ಅಭಯಚಂದ್ರ ಜೈನ್ ಕಾರು ಮಹಿಳೆಗೆ ಡಿಕ್ಕಿ ; ಶಾಸಕ‌ರ ಅಮಾನವೀಯ ವರ್ತನೆ ವಿರುದ್ದ ದೂರು ದಾಖಲು

Spread the love

ಅಭಯಚಂದ್ರ ಜೈನ್ ಕಾರು ಮಹಿಳೆಗೆ ಡಿಕ್ಕಿ ; ಶಾಸಕ‌ರ ಅಮಾನವೀಯ ವರ್ತನೆ ವಿರುದ್ದ ದೂರು ದಾಖಲು

ಮಂಗಳೂರು: ಮೂಡುಬಿದಿರೆ ಶಾಸಕ‌ ಅಭಯಚಂದ್ರ ಜೈನ್ ಅವರ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ತಮಗೆ ನೆರವು ನೀಡಲು ನಿರಾಕರಿಸಿದ ಶಾಸಕ ಮತ್ತು ಅವರ ಕಾರಿನ  ಚಾಲಕ ತಮ್ಮೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಕಿನ್ನಿಪದವು ನಿವಾಸಿ ಜೈನಾಬು ಎಂಬ ಮಹಿಳೆ ಬಜ್ಪೆ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

‘ಕಿನ್ನಿಪದವು ಬಳಿ ಶಾಸಕರ ಕಾರಿನ ಮಿರರ್ ತಗುಲಿ ನನ್ನ ಕೈಗೆ ಗಾಯವಾಗಿತ್ತು. ಕಾರು ನಿಲ್ಲಿಸಿದಾಗ ನೆರವು ನೀಡುವಂತೆ  ಕೇಳಲು ನಾನು ಯತ್ನಿಸಿದೆ. ಆಗ ಶಾಸಕರು ನನ್ನನ್ನು ತಳ್ಳಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ’ ಎಂದು ಜೈನಾಬು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಮ್ಯಾಂಗಲೊರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಜೈನಾಬಿ ಅವರು ಶುಕ್ರವಾರ ಸುಮಾರು 4.30 ಕ್ಕೆ ತಾನು ಮೆಹಂದಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಕಾರು ತನಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ನಾನು ರಸ್ತೆ ಬಿದ್ದಿದ್ದು, ಕಾರಿನಿಂದಲೇ ತನಗೆ ಬೈದಿದ್ದರು. ಆದರೂ ತಾನು ಸಾವರಿಸಕೊಂಡು ಎದ್ದುಕಾರಿನ ಬಳಿ ಬಂದು ಕಾರಿನ ಬಾಗಿಲನ್ನ ಹಿಡಿದು ನ್ಯಾಯವನ್ನು ಕೇಳಿದಾಗ ಅಭಯಚಂದ್ರಜೈನ್ ಅವರು ಸ್ವತಃ ಕಾರಿನಿಂದ ಕೆಳಗಿಳಿದು ಪಕ್ಕಕ್ಕೆ ತನ್ನನ್ನು ತಳ್ಳಿ ಅವಹೇಳನಕಾರಿಯಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಬಳಿಕ ಪಕ್ಕದ ಮನೆಯವರು ನನ್ನನ್ನು ಕಂಡು ಒಡಿ ಬಂದು ನನ್ನ ಮನೆಯವರಿಗೆ ಮಾಹಿತಿ ನೀಡಿದ್ದು ಬಳಿಕ ನನ್ನನ್ನು ಆಸ್ಪತ್ರೆಗೆ ಸೇರಿಸಿದರು ಎಂದು ಜೈನಾಬಿ ಹೇಳೀದ್ದಾರೆ.

ಇದೇ ವೇಳೆ ಜೈನಾಬಿಯ ಸಹೋದರ ಅಬ್ದುಲ್ ಸಲಾಮ್ ಮಾತನಾಡಿ ನನ್ನ ಸಹೋದರಿ ಮನೆಯತ್ತ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಭಚಂದ್ರ ಜೈನ್ ಅವರ ಕಾರು ಆಕೆಗೆ ತಾಗಿದ್ದು, ಆಕೆ ರಸ್ತೆ ಬಿದ್ದು ಗಾಯಗೊಂಡಿದ್ದಾರೆ. ಆದರೂ ಆಕೆ ಎದ್ದು ಹೋಗಿ ನ್ಯಾಯ ಕೇಳಿದರೆ ಆಕೆಯನ್ನು ಜೈನ್ ಅವಮಾನ ಮಾಡಿದ್ದಾರೆ. ಒರ್ವ ಶಾಸಕರಾಗಿ ಕನಿಷ್ಠ ಆಸ್ಪತ್ರೆಗೆ ಕೊಂಡೊಯ್ಯುವ ಸೌಜನ್ಯ ಕೂಡ ಇಲ್ಲ. ಒರ್ವ ಜವಾಬ್ದಾರಿಯುತ ಶಾಸಕರಾಗಿ ಮಹಿಳೆಯ ಜೋತೆಗೆ ಈ ರೀತಿಯ ವರ್ತನೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಮಹಿಳೆ ನೀಡಿದ ದೂರನ್ನು ಆಧರಿಸಿ ಶಾಸಕರು ಮತ್ತು ಅವರ ಚಾಲಕನ ವಿರುದ್ಧ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷದಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾಗಿರುವುದು, ಅಪಘಾತದಿಂದ ಗಾಯಗೊಳ್ಳಲು ಕಾರಣವಾಗಿರುವುದು ಮತ್ತು ಕೈಯಿಂದ ಹಲ್ಲೆ ನಡೆಸಿರುವ‌ ಆರೋಪದಡಿ ಪ್ರಥಮ ಮಾಹಿತಿ ವರದಿ ( ಎಫ್ಐಆರ್) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
1 Comment
Inline Feedbacks
View all comments
drona
7 years ago

Abaya is finished politically. This is third class behaviour.