ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ

Spread the love

 ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ

ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪದ ಮೇಲೆ 50 ವರ್ಷ ವಯಸ್ಸಿನ ವ್ಯಕ್ತಿಯನ್ನು ಪೋಕ್ಸೊ ಕಾಯಿದೆ ಅನ್ವಯ ಪುತ್ತೂರು ಪೋಲಿಸರು ಬಂಧೀಸಿದ್ದಾರೆ.

ಬಂಧಿತನನ್ನು ಪುತ್ತೂರು ನೆಹರು ನಗರದ ನಿವಾಸಿ ಸಂಶೇರ್ ಖಾನ್ ಎಂದು ಗುರುತಿಸಲಾಗಿದೆ.

ಆರೋಪಿಯು ಬಾಲಕಿಯನ್ನು ಕಳೆದ ಒಂದು ವರ್ಷದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು, ಈ ವಿಷಯವನ್ನು ಹೊರಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು ಎನ್ನಲಾಗಿದೆ. ಎಪ್ರಿಲ್ 17ರಂದು ಬಾಲಕಿ ಮಲಗಿದ್ದ ವೇಳೆಯಲ್ಲಿ ಸಂಶೇರ್ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು ಈ ಕುರಿತು ಬಾಲಕಿಯು ಪುತ್ತೂರು ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧೀಸಿದ್ದಾರೆ.


Spread the love