊಂದಿದ ರೋಗಿ ಎಂದು ಘೋಷಿಸಿತು. ಮತ್ತು 2 ನೇ ಘೋಷಣೆಯನ್ನು ಡಿಸೆಂಬರ್ 14 ರಂದು 12 ಗಂಟೆಗೆ ಮಾಡಲಾಯಿತು

ತರುವಾಯ ಕಸ್ತೂರಿ ಪೂಜಾರಿಯ ಕುಟುಂಬದ ಸದಸ್ಯರು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಎರಡು ಕಾರ್ನಿಯ, ಎರಡು ಮೂತ್ರ ಪಿಂಡಗಳು ಮತ್ತು ಯಕೃತ್ತು ಐವರ ಬದುಕನ್ನು ಉಳಿಸಲು ಸಹಾಯ ಮಾಡಿತು.

ಒಂದು ಕಿಡ್ನಿಯನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಗುರುತಿಸದ ರೋಗಿಗೆ, ಎರಡನೇ ಕಿಡ್ನಿಯನ್ನು ಮಂಗಳೂರಿನ ಫಾಧರ್ ಮುಲ್ಲರ್ಸ್ ಆಸ್ಪತ್ರೆಯ ಗುರುತಿಸಿದ ರೋಗಿಗೆ ಮತ್ತು ಯಕೃತ್ತನ್ನು ಎಜೆ ಆಸ್ಪತ್ರೆ ಮಂಗಳೂರು ರೋಗಿಗೆ ಜೀವದಾನ ನೀಡಿದೆ. ಎರಡು ಕಾರ್ನಿಯಗಳನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಗುರುತಿಸಿದ ರೋಗಿಗಳಿಗೆ ಕಸಿ ಮಾಡಲಾಗುವುದು.

ಕೊಯ್ಲು ಮಾಡಿದ ಅಂಗಗಳನ್ನು ಹಸಿರು ಕಾರಿಡಾರ್ ಮೂಲಕ ಮಣಿಪಾಲದಿಂದ ಮಂಗಳೂರಿಗೆ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ವರ್ಗಾಯಿಸಲಾಯಿತು.

 


Spread the love

Exit mobile version