ಅಪ್ರಾಪ್ತ ವಯಸ್ಕಳಿಗೆ ಅತ್ಯಾಚಾರ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಹಾಗೂ ದಂಡ

Spread the love

ಉಡುಪಿ: ದಿನಾಂಕ: 7-6-16 ರಂದು ಎಸ್.ಸಿ. ನಂ. 88-10 ರಲ್ಲಿ ಮಾನ್ಯ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ಉಡುಪಿಯ ಮಾನ್ಯ ಜಿಲ್ಲಾ ನ್ಯಾಯಾಧೀಶರು ಅತ್ಯಾಚಾರಿ ಆರೋಪಿಯಾದ ಪ್ರದೀಪ ಕೊರಗ ತಂದೆ ಕಿಟ್ಟ ಕೊರಗ,ವಯಸ್ಸು 26, ದರ್ಖಾಸು ಹೌಸ್, 38 ಕಳ್ತೂರು ಗ್ರಾಮ, ಸಂತೆಕಟ್ಟೆ ಈತನಿಗೆ 10 ವರ್ಷಗಳ ಕಾಲ ಶಿಕ್ಷೆಯನ್ನು ಹಾಗೂ ರೂ.2,00,000/- ದಂಡ ಪಾವತಿಸಲು ತೀರ್ಪು ನೀಡಿರುತ್ತಾರೆ. ಸದರಿ ರೂ.2,00,000/- ಲಕ್ಷದಲ್ಲಿ ರೂ.1,50,000/- ನೊಂದ ಮಹಿಳೆಯ ಮಗುವಿಗೆ ಪರಿಹಾರವಾಗಿ ಹಾಗೂ ರೂ.50,000/- ವನ್ನು ನೊಂದ ಮಹಿಳೆಗೆ ಪರಿಹಾರವಾಗಿ ನೀಡಬೇಕೆಂದು ನ್ಯಾಯಾಲಯವು ತೀರ್ಪು ನೀಡಿರುತ್ತದೆ.

ಪ್ರಕರಣದ ಸಾರಾಂಶ: ಉಡುಪಿ ತಾಲೂಕು 38ನೇ ಕಳ್ತೂರು ಗ್ರಾಮದ ಬುಕ್ಕಿಗುಡ್ಡೆಯ ಅಪ್ರಾಪ್ತ ವಯಸ್ಸಿನ ನೊಂದ ಮಹಿಳೆಗೆ ಅವರದೇ ವಾಸ್ತವ್ಯದ ಮನೆಯಲ್ಲಿ ಅವರ ನೆರೆ ಮನೆಯಲ್ಲಿ ವಾಸ್ತವ್ಯವಿದ್ದ ಆರೋಪಿ ಪ್ರದೀಪ ಕೊರಗ ಎಂಬುವನು ಅತ್ಯಾಚಾರವನ್ನು ಮಾಡಿ ಈ ವಿಚಾರವನ್ನು ಬೇರೆಯವರಿಗೆ ಹೇಳಿದರೆ ಕೊಂದು ಹಾಕುವುದಾಗಿ ಜೀವಬೆದರಿಕೆ ಹಾಕುತ್ತಿದ್ದು, ತದ ನಂತರ ಅಪ್ರಾಪ್ತ ಮಹಿಳೆ ಗರ್ಭ ವತಿಯಾಗಿದ್ದು ಪೋಲೀಸರಿಗೆ ನೊಂದ ಮಹಿಳೆಯ ತಾಯಿ ತಾ: 10-3-10 ರಂದು ದೂರು ನೀಡಿದ್ದು, ಕಾರ್ಕಳ ವೃತ್ತ ನಿರೀಕ್ಷಕರು ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾ ರೋಪಣೆಪಟ್ಟಿ ಸಲ್ಲಿಸಿರುತ್ತಾರೆ. ಆರೋಪಿ ದೌರ್ಜನ್ಯದಿಂದಾಗಿ ನೊಂದ ಮಹಿಳೆಯು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಇರುತ್ತದೆ.

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ದೌರ್ಜನ್ಯಕ್ಕೊಳಗಾದ ಮಹಿಳೆ, ಮಗು ಹಾಗೂ ಆರೋಪಿತನ ಡಿ.ಎನ್.ಎ. ಪರಿಶೀಲನೆಯಲ್ಲಿ ಸಹ ಆರೋಪಿಯು ದೌರ್ಜನ್ಯವೆಸಗಿರುವುದು ಧೃಡ ಪಟ್ಟಿರುತ್ತದೆ. ಮಾನ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಶಿವಶಂಕರ ಬಿ.ಅಮರಣ್ಣನವರ್ ಇವರು ಸಾಕ್ಷಿಗಳ ವಿಚಾರಣೆಯನ್ನು ನಡೆಸಿ ವಾದ ವಿವಾದ ಆಲಿಸಿ ಆರೋಪಿಯ ವಿರುದ್ಧ ಇರುವ ಆಪಾದನೆ ಸಾಬೀತು ಆಗಿದೆ ಎಂದು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಈ ಪ್ರಕರಣದ ತನಿಖೆಯನ್ನು ಕಾರ್ಕಳ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀ ಪುಟ್ಟಸ್ವಾಮಿ ಗೌಡ ಇವರು ನಡೆಸಿದ್ದರು. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರುಗಳಾದ ಟಿ.ಎಸ್.ಜಿತೂರಿ ಹಾಗೂ ಶ್ರೀ ಬಿ. ಶೇಖರ ಶೆಟ್ಟಿ ಇವರು ವಾದ ಮಂಡಿಸಿದ್ದರು.

ಅಪ್ರಾಪ್ತ ಬಾಲಕಿಯ ಅಪಹರಣ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘನೆ – ಆರೋಪಿಗೆ ಶಿಕ್ಷೆ

ಉಡುಪಿ : ಬ್ರಹ್ಮಾವರ ಠಾಣೆ ಶರಹದ್ದಿನಲ್ಲಿ 1ನೇ ಆರೋಪಿ ಸುದರ್ಶನಕಿರಣ, ವಯಸ್ಸು: 28, ನರಸಿಂಹ ಶೇರೆಗಾರ ರವರ ಮಗ, ಕುಂಜಾಲು ಪೋಸ್ಟ, ಆರೂರು ಕ್ರಾಸ್, ಆರೂರು ಗ್ರಾಮ ಉಡುಪಿ ತಾಲೂಕು ದಿ: 2-8-2010 ರಂದು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವ ಇರಾದೆಯಿಂದ ಭಯದ ನೆರಳಲ್ಲಿ ಅಪಹರಿಸಿ ಉಡುಪಿಯ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಸದ್ರಿ ಬಾಲಕಿ ಅಪ್ರಾಪ್ತ ವಯಸ್ಕಳಾ ಗಿದ್ದರೂ ಅವಳು ವಯಸ್ಕಳೆಂಬಂತೆ ವೈದ್ಯಾಧಿಕಾ ರಿಯಿಂದ ಸುಳ್ಳು ದಾಖಲೆಯನ್ನು ಪಡೆದು ಅದನ್ನು ಹಾಜರುಪಡಿಸಿ ಮದುವೆಯನ್ನು ನೊಂದಣಿ ಮಾಡಿಸಿ, ನಂತರ ದಲ್ಲಿ ಸದ್ರಿಯವಳನ್ನು ಬೇರೆ ಬೇರೆ ಕಡೆಗೆ ಒಯ್ದು ಲೈಂಗಿಕ ಅಪರಾಧವೆಸಗಿದವನೆಂದು 1ನೇ ಆರೋಪಿಯ ಮೇಲೆ ಆರೋಪವಿದ್ದು, ಅಲ್ಲದೇ 1 ಮತ್ತು 2ನೇ ಆರೋಪಿ ಗುರುರಾಜ ಹಾಂಡಾ, ವಯಸ್ಸು: 26 ಕೊರಗ ಹಾಂಡಾರ ಮಗ, ಗುರುಶ್ರೀ ನಿಲಯ, ಬ್ರಹ್ಮಾವರ ಪೋಸ್ಟ, ಉಡುಪಿ ತಾಲೂಕು- ಇವರು ಈ ಸುಳ್ಳು ಪ್ರಮಾಣಪತ್ರ ಪಡೆಯು ವಲ್ಲಿ ಒಬ್ಬರಿಗೊಬ್ಬರು ಸಹಕಾರಿಯಾಗಿ ಕಾನೂನು ಸಮ್ಮತವಲ್ಲದ ಮದುವೆ ನೋಂದಣಿಯಾ ಗುವಂತೆ ಮಾಡಿ ಸದ್ರಿ ನೋಂದಣಿ ದಾಖಲೆಗಳಿಗೂ ಸಹ ಬೇರೆಯವರ ಸುಳ್ಳು ಸಹಿ ಮಾಡಿದರೆಂದು 1 ಮತ್ತು 2ನೇ ಆರೋಪಿತರ ಮೇಲೆ ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀ ಜಿ.ಕೃಷ್ಣಮೂರ್ತಿ ಯವರು ಆರೋಪಿತರ ಮೇಲೆ ಭಾದಂಸಂ. ಕಲಂ 465, 471, 366, 376 ಜತೆಗೆ 34 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂಗಳಡಿ ನ್ಯಾಯಾಲ ಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು ಇರುತ್ತದೆ.

ಪ್ರಕರಣದಲ್ಲಿ ವಿಚಾರಣೆ ಸಂದರ್ಭ ಅಭಿಯೋಜನೆ ಪರವಾಗಿ ಮಹತ್ವದ ಸಾಕ್ಷಿಗಳನ್ನು ವಿಚಾರಣೆ ಗೊಳಪ ಡಿಸಿದ್ದು ಇರುತ್ತದೆ.

ಉಡುಪಿಯ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ್ ಬಿ. ಅಮರಣ್ಣನವರ್ ಇವರು ದಿನಾಂಕ 14-1-2016 ರಂದು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಆರೋಪಿ ತರು ಕಲಂ 465, 471 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಅಪರಾಧವೆಸಗಿದ್ದು ಸಾಬೀತುಪಟ್ಟಿರುತ್ತ ದೆಂದು ತೀರ್ಪಿತ್ತು, 1 ಮತ್ತು 2ನೇ ಆರೋಪಿತರಿಗೆ ಭಾದಂಸಂ ಕಲಂ. 465 ರ ಅಪರಾಧಕ್ಕೆ 1 ವರ್ಷದ ಶಿಕ್ಷೆ ಮತ್ತು ತಲಾ ರೂ.1000/- ದಂಡ , ಕಲಂ 471 ರ ಅಪರಾಧಕ್ಕೆ 1 ವರ್ಷ ಶಿಕ್ಷೆ ಹಾಗೂ ತಲಾ ರೂ.1000/- ದಂಡ ಮತ್ತು 1ನೇ ಆರೋಪಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9 ರ ಉಲ್ಲಂಘನೆಗೆ 1 ವರ್ಷದ ಶಿಕ್ಷೆ ಹಾಗೂ ರೂ.1000/- ದಂಡಕ್ಕೆ ಗುರಿಪಡಿಸಿರುತ್ತಾರೆ. ಈ ರೂ.5000/- ದಂಡದ ಮೊತ್ತವನ್ನು ನೊಂದವಳಿಗೆ ಪರಿಹಾರವಾಗಿ ನೀಡಲು ಆದೇಶಿಸಿರುತ್ತಾರೆ.

2ನೇ ಆರೋಪಿತರಿಂದ ಜಪ್ತಪಡಿಸಿದ ರೂ.20,000/- ಅಂದರೆ ಸುಳ್ಳು ದಾಖಲೆ ಸೃಷ್ಟಿಸಲು 2ನೇ ಆರೋಪಿ 1ನೇ ಆರೋಪಿಯಿಂದ ಪಡೆದ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಲು ಆದೇಶಿಸಿರುತ್ತಾರೆ.

ಪ್ರಾಸಿಕ್ಯೂಷನ್ ಪರವಾಗಿ ಶ್ರೀ ಟಿ.ಎಸ್.ಜಿತೂರಿ ಪಬ್ಲಿಕ್ ಪ್ರಾಸಿಕ್ಯೂಟರ್, ಉಡುಪಿ ಪ್ರಕರಣವನ್ನು ಮತ್ತು ವಾದವನ್ನು ಮಂಡಿಸಿರುತ್ತಾರೆ.


Spread the love