ಅಬುಧಾಬಿಯಲ್ಲಿ ನಡೆದ ವಿಜೃಂಬಣೆಯ 15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಡಾ. ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ
ಅಬುಧಾಬಿ: “15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ”, ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಮಂಗಳೂರು ಸಂಯುಕ್ತವಾಗಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ 2019 ಫೆಬ್ರವರಿ 22 ಶುಕ್ರವಾರ ಮತ್ತು 23ನೇ ತಾರೀಕು ಶನಿವಾರ ಅಬುಧಾಬಿ ಇಂಡಿಯನ್ ಸ್ಕೂಲ್ ಶೇಕ್ ಝಾಯಿದ್ ಸಭಾಂಗಣದ “ಸಿದ್ದಗಂಗಾ ಶ್ರೀ” ಭವ್ಯ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಜ್ಯೋತಿ ಬೆಳಗಿಸಿ 15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಉದ್ಘಾಟನೆ…
“ಸಿದ್ದಗಂಗಾ ಶ್ರೀ” ವೇದಿಕೆಯಲ್ಲಿ 15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಾಧ್ಯಕ್ಷೆ ಡಾ, ವಸುಂದರಾ ಭೂಪತಿ (ಕರ್ನಾಟಕ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ) ಯವರ ಸಮ್ಮುಖದಲ್ಲಿ ಡಾ. ಬಿ. ಆರ್. ಶೆಟ್ಟಿಯವರು ಜ್ಯೋತಿ ಬೆಳಗಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು. ಪ್ರಖ್ಯಾತ ಚಲನಚಿತ್ರ ಹಿರಿಯ ನಟರಾದ ಡಾ. ಮುಖ್ಯಂಂತ್ರಿ ಚಂದ್ರು, ತುಳು ಲೇಖಕರು ಮತ್ತು ಚಿತ್ರ ನಿರ್ಮಾಪಕರು ಡಾ. ಸಂಜೀವ ದಂಡಕೇರಿ, ಅಬುಧಾಬಿ ಕರ್ನಾಟಕ ಸಂಘ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿ ಹಾಗೂ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷರು ಶ್ರೀ ಮಂಜುನಾಥ್ ಸಾಗರ್, ರಂಗಭೂಮಿ ಕಲಾವಿದರು ನಿರ್ದೇಶಕರು ಶ್ರೀ ವಿ, ಜಿ, ಪಾಲ್, ದಕ್ಷಿಣ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶೀ ಜಗನ್ನಾಥ್ ಶೆಟ್ಟಿ ಬಾಳ, ಇಂಡಿಯ ಸೋಶಿಯಲ್ ಸೆಂಟರ್ ಅಬುಧಾಬಿ ಉಪಾಧ್ಯಕ್ಷರಾದ ಶ್ರೀ ಜಯರಾಂ ರೈ ಉಪಸ್ಥಿತರಿದ್ದರು.
ಭಾರತದ ಪುಲ್ವಾಮದಲ್ಲಿ ಹುತಾತ್ಮರಾದ ವೀರ ಯೋದರಿಗೆ ಅಂತಿಮ ನಮನದೊಂದಿಗೆ ಮೌನ ಪ್ರಾರ್ಥನೆಯನ್ನು ಸಲ್ಲಿಸಿ ಕಾರ್ಯಕ್ರಮ ಪ್ರಾರಂಬಿಸಲಾಯಿತು.
ಶ್ರೀಮತಿ ದಿವ್ಯಾ ಶರ್ಮಾ ತಂಡದವರ ಸ್ವಾಗತ ಗೀತೆ, ಸುಮಾ ಅಶೋಕ್ ತಂಡದವರಿಂದ ಸ್ವಾಗತ ನೃತ್ಯದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿರುವ ಗಣ್ಯರನ್ನು ಶ್ರೀ ಸರ್ವೋತ್ತಮ ಶೆಟ್ಟಿಯವರು ಸ್ವಾಗತಿಸಿದರು, ಶ್ರೀ ಮಂಜುನಾಥ್ ಸಾಗರ್ ರವರು ಪ್ರಾಸ್ಥವಿಕ ಭಾಷಣದಲ್ಲಿ ವಿಶ್ವ ಸಂಸ್ಕೃತಿ ಸಮ್ಮೇಳನದ ಪ್ರಾರಂಭ ಹಾಗೂ ವಿವಿಧ ದೇಶಗಳಲ್ಲಿ ನಡೆದು ಬಂದ ಹಾದಿಯನ್ನು ವಿವರಿಸಿದರು. ಸಮ್ಮೇಳನದ ಅಧ್ಯಕ್ಷೆ ಡಾ| ವಸುಂಧರ ಭೂಪತಿ ಯವರು ಕನ್ನಡ ನಾಡು ನುಡಿ, ಸಂಸ್ಕೃತಿಯ ಬಗ್ಗೆ ತಮ್ಮ ಭಾಷಣದಲ್ಲಿ ವಿವರವಾಗಿ ಸಭೆಯ ಮುಂದಿಟ್ಟು ಶುಭಾಶಯಗಳನ್ನು ನೀಡಿದರು. ಸಮಾರಂಭದ ಅಧ್ಯಕ್ಷರಾಗಿರುವ ಡಾ. ಬಿ. ಆರ್. ಶೆಟ್ಟಿಯವರು ಸರ್ವರಿಗೂ ಶುಭಾಶಯಗಳನ್ನು ಸಲ್ಲಿಸಿ ಸಮ್ಮೇಳನದ ತಯಾರಿಯಲ್ಲಿ ಪಾಲ್ಗೊಂಡ ಸರ್ವ ಸದಸ್ಯರಿಗೂ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕವಿಗೋಷ್ಠಿ ಮತ್ತು ಕೃತಿ ಬಿಡುಗಡೆ
‘ಬುದ್ದನ ನಾಡು ಭೂತಾನ್’ ಪುಸ್ತಕ ಬಿಡುಗಡೆ ಮಾಡಲಾಯಿತು. ಡಾ. ಅಶೋಕ್ ನರೋಡೆ ಅಧ್ಯಕ್ಷತೆಯಲ್ಲಿ ಶ್ರೀ ಬಿಂಡಿಗನವಿಲೆ ಭಗವಾನ್, ಶ್ರೀಮತಿ ರಜನಿ ಭಟ್, ಡಾ. ಭಗಿರತಿ ಕನ್ನಡತಿ, ನಾನಾ ಸಾಹೇಬ್ ಎಸ್. ಅಚ್ಚಡದ, ಸೋಮಶೇಖರ್ ಹಿಪ್ಪರಗಿ, ಜಯಶ್ರೀ ನಾಗೇಶ್, ಶ್ರೀಮತಿ ಪ್ರಭಾ ಸುವರ್ಣ ಮುಂಬಯಿ ಕವಿ ಗೋಷ್ಠಿ ನಡೆಸಿ ಕೊಟ್ಟರು. ಮಿಮಿಕ್ರಿ ಗೋಪಿ ಮತ್ತು ಮಹದೇವ ಸಟ್ಟಗೇರಿ ನಗೆಹೊನಲು ಮತ್ತು ರಸಮಂಜರಿಯನ್ನು ನಡೆಸಿ ಕೊಟ್ಟರು. ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಪ್ರಖ್ಯಾತ್ ರಾಜ್ ಮಂಡ್ಯ, ಶಿವರಾಜ್ ಪಾಂಡೆಶ್ವರ, ವಚನ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ ಎನ್. ಟಿ. ಸವಣೂರ ತುಮಕೂರು ಚಲನಚಿತ್ರ ನಟರಾದ ಎಂ. ಡಿ ಕೌಶಿಕ್ ಮ್ಯಾಜಿಕ್ ಶೋ ಮೂಲಕ ಆಕರ್ಷಕ ಕಾರ್ಯಕ್ರಮ ನಡೆಸಿಕೊಟ್ಟರು.
ಆಕರ್ಷಕ ನೃತ್ಯ ಪ್ರದರ್ಶನ
ಪುಸ್ಕರ ಸೆಂಟರ್ ಫಾರ್ ಫಾರ್ಫಾರ್ಮಿಂಗ್ ಆಟ್ರ್ಸ್ ಸಂಸ್ಥೆ ಬೆಂಗಳೂರು ತಂಡದವರಿಂದ, ಶ್ರೀ ನಾಟ್ಯ ಭಾರತಿ ಟ್ರಸ್ಟ್ ಬೆಂಗಳೂರು ತಂಡದ ನೃತ್ಯ ಸಂಭ್ರಮ ಬೆಂಗಳೂರು ಕು. ಅನು ಆನಂದ್ ತಂಡದವರಿಂದ ಹಾಗೂ ಯು.ಎ.ಇ. ಕನ್ನಡಿಗರಿಂದ ನೃತ್ಯ ಕಾರ್ಯಕ್ರಮ ಆಕರ್ಷಕವಾಗಿ ನಡೆಯಿತು.
ಸಮ್ಮೇಳನದ ಆವರಣದಲ್ಲಿ ಬೆಂಗಳೂರಿನ ಫೌಂಡೇಶನ್ ಫಾರ್ ಆರ್ಟ್ ಅಂಡ್ ಕಲ್ಚರ್ ಫಾರ್ ಡೆಫ್ – ತಂಡದವರ ಚಿತ್ರ ಕಲಾಕೃತಿ, ಕರ ಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸರ್ವರ ಗಮನ ಸೆಳೆಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶ್ವಮಾನ್ಯ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿರುವ ಸಾಧಕರಿಗೆ ವಿಶ್ವಮಾನ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಸಂತೋಷ್ ಶೆಟ್ಟಿ -ಸಮಾಜ ಸೇವೆ, ಶ್ರೀಮತಿ ಜಯಲಕ್ಷ್ಮಿ ಸುರೇಶ್ ಭಟ್, ಯು.ಎ.ಇ. – ಕನ್ನಡ ಸೇವೆ, ಶರಣಶ್ರೀ ಮಾನಪ್ಪ ಜಿ ಪತ್ತಾರ್, ವಿಜಯಪುರ-ಸಮಾಜ ಸೇವೆ, ಶ್ರೀಮತಿ ವಿಜಯರಾಜೇಶ್ವರಿ ಗೊಪ ಶೆಟ್ಟಿ – ಸಮಾಜ ಸೇವೆ, ಶ್ರೀ ನರೇಶ್ ಕುಮಾರ್, ಬೆಂಗಳೂರು – ಮಾಧ್ಯಮ ಮತ್ತು ಪ್ರಚಾರ, ಶ್ರೀ ಶಶಿಧರ್ ನಾಗರಾಜಪ್ಪ, ಯು.ಎ.ಇ. – ಕನ್ನಡ ಸೇವೆ, ಶ್ರೀ ಮನೋಹರ್ ತೋನ್ಸೆ, ಯು.ಎ.ಇ. – ಸಾಹಿತ್ಯ, ಶ್ರೀ ದೀಪಕ್ ಸೋಮಶೇಖರ್, ಯು.ಎ.ಇ. – ಚಿತ್ರರಂಗ.
ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ಪುರಸ್ಕೃತರು
ಶ್ರೀ ಪರಿಸರಪ್ರೇಮಿ ಸುರೇಶ್ ಕುಮಾರ್ – ಪರಿಸರ, ಶ್ರೀ ಜಗನ್ನಾಥ್ ಶೆಟ್ಟಿ ಬಾಳಾ – ಮಾಧ್ಯಮ, ವಿದ್ವಾನ್ ಗಿರೀಶ್ ಕೆ. ಆರ್. ತುಮಕೂರು – ನೃತ್ಯ ಕ್ಷೇತ್ರ, ಶ್ರೀ ವಿ. ಜಿ. ಪಾಲ್, ಮಂಗಳೂರು – ರಂಗಭೂಮಿ, ಶ್ರೀಮತಿ ಪ್ರಭಾ ಸುವರ್ಣ, ಮ್ಯ್‍ಂಬೈ – ಸಮಾಜ ಸೇವೆ, ಶ್ರೀ ಶಂಕರ್ ಗುರು ಭಟ್ ಸಮಾಜ ಸೇವೆ, ಕು. ಅನು ಆನಂದ್, ಬೆಂಗಳೂರು – ನೃತ್ಯ.
ಮಾಧ್ಯಮ ಗೋಷ್ಠಿ
ವಿಶ್ವವಾಣಿ ಸಂಪಾದಕರು ಶ್ರೀ ವಿಶ್ವೇಶ್ವರ ಭಟ್ ಅಧ್ಯಕ್ಷತೆಯಲ್ಲಿ ಮಾಧ್ಯಮ ಗೋಷ್ಠಿ ನಡೆಯಿತು. ಪಾಲ್ಗೊಂಡವರು – ಅನಿಲ್ ಕುಮಾರ್ ಬೆಂಗಳೂರು, ಮಾರುತಿ ಬಡಿಗೆರ್, ರಾಯಚೂರು, ರಾಜು ಅಡಕಳ್ಳಿ ಮತ್ತು ಜಗನ್ನಾಥ್ ಶೆಟ್ಟಿ ಬಾಳಾ.
ಸಮಾರೋಪ ಸಮಾರಂಭ
ಡಾ. ಬಿ. ಆರ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಮ್ಮೇಳನಾಧ್ಯಕ್ಷರು ಡಾ. ವಸುಂಧರ ಭೂಪತಿ, ಶ್ರೀ ವಿಶ್ವೇಶ್ವರ ಭಟ್, ಡಾ. ಮುಖ್ಯಮಂತ್ರಿ ಚಂದ್ರು, ಕನ್ನಡಿಗರು ದುಬಾಯಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ, ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಮಂಜುನಾಥ ಸಾಗರ್, ಶ್ರೀ ಜಯರಾಮ್ ರೈ, ಡಾ. ಡಿ. ಪಿ. ಶಿವಕುಮಾರ್ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಸಮ್ಮೇಳನದಲ್ಲಿ ಭಾಗವಹಿಸಿದ ಕಲಾವಿದರನ್ನು ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿರುವ ಮಹನಿಯರುಗಳನ್ನು ಮಾಧ್ಯಮ ಪ್ರತಿನಿಧಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷರು ಡಾ. ಬಿ. ಆರ್. ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು, ಸಮ್ಮೇಳನಾಧ್ಯಕ್ಷರು ಡಾ. ವಸುಂದರ ಭೂಪತಿ, ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಮಂಜುನಾಥ್ ಸಾಗರ್ ಹಾಗೂ ವೇದಿಕೆಯಲ್ಲಿರುವ ಎಲ್ಲಾ ಗಣ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಎರಡು ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆಯನ್ನು ಮಾಡಿರುವ ಶ್ರೀ ಅವಿನಾಶ್ ಕಾಮತ್- ಉಡುಪಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಂದಾನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಬಿ. ಕೆ. ಗಣೇಶ್ ರೈ – ಯು.ಎ.ಇ.