Home Mangalorean News Kannada News ಅಬ್ಬಕ್ಕ ರಾಷ್ಟ್ರೀಯ ಉತ್ಸವದ ಸಮಾರೋಪ ಸಮಾರಂಭ

ಅಬ್ಬಕ್ಕ ರಾಷ್ಟ್ರೀಯ ಉತ್ಸವದ ಸಮಾರೋಪ ಸಮಾರಂಭ

Spread the love

ಅಬ್ಬಕ್ಕ ರಾಷ್ಟ್ರೀಯ ಉತ್ಸವದ ಸಮಾರೋಪ ಸಮಾರಂಭ

ನವ ದೆಹಲಿ: ಕರ್ನಾಟಕದ ಹೆಮ್ಮೆಯ ತುಳುನಾಡ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಉತ್ಸವವು ರಾಷ್ಟ್ರರಾಜಧಾನಿ ನವ ದೆಹಲಿಯಲ್ಲಿ ಕಳೆದ ಮಾರ್ಚ್ 11 ರಿಂದಒಂದು ವಾರಗಳವರೆಗೆ ನಡೆದು ಇಂದು ಮಾರ್ಚ್ 18ರಂದು ಸಮಾರೋಪ ಸಮಾರಂಭವುದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿದೆಹಲಿ ಕರ್ನಾಟಕ ಸಂಘದಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ವೀರರಾಣಿ ಅಬ್ಬಕ್ಕಳನ್ನು ಚಾರಿತ್ರಿಕವಾಗಿಗುರುತಿಸಲು ಹಲವು ಠರಾವುಗಳನ್ನು ಮಂಡಿಸಿದರು. ಅವುಗಳೆಂದರೆ :
• ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರರಾಣಿಅಬ್ಬಕ್ಕನ ಹೆಸರಿಡುವುದು.
• ಉಲ್ಲಾಳದಲ್ಲಿ ರಾಣಿಅಬ್ಬಕ್ಕನ ಪ್ರತಿಮೆಯನ್ನು ನಗರದ ಮುಖ್ಯ ಸ್ಥಳದಲ್ಲಿ ಸ್ಥಾಪನೆ ಮಾಡುವುದು.
• ಸರಕಾರ ಲಕ್ಕುಂಡಿಉತ್ಸವ ಹಾಗೂ ಹಂಪಿ ಉತ್ಸವದ ಮಾದರಿಯಲ್ಲಿ ಪ್ರತಿವರ್ಷಜಿಲ್ಲಾಕೇಂದ್ರ ಮಂಗಳೂರಿನಲ್ಲಿ ಅಬ್ಬಕ್ಕರಾಣಿಉತ್ಸವವನ್ನು ವಿಜೃಂಭಣೆಯಿಂದಆಚರಿಸುವುದು.
• ಅತ್ತಿಮಬ್ಬೆ ಪ್ರಶಸ್ತಿ ಮಾದರಿಯಲ್ಲಿ ಪ್ರತಿ ವರ್ಷರಾಣಿಅಬ್ಬಕ್ಕ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ವತಿಯಿಂದ ನೀಡುವುದು.
• ಮಂಗಳೂರು ರೈಲ್ವೇ ನಿಲ್ದಾಣದಿಂದ ಹೊರಡುವಯಾವುದಾದರೂರೈಲಿಗೆ ವೀರರಾಣಿಅಬ್ಬಕ್ಕನ ಹೆಸರಿಡುವುದು.
• ಮಂಗಳೂರು ವಿಶ್ವವಿದ್ಯಾಲಯಕ್ಕೆ ವೀರರಾಣಿಅಬ್ಬಕ್ಕರಾಣಿ ಹೆಸರಿಡುವುದು
• ಪಠ್ಯಪುಸ್ತಕದಲ್ಲಿ ವೀರರಾಣಿಅಬ್ಬಕ್ಕಚರಿತ್ರೆ ಸೇರಿಸುವುದು

ಸಮಾರೋಪ ಸಮಾರಂಭದಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಅನಿತಾ ಸುರೇಂದ್ರಕುಮಾರ್‍ಅವರುತಮ್ಮ ಭಾಷಣದಲ್ಲಿಈ ಕಾರ್ಯಕ್ರಮದ ಮೂಲಕ ಅಬ್ಬಕ್ಕನನ್ನುರಾಷ್ಟ್ರರಾಜಧಾನಿಯಲ್ಲಿಬೆಳಕಿಗೆ ತಂದಎಲ್ಲರಿಗೂಅವಳ ವಂಶಸ್ಥಳಾಗಿ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆಎಂದರು.ಆಕೆಯ ಆಶೀರ್ವಾದದಿಂದಲೇ ನಮ್ಮ ಈ ಚೌಟ ವಂಶವೂ ಬೆಳೆದಿದೆ.ಜಾಗತಿಕಇತಿಹಾಸದಲ್ಲಿ ಉಳ್ಳಾಲ ರಾಣಿ ಅಬ್ಬಕ್ಕಳಿಗೆ ವಿಶಿಷ್ಠ ಸ್ಥಾನಮಾನಇದೆ. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದಅಬ್ಬಕ್ಕನಚರಿತ್ರೆಯನ್ನು ನಮ್ಮ ಎಳೆಯ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ.ಮಹಿಳೆಯರು ಮಹಿಳಾ ಮೀಸಲಾತಿಗೆಕಾಯದೆಸರಳತೆಯ, ಸ್ವಾಭಿಮಾನದ ಪ್ರತೀಕವಾದಅಬ್ಬಕ್ಕನಆದರ್ಶವನ್ನು ಮುನ್ನುಡಿಯಾಗಿಇಟ್ಟುಕೊಂಡುದೇಶಕ್ಕಾಗಿ ಸೇವೆ ಸಲ್ಲಿಸಬೇಕುಎಂದುಹೇಳಿದರು.ಈ ಉತ್ಸವ ಮಾನವ ಸಂಬಂಧದ ಮನಸ್ಸುಗಳನ್ನು ಒಗ್ಗೂಡಿಸಿದೆ.ಆ ಮೂಲಕ ಕಾರ್ಯಕ್ರಮವೂಅರ್ಥಪೂರ್ಣವಾಗಿದೆಎಂದರು.

ಇದೇ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ಸುರೇಂದ್ರಕುಮಾರ್‍ಅವರು ಮಾತನಾಡುತ್ತದೆಹಲಿ ಕರ್ನಾಟಕ ಸಂಘವು ಯುಗಾದಿಯಂದುರಾಣಿಅಬ್ಬಕ್ಕನನ್ನು ಸ್ಮರಿಸಿರುವುದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಶ್ರೀಚಂದ್ರಹಾಸರೈ ಬಿ. ಅವರುಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕರ್ನಾಟPರಾಜ್ಯ ಮಹಿಳಾ ಅಭಿವೃದ್ಧಿನಿಗಮದಅಧ್ಯಕ್ಷೆಯಾದಶ್ರೀಮತಿ ಭಾರತೀ ಶಂಕರ್‍ಅವರು ಕರಾವಳಿಯಲ್ಲಿರುವ ಮಹಿಳಾ ಪ್ರಾತಿನಿಧ್ಯವನ್ನುನಾವು ನಿಜಕ್ಕೂ ಮೆಚ್ಚಲೇಬೇಕು.ಈ ಪ್ರಾತಿನಿಧ್ಯಕ್ಕೆ ಸುಮಾರು 450 ವರ್ಷಗಳೇ ಹಿಂದೆಯೇ ಅಬ್ಬಕ್ಕಳೇ ನಾಂದಿಯಾಡಿದಳೆಂದರೆ ತಪ್ಪಾಗಲಾರದು.ಜೊತೆಗೆ ಬೆಂಗಳೂರಿನಲ್ಲಿ ಅಬ್ಬಕ್ಕನಕಂಚಿನ ಪ್ರತಿಮೆ ಸ್ಥಾಪಿಸಲು ಮುಂದಾದವರಲ್ಲಿ ನಾನೂ ಒಬ್ಬಳು. ಆಕೆಯೇ ನನ್ನಜೀವನದ ಪ್ರೇರಣೆಎಂಬುದಾಗಿ ಹೇಳಿದರು.

ಖ್ಯಾತಿ ಸಾಹಿತಿ ಮತ್ತುಜಾನಪದ ವಿದ್ವಾಂಸರಾದಪ್ರೊ.ಎ.ವಿ. ನಾವಡಅವರು ಮಾತನಾಡುತ್ತ ಕರಾವಳಿಯಲ್ಲಿ ಜೈನಅರಸು ಮನೆತನದ ಪ್ರಭಾವವೇ ಹೆಚ್ಚಾಗಿತ್ತು.12 ರಾಣಿಯಂದಿರು ಕರಾವಳಿಯಲ್ಲಿ ರಾಜ್ಯಭಾರ ಮಾಡಿದ್ದರು. ಹಾಗಾಗಿ ಅಬ್ಬಕ್ಕನಅಧ್ಯಯನದಜೊತೆಗೆ ಕರಾವಳಿಯನ್ನು ಆಳಿದ ರಾಣಿಯಂದಿರಅಧ್ಯಯನವನ್ನು ನಡೆಸಬೇಕು. ಇದೇ ಸಂದರ್ಭದಲ್ಲಿಅಬ್ಬಕ್ಕಉತ್ಸವವುಅಕಾಡೆಮಿಯಾಗಿ ನಡೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜಅವರು ಸ್ವಾಗತಿಸಿದರು. ವೀರರಾಣಿಅಬ್ಬಕ್ಕಉತ್ಸವ ಸಮಿತಿ, ಉಳ್ಳಾಲದ ಪ್ರಧಾನಕಾರ್ಯದರ್ಶಿ ಶ್ರೀ ಭಾಸ್ಕರರೈ ಕುಕ್ಕುವಳ್ಳಿ, ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ವಾಣಿ ವಿ.ಆಳ್ವ ಅವರು ವಂದಿಸಿದರು.

ಇದೇ ಸಂದರ್ಭದಲ್ಲಿದೆಹಲಿ ಕರ್ನಾಟಕ ಸಂಘದ ವತಿಯಿಂದಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನುಆಚರಿಸಲಾಯಿತು. ಸಂಘದ ವತಿಯಿಂದ ಈ ಬಾರಿ ಐ.ಎ.ಎಸ್.ನಲ್ಲಿ ಪ್ರಥಮರ್ಯಾಂಕ್ ಪಡೆದ ಕು. ನಂದಿನಿ ಕೆ.ಆರ್., ಹಾಗೂ ದೆಹಲಿ ಕರ್ನಾಟಕದ ಸಂಘದಲ್ಲಿಸಕ್ರಿಯವಾಗಿ ಸಾಂಸ್ಕøತಿಕ, ರಂಗ ಸಂಘಟನೆಯಲ್ಲಿ ತೊಡಗಿಸಿಕೊಂಡ ನೂರಕ್ಕೂ ಹೆಚ್ಚು ಮಹಿಳೆಯರನ್ನು ಶ್ರೀಮತಿ ಅನಿತಾ ಸುರೇಂದ್ರಕುಮಾರ್, ಶ್ರೀ ಸುರೇಂದ್ರಕುಮಾರ್, ಉಳ್ಳಾಲ ನಗರಸಭೆಯಆಯುಕ್ತರಾದ ಶ್ರೀಮತಿ ವಾಣಿ ವಿ. ಆಳ್ವ ಅವರು ಸನ್ಮಾನಿಸಿದರು.

ಸಮಾರೋಪ ಸಮಾರಂಭದ ನಂತರ ಮಂಗಳೂರಿನ ನೃತ್ಯಲಹರಿ, ಬನ್ನಂಜೆ ಮಹಿಳಾ ಕಲಾಬಳಗ ಮತ್ತು ಬೀದರಿನ ನೂಪುರ ನೃತ್ಯಅಕಾಡೆಮಿಯಕಲಾವಿದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.


Spread the love

Exit mobile version