ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ ದ. ರಾ. ಬೇಂದ್ರೆ ಪ್ರಶಸ್ತಿ ಕ್ರಿಯಾತ್ಮಕ ಕಲಾ ನಿರ್ದೆಶಕ ಬಿ. ಕೆ. ಗಣೇಶ್ ರೈಯವರ ಮಡಿಲಿಗೆ

Spread the love

ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ . ರಾ. ಬೇಂದ್ರೆ ಪ್ರಶಸ್ತಿ ಕ್ರಿಯಾತ್ಮಕ ಕಲಾ ನಿರ್ದೆಶಕ ಬಿ. ಕೆ. ಗಣೇಶ್ ರೈಯವರ ಮಡಿಲಿಗೆ

ಅಬುಧಾಬಿ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಯುವ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿವರ್ಷ ನೀಡಲಾಗುತಿರುವ ಪ್ರತಿಷ್ಠಿತ “ದ. ರಾ. ಬೇಂದ್ರೆ ಪ್ರಶಸ್ತಿ,” ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ. ಕೆ. ಗಣೇಶ್ ರೈಯವರವರು ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯದ ಸೇವೆ, ಸಮಾಜಕ್ಕೆ ನೀಡಿರುವ ಸೇವೆಗಾಗಿ ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

da-ra-bendre-award-panel-01-1

ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ 2016 ನವೆಂಬರ್ 4ನೇ ತಾರೀಕಿ ನಂದು ಬೆಳಗಿನಿಂದ ಸಂಜೆಯವರೆಗೆ ನಡೆಯಲಿರುವ ಆಕರ್ಷಕ ಕನರ್ಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಹಾಗೂ ಸರ್ವ ಕಾರ್ಯಕಾರಿ ಸಮಿತಿಯವರ ಸಮ್ಮುಖದಲ್ಲಿ ಯು.ಎ.ಇ. ಕನ್ನಡಿಗರ ಮಹಾಪೋಷಕರಾದ ಡಾ| ಬಿ. ಆರ್. ಶೆಟ್ಟಿಯವರು ಪ್ರದಾನಿಸಲಿರುವರು.

ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ. ಕೆ. ಗಣೇಶ್ ರೈಯವರ ಹೆಜ್ಜೆ ಗುರುತು…

da-ra-bendre-award-panel-01-3

ದಕ್ಷಿಣ ಭಾರತದ ಕರ್ನಾಟಕದ ಸುಂದರ ಪ್ರಕೃತಿಯ ಮಡಿಲಿನಲ್ಲಿರುವ ವೀರರ ನಾಡು ಶೂರರ ಬೀಡು, ನಿತ್ಯಹರಿದ್ವರ್ಣ ಸಾಲಿನಲ್ಲಿ ಕಂಗೊಳಿಸುವ ಕೊಡಗು ಜಿಲ್ಲೆಯ ಮಂಜಿನನಗರಿ ಮಡಿಕೇರಿಯಲ್ಲಿ ಕೃಷ್ಣಪ್ಪ ರೈ ತುಳಸಿಯಮ್ಮ ರೈ ದಂಪತಿಗಳ ಮಗನಾಗಿ ಗಣೇಶ್ ರೈಯವರು ಜನಿಸಿದವರು.

6-ganesh-rai-honours-and-felicitation

ಪ್ರಾಥಮಿಕ, ಪ್ರೌಢ, ಕಾಲೇಜು ಹಂತ ವಾಣಿಜ್ಯ ಶಾಸ್ತ್ರದಲ್ಲಿ ಮುಗಿಸಿದರೆ, ಬಾಲ್ಯದಿಂದಲೇ ಮಡಿಕೇರಿಯಲ್ಲಿ ನಡೆಯುವ ವೈಭವಪೂರಿತ ದಸರಾ ಉತ್ಸವದ ದೇವತಾ ಮೂರ್ತಿಗಳಿಂದ  ಪ್ರಭಾವಿತರಾಗಿ ಶಿಲ್ಪಿಯಾಗುವ ಕನಸು ಕಂಡವರು. ತಮ್ಮ ಶಾಲಾ ಹಂತದಲ್ಲೆ ಶಿಕ್ಷಕರಿಂದ ಪ್ರೋತ್ಸಾಹ ಪಡೆದಿರುವ ಇವರ ಮುಂದಿನ ವಿದ್ಯಾಭ್ಯಾಸ ಶಿಲ್ಪಕಲೆ ಚಿತ್ರಕಲೆಯ ಕಡೆಗೆ ಆಯ್ಕೆ ಮಾಡಿಕೊಂಡರು. ಶಿಲ್ಪಕಲೆ, ಶಿಲ್ಪಶಾಸ್ತ್ರ, ವರ್ಣಚಿತ್ರಕಲೆ, ಛಾಯಚಿತ್ರ ತರಬೇತಿಯನ್ನು ಜಯಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ ಮೈಸೂರು, ಕಲಾನಿಕೇತನ ಸ್ಕೂಲ್ ಅಫ್ ಆರ್ಟ್ಸ್  ಮೈಸೂರು, ಮಹಲಾಸ ಸ್ಕೂಲ್ ಅಫ್ ಆರ್ಟ್ಸ್ ಮಂಗಳೂರಿನಿಂದ ಪಡೆದರು.

1-ganesh-rai-statues

ಶಿಲ್ಪಕಲಾಕೃತಿ ರಚನೆಯಲ್ಲಿ, ಶಿಲೆ, ಕಾಷ್ಟಾ, ಮಣ್ಣು, ಸಿಮೆಂಟ್, ಮೇಣ, ಲೋಹ, ಪ್ಲಾಸ್ಟರ್ ಅಫ್ ಪ್ಯಾರಿಸ್, ಪೇಪರ್ ಪಲ್ಪ್ ನಲ್ಲಿ ವಿಗ್ರಹ  ನಿರ್ಮಿಸುವ ಗಣೇಶ್ ರೈಯವರು ಸುಮಾರು ಮುನ್ನೂರಕಿಂತಲೂ ಹೆಚ್ಚು ವಿವಿಧ ದೇವತಾ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಪ್ರಮುಖವಾದುದು ಮಡಿಕೇರಿ ಕಾವೇರಿ ಕಲಾಕ್ಷೇತ್ರದ ಮುಂಭಾಗದಲ್ಲಿ ಪ್ರತಿಸ್ಠಾಪಿಸಲಾಗಿರುವ ಕಾವೇರಿ ಮಾತೆಯ ಬೃಹತ್ ವಿಗ್ರಹ. ಮಡಿಕೇರಿ ದಸರಾ ಉತ್ಸವಕ್ಕೆ ಹಲವು ವಿವಿಧ ಭಂಗಿಯಲ್ಲಿ ದೇವತಾ ಮೂರ್ತಿಗಳು, ಗಣಪತಿ ವಿಗ್ರಹಗಳು ನೂರಾರು ಸಂಖ್ಯೆಯಲ್ಲಿ ನಿರ್ಮಿಸಿದ್ದಾರೆ.

ರೈ ಯವರ ತೈಲವರ್ಣ ಕಲಾಕೃತಿ ಕ್ಯಾನ್ವಾಸಿನಲ್ಲಿ, ಜಲವರ್ಣ ಚಿತ್ರಗಳು, ಕರ್ನಾಟಕ ಲಲಿತಕಲಾ ಅಕಾಡೆಮಿ, ಚಿತ್ರಕಲಾ ಪರಿಷತ್ ಬೆಂಗಳೂರು, ಮೈಸೂರು ದಸರಾ ವಸ್ತು ಪ್ರದರ್ಶನ ಹಾಗೂ ಹಲವಾರು ಪ್ರಮುಖ ಸ್ಥಳಗಳಲ್ಲಿ ಕಲಾಪ್ರದರ್ಶನದಲ್ಲಿ ಸಾವಿರಾರು ವೀಕ್ಷಕರ ಮನಸೆಳೆದಿದೆ. ಹಲವು ಜಲವರ್ಣ ತೈಲವರ್ಣ ಕಲಾಕೃತಿಗಳು ವಿಶ್ವದ ವಿವಿಧ ದೇಶಗಳಲ್ಲಿ ಸಂಗ್ರಹದಲ್ಲಿದೆ.

5-ganesh-rai-published-pictures

ಗಣೇಶ್ ರೈಯವರು ರಚಿಸಿದ ಹಲವಾರು ಕಲಾಕೃತಿಗಳು ತಮಿಳುನಾಡಿನ ಶಿವಕಾಶಿಯಲ್ಲಿ ಮುದ್ರಣಗೊಂಡು ಗಣ್ಯಾತಿಗಣ್ಯರು ಲೋಕಾರ್ಪಣೆ ಮಾಡಿದ್ದಾರೆ. ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರಿಂದ ಕಾವೇರಿ ಮಾತೆಯ ಫ್ರೆಮಿಂಗ್ ಚಿತ್ರ ಬಿಡುಗಡೆಯಾಗಿದೆ. ಕಾವೇರಿ ಚಿತ್ರಕಥಾ ಪುಸ್ತಕ (ಕಾಮಿಕ್ಸ್) ಕನ್ನಡ, ಕೊಡವ, ಆಂಗ್ಲಭಾಷೆಯಲ್ಲಿ ಬಿಡುಗಡೆಯಾಗಿದೆ. ಕೊಡಗಿನ ತಲಕಾವೇರಿ, ರಾಜಾಸೀಟ್, ಅಬ್ಬಿಪಾಲ್ಸ್, ತ್ರಿವೇಣಿ ಸಂಗಮ ಭಾಗಮಂಡಲ, ಪಿಕ್ಚರ್ ಕಾರ್ಡ್, ಗ್ರೀಟಿಂಗ್ಸ್ ಕಾರ್ಟ್, ಪ್ರವಾಸಿ ಮಾರ್ಗದರ್ಶಿ ಕೊಡಗು ಪನೋರಮಾ, ಟೂರಿಸ್ಟ್ ಮ್ಯಾಪ್ ಕೊಡಗಿನಲ್ಲಿ ಬಿಡುಗಡೆಯಾಗಿದ್ದರೆ, ಐಶ್ವರೇಶ್ವರ ಕುಬೇರಾ ಲಕ್ಷಿ ದೇವರ ಚಿತ್ರ ದುಬಾಯಿಯಲ್ಲಿ ಬಿಡುಗಡೆಯಾಗಿದೆ.

ಲಾಂಛನಗಳ ಪರಿಕಲ್ಪನೆ ವಿನ್ಯಾಸದಲ್ಲಿ ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್, ಕೊಡವ ಸಾಹಿತ್ಯ ಅಕಾಡೆಮಿ, ಇನ್ನಿತರ ಹಲವಾರು ಸಂಘ ಸಂಸ್ಥಗಳ ಲಾಂಚನಗಳನ್ನು ಕೊಡಗಿನಲ್ಲಿ ರಚಿಸಿದ್ದರೆ, ಯು.ಎ.ಇ. ಯಲ್ಲಿ ಅಬುಧಾಬಿ ಕರ್ನಾಟಕ ಸಂಘ, ಶಾರ್ಜಾ ಕರ್ನಾಟಕ ಸಂಘ, ಅಲ್ ಐನ್ ಕನ್ನಡ ಸಂಘ, ಯು.ಎ.ಇ. ತುಳುಕೂಟ, ತುಳು ಸಿರಿ ದುಬಾಯಿ, ಇನ್ನಿತರ ಕರ್ನಾಟಕ ಪರ ಜಾತಿ ಸಮುದಾಯಗಳ ಲಾಂಚನಗಳು, ಯು.ಎ.ಇ. ತಮಿಳು ಸಂಘದ ಲಾಂಛನ ಇತ್ಯಾದಿ ಹತ್ತು ಹಲವು ಲಾಂಛನಗಳು ಸೃಷ್ಟಿಯಾಗಿದೆ.

2-ganesh-rai-created-souvenir-covers

ಸ್ಮರಣ ಸಂಚಿಕೆಗಳ ವಿನ್ಯಾಸ, ಸಾಹಿತ್ಯ, ಮುಖಪುಟ ರಚನೆ ಕೊಡಗಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳ ಸ್ಮರಣ ಸಂಚಿಕೆಗಳ ಮುಖಪುಟ ವಿನ್ಯಾಸ, ಯು.ಎ.ಇ. ಯಲ್ಲಿ ಅಬುಧಾಬಿ ಕರ್ನಾಟಕ ಸಂಘದ ಬೆಳ್ಳಿ ಮಹೋತ್ಸವದ “ರಜತ ರಶ್ಮಿ” ಶಾರ್ಜಾ ಕರ್ನಾಟಕದ “ಸಾಧನೆ”, ಮಯೂರ, ದುಬಾಯಿ ಕರ್ನಾಟಕ ಸಂಘದ “ಗಾನ ವೈಭವ” ಯು.ಎ.ಇ. ಬಂಟ್ಸ್ ನ “ಐಸಿರಿ” , ಬಿಲ್ಲಾವಾಸ್ ದುಬಾಯಿ “ಸುವರ್ಣ ಕೇದಗೆ” ಸೈಂಟ್ ಮೇರಿಸ್ ಚರ್ಚ್ ದುಬಾಯಿ, ಸೈಂಟ್ ಮೈಕಲ್ ಚರ್ಚ್ ಶಾರ್ಜಾ, ಸೈಂಟ್ ಫ್ರಾನ್ಸಿಸ್ ಪ್ರಾರ್ಥನಾ ಮಂದಿರ ಜೆಬೆಲ್ ಆಲಿ, ಮಲಯಾಳಂ, ತಮಿಳು ಭಾಷೆಯ ಪ್ರಾರ್ಥನಾ ಮಂದಿರಗಳ ಸ್ಮರಣ ಸಂಚಿಕೆ ವಿನ್ಯಾಸ…

ಸನ್ಮಾನ ಪತ್ರಗಳ ವಿನ್ಯಾಸ ಮತ್ತು ಸಾಹಿತ್ಯ, ಯು.ಎ.ಇ. ಯಲ್ಲಿರುವ ಮತ್ತು ಯು.ಎ.ಇ. ಗೆ ಬಂದಿರುವ ಗಣ್ಯಾತಿ ಗಣ್ಯರ ನೂರಾರು ಸನ್ಮಾನ ಪತ್ರ, ಸಾಹಿತ್ಯ, ವಿನ್ಯಾಸ ರೈವರ ಹಸ್ತಕೌಶಲ್ಯದಿಂದ ಮೂಡಿಬಂದಿದೆ. ಮುಖ್ಯವಾದುದು ಡಾ| ಬಿ. ಆರ್. ಶೆಟ್ಟಿಯವರದ್ದು, ಸರ್ವೋತ್ತಮ ಶೆಟ್ಟಿ, ಸುಧೀರ್ ಶೆಟ್ಟಿ ಹಾಗೂ ಅಬುಧಾಬಿ ಕನರ್ಾಟಕ ಸಂಘದ ಕಾರ್ಯಕಾರಿ ಸಮಿತಿಯವರ ಸನ್ಮಾನ ಪತ್ರಗಳು , ತುಂಬೆ ಮೊಯಿದ್ದೀನ್, ಝಫ್ರುಲ್ಲಾ ಖಾನ್, ರಾಯಭಾರಿ ಶ್ರೀ ಎಂ.ಕೆ.ಲೋಕೇಶ್, ಡಾ. ಬಿ.ಕೆ.ಯೂಸಫ್, ಊರಿನಿಂದ ಆಗಮಿಸಿರುವ ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರದ್ದು, ಮಾಸ್ಟರ್ ಹಿರಣಯ್ಯ, ಬನ್ನಂಜೆ ಗೋವಿಂದಾಚಾರ್ಯ, ಜಿ.ಎಸ್. ಶಿವರುದ್ರಪ್ಪ, ಶಕುಂತಲಾ ದೇವಿ, ಲೋಕಾಯುಕ್ತ ಶ್ರೀ ಸಂತೋಷ್ ಹೆಗ್ಡೆ, ಟಿ. ಎಸ್. ನಾಗಾಭರಣ, ದ್ವಾರಕೀಶ್ ಮುಂತಾದ ಗಣ್ಯಾತಿ ಗಣ್ಯರ ಪಟ್ಟಿಯ ಸಾಲು ಸಾಲೇ ಇದೆ.

ಕೊಡಗಿನಲ್ಲಿರುವ ರಂಗಮಂದಿರಗಳ ವೇದಿಕೆಯಲ್ಲಿ ಡ್ರಾಮ ಸೀನರಿ, ಬೃಹತ್ ಸೆಟ್ಟಿಂಗ್ಸ್, ಯು.ಎ.ಇ. ಯಲ್ಲಿ ಅಬುಧಾಬಿ ಕರ್ನಾಟಕ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ವೇದಿಕೆಯಲ್ಲಿ ಚಿತ್ರಪಟ ವಿನ್ಯಾಸ, ಕರ್ನಾಟಕ ಪರ ಸಂಘಟನೆಗಳ ವಿವಿಧ ಕಾರ್ಯಕ್ರಮಗಳು ಸಾಹಿತ್ಯ ಸಮ್ಮೇಳನಗಳ ವೇದಿಕೆಯಲ್ಲಿ ಮೂಡಿಬಂದಿರುವ ಚಿತ್ರ ಪಟಗಳು ರೈಯವರ ಪರಿಕಲ್ಪನೆ ವಿನ್ಯಾಸದಲ್ಲಿರುತ್ತದೆ.

4-ganesh-rai-created-stage-settings

ಸಾಹಿತಿಯಾಗಿ ಮೂಡಿಸಿದ ಲೇಖನಗಳು ಕೊಡಗಿನ ಪತ್ರಿಕೆಗಳಿಂದ, ರಾಷ್ಟ್ರಮಟ್ಟದ ಪತ್ರಿಕೆಗಳು, ಸ್ಮರಣ ಸಂಚಿಕೆಗಳು ಮತ್ತು ವೆಬ್ ಮಾಧ್ಯಮಗಳಲ್ಲಿ ಪ್ರಕಟವಗಿರುವುದು ನೂರಾರು ಸಂಖ್ಯೆಯಲ್ಲಿ… ಫೀಲ್ಡ್
ಮಾರ್ಷಲ್ ಕಾರ್ಯಪ್ಪ, ಮಡಿಕೇರಿ ದಸರಾ ಎಷ್ಟೊಂದು ಸುಂದರ, ತಲಕಾವೇರಿ ತೀರ್ಥೋದ್ಬವ, ಜ್ಞಾನಪೀಠ ಪ್ರಶಸ್ತಿ ಪಕ್ಷಿನೋಟ, ಕಯ್ಯಾರ  ರೈ ನೂರರ ಸಂಭ್ರಮದಲ್ಲಿ, ಅಬ್ದುಲ್ ಕಲಾಂ ಗೆ ಒಂದು ಸಲಾಂ, ಸರ್ ಎಂ. ವಿಶ್ವೇಶ್ವರಯ್ಯ ಲೇಖನ ಕನ್ನಡಿಗ ವಲ್ಡ್ ವೆಬ್ ಮಾಧ್ಯಮದಲ್ಲಿ ನಾಲ್ಕು ಲಕ್ಷ ವೀಕ್ಷಕರು ವೀಕ್ಷಿಸಿದ್ದು ದಾಖಲೆಯನ್ನು ನಿರ್ಮಸಿದೆ. ಯು.ಎ.ಇ, ಯಲ್ಲಿರುವ ಕನರ್ಾಟಕ ಪರ ಸಂಘಟನೆಗಳ ಪೂರ್ಣ ವಿವರ, ಕಾರ್ಯಕ್ರಮದ ಮೊದಲು ನಂತರ ಲೇಖನಗಳು ನಿರಂತರವಾಗಿ ಪ್ರಕಟವಾಗುತಲೇ ಇದೆ.

ಸಂಘ ಸಂಸ್ಥೆಗಳ ಜವಬ್ಧಾರಿಯನ್ನು ವಹಿಸಿಕೊಂಡಿರುವುದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕೊಡಗು ಜಿಲ್ಲಾ ಕಾರ್ಯದರ್ಶಿಯಾಗಿ ಅದೇ ಸಂದರ್ಭದಲ್ಲಿ ಭಾರತ್ ಎರೋನಾಟಿಕ್ಸ್ ಸಂಸ್ಥೆಯಲ್ಲಿ ಏರ್ ಸ್ಕೌಟಿಂಗ್ ತರಭೇತಿಗೆ ಆಯ್ಕೆಯಾಗಿ ಭಾರತದ ನ್ಯಾಟ್, ಜಾಗ್ವಾರ, ಮಿಗ್ ಯುದ್ದ ವಿಮಾನ ಮತ್ತು ಚೀತಾ, ಚೇತಕ್ ಹೆಲಿಕಾಪ್ಟರ್ ನಲ್ಲಿ ಕೂರುವ ಅವಕಾಶ ದೊರಕಿತ್ತು. ಕೊಡಗು ಕಲಾ ಪರಿಷತ್ ಅಧ್ಯಕ್ಷ, ಕೊಡಗು ಚಿತ್ರಕಲಾ ಅಧ್ಯಪಕರ ಸಂಘದ ಅಧ್ಯಕ್ಷ, ಕೊಡಗು ಬಂಟ್ಸ್ ಸಂಘದ ಕಾರ್ಯದರ್ಶಿ, ಮಡಿಕೇರಿ ದಸರಾ ಉತ್ಸವದ ತೀರ್ಪುಗಾರರಾಗಿ, ಯು.ಎ.ಇ.ಗೆ ಬಂದನಂತರ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾಗಿ, ಯು.ಎ.ಇ. ತುಳುಕೂಟದ ಕಲಾನಿರ್ದೇಶಕ, ಯು.ಎ.ಇ. ಬಂಟ್ಸ್ ಸಲಹಾ ಸಮಿತಿ ಸದಸ್ಯರಾಗಿ ಹಾಗೂ ಹೆಚ್ಚಿನ ಕರ್ನಾಟಕ ಪರ ಸಂಘಟನೆಗಳ ಸಲಹೆಗಾರರಾಗಿದ್ದಾರೆ.

ಹಲವು ಸಂಘಟನೆಗಳ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಅಹ್ವಾನಿಸಲ್ಪಟ್ಟಿದ್ದಾರೆ, ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ, ಸುಮಾರು ಏಳು ಎಂಟು ಭಾಷೆ ಬಲ್ಲವರಾಗಿದ್ದು. ಕರ್ನಾಟಕದ ಭಾಷೆಯಂತೆ ವೇದಿಕೆಯಲ್ಲಿ ಮಲಯಾಳಂ, ತಮಿಳು ಭಾಷೆಯಲ್ಲಿ ಭಾಷಣ ನೀಡಿದ್ದಾರೆ.

7-ganesh-rai-blood-donation

ಸ್ವತಹ ರಕ್ತದಾನಿಯಾಗಿರುವ ಗಣೇಶ್ ರೈಯವರು ಯು.ಎ.ಇ. ಯಲ್ಲಿ ಕರ್ನಾಟಕ ಪರ ಸಂಘಟನೆಗಳು ಅಯೊಜಿಸಿರುವ ರಕ್ತದಾನ ಶಿಬಿರದ ಹಿಂದಿನ ರುವಾರಿಯಾಗಿದ್ದಾರೆ. ಯು.ಎ.ಇ.ಯಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರಗಳ ಪೂರ್ಣ ಮಾಹಿತಿಗಳ ಬ್ರೋಶರ್ ತಯಾರಿಸಿ ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಯು.ಎ.ಇ.ಗೆ ಭಾರತದ ರಾಯಭಾರಿಯಾಗಿದ್ದ ಶ್ರೀ ಎಂ. ಕೆ. ಲೋಕೇಶ್ ರವರಿಂದ ಡಾ. ಬಿ. ಆರ್. ಶೆಟ್ಟಿಯವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದ್ದಾರೆ. ರಕ್ತದಾನ ಮಾಹಿತಿಯ ಬ್ರೋಶರ್ ಯು.ಎ.ಇ. ಅಧ್ಯಕ್ಷರು, ಪ್ರಧಾನಮಂತ್ರಿಗಳು, ಭಾರತದ ರಾಷ್ಟ್ರಪತಿ, ಪ್ರಧಾನಮಂತ್ರಿ, ಕರ್ನಾಟಕದ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ.

ಕಲಾ ಯಾನದ ಹಾದಿಯಲ್ಲಿ ದೊರೆತ ಪ್ರಶಸ್ತಿ ಸನ್ಮಾನ ಗೌರವಗಳು…1974ರಲ್ಲಿ ಪ್ರಥಮಬಾರಿಗೆ ಫೀಲ್ಡ್ ಮಾರ್ಷಲ್ರವರಿಂದ ಇಂದಿನ ದ. ರಾ. ಬೇಂದ್ರೆ ಪ್ರಶಸ್ತಿಯನ್ನು ಡಾ. ಬಿ. ಆರ್. ಶೆಟ್ಟಿಯವರ ಅಮೃತ ಹಸ್ತದಿಂದ ಪಡೆಯುವರೆಗೆ, ಪ್ರಮುಖವಾದುದ್ದು…. ಮಡಿಕೇರಿ ದಸರಾದಲ್ಲಿ ಸನ್ಮಾನ, ಕರ್ನಾಟಕ ಪೋಲಿಸ್, ಕರ್ನಾಟಕ ವಿದ್ಯುಚಕ್ತಿ ಮಂಡಳಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಮತ್ತು ವಿವಿಧ ಸಂಘ ಸಂಸ್ಥೆಗಳಿಂದ “ಶಿಲ್ಪಕಲಾ ರತ್ನ”, “ಕಲಾ ಕಿರಣ”, “ಕಲಾ ಪ್ರವೀಣ” ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಪದಕ ಸ್ವೀಕಾರ, ಅಂದಿನ ಮುಖ್ಯಮಂತ್ರಿ ಆರ್. ಗುಂಡುರಾವ್ರಿಂದ ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, 1993 ರಲ್ಲಿ ಡಾ. ಶಿವರಾಂ ಕಾರಂತರ ಅಧ್ಯಕ್ಷತೆಯಲ್ಲಿ ಮಂಗಳೂರು ಗೋಕರ್ಣನಾಥೇಶ್ವರ ದೇವಾಲಯದ ಸಭಾಂಗಣದಲ್ಲಿ ಪೂಜ್ಯ ಪೇಜಾವರ ಮಠಾದೀಶರಾದ ಸನ್ಮಾನ, ಯು.ಎ.ಇ. ಯಲ್ಲಿ ಅಬುಧಾಬಿ ಕರ್ನಾಟಕ ಸಂಘದಿಂದ “ಕುವೆಂಪು ವಿಶ್ವ ಕನ್ನಡ ರತ್ನ”, ದುಬಾಯಿ ಕರ್ನಾಟಕ ಸಂಘದಿಂದ “ಪ್ರತಿಭಾ ಪುರಸ್ಕಾರ”, ಶಾರ್ಜಾ ಕರ್ನಾಟಕ ಸಂಘದಿಂದ “ಮಯೂರ ಪ್ರಶಸ್ತಿ”, ಅಲ್ ಐನ್ ಕನ್ನಡ ಸಂಘದಿಂದ ಸನ್ಮಾನ, ಬಿಲ್ಲವ ಬಳಗ ದುಬಾಯಿಯಿಂದ ಸನ್ಮಾನ, ಯು.ಎ.ಇ. ತುಳುಕೂಟ, ಯು.ಎ.ಇ. ಬಂಟ್ಸ್, ನಮ ತುಳುವೆರು, ವಿಶ್ವಕರ್ಮ ಸೇವಾ ಸಮಿತಿ ಯು.ಎ.ಇ., ರಾಮಕ್ಷತ್ರೀಯ ಸಂಘ ಯು.ಎ.ಇ., ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ, ಕನ್ನಡಿಗರು ದುಬಾಯಿ, ಧ್ವನಿ ಪ್ರತಿಷ್ಠಾನ, ಹಾಗೂ ಇನ್ನಿತರ ಹಲವು ಸಂಘ ಸಂಸ್ಥೆಗಳು ಗೌರವ ಹಾಗೂ ಮ್ಯಾಂಗ್ಲೂರಿಯನ್ ವೆಬ್ ಮಾಧ್ಯಮ “ಮ್ಯಾಂಗ್ಲೂರಿಯನ್ ಸ್ಟಾರ್” ಗೌರವ ನೀಡಿದೆ. 2015 ರ ಅಬುಧಾಬಿ ಕರ್ನಾಟಕ ಸಂಘದ ರಾಜ್ಯೋತ್ಸವ ಸಮಾರಂಭದಲ್ಲಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರಿಂದ ಶಾಲು ಹೊದಿಸಿ ಗೌರವ, 2015ರ ರಾಜ್ಯೋತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನದಲ್ಲಿ ಶಾರ್ಜಾ ಕರ್ನಾಟಕ ಸಂಘದಿಂದ “ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಯ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

da-ra-bendre-award-panel-01-2

ಗಣೇಶ್ ರೈಯವರ ಧರ್ಮಪತ್ನಿ ಶ್ರೀಮತಿ ಮಂಜುಳಾ ಗಣೇಶ್ ರೈ, ಪುತ್ರ ಕು| ಮೋನಿಶ್ ರೈ, ಪುತ್ರಿ ಕು| ಐಶ್ವರ್ಯ ರೈ ಯೊಂದಿಗೆ ಸುಖೀ ಸಂಸಾರಿಯಾಗಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಎರಡು ದಶಕಗಳಿಂದ ಕನ್ನಡ ಭಾಷೆ, ಕಲೆ ಸಂಸ್ಕೃತಿ, ಸಮಾಜ ಸೇವೆಯಲ್ಲಿ ತಮ್ಮ ತೊಡಗಿಸಿಕೊಂಡು ಕನ್ನಡ ಭಾಷೆಯನ್ನು ಜೀವಂತವಾಗಿ ಉಳಿಸಿರುವ ಇವರ ಸಾಧನೆಗೆ ಯು.ಎ.ಇ.ಯ ಎಲ್ಲಾ ಕರ್ನಾಟಕ ಪರ ಸಂಘಟನೆಗಳು, ಸಾವಿರಾರು ಅನಿವಾಸಿ ಕನ್ನಡಿಗರು ತುಂಬು ಆತ್ಮೀಯರಾಗಿದ್ದಾರೆ.

ಅಬುಧಾಬಿ ಕರ್ನಾಟಕ ಸಂಘ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡಾಲಾಗುತಿರುವ ಪ್ರತಿಷ್ಠಿತ “ದ. ರಾ. ಬೇಂದ್ರೆ ಪ್ರಶಸ್ತಿ” ಯನ್ನು ಪಡೆಯುತಿರುವ ಶ್ರೀ ಬಿ. ಕೆ. ಗಣೇಶ್ ರೈ ಯವರಿಗೆ ಸಮಸ್ಥ ಕನ್ನಡಿಗರ ಪರವಾಗಿ ಅಭಿನಂದನೆಗಳು.

Report: Shodhan Prasad


Spread the love