ಅಮಾಯಕ ಹಿಂದೂ ಯುವಕರ ಬಲಿದಾನ ವ್ಯರ್ಥವಾಗಲು ಬಿಡೆವು- ಯಶಪಾಲ್ ಸುವರ್ಣ
ಉಡುಪಿ: ಮನುಕುಲವೇ ತಲೆತಗ್ಗಿಸುವ ರೀತಿಯಲ್ಲಿ ಅಮಾಯಕ ಯುವಕನೋರ್ವವನ್ನು ಹೊನ್ನಾವರದಲ್ಲಿ ಹತ್ಯೆ ಮಾಡಲಾಗಿದೆ. ಭಯೋತ್ಪಾದಕರ ಅಡ್ಡೆಯಾಗಿ ಬದಲಾಗಿರುವ ಭಟ್ಕಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಕೊಲ್ಲಿದೇಶಗಳ ಹವಾಲಾ ಹಣದ ಜೊತೆಗೆ ಐಸೀಸ್ ಉಗ್ರರ ಕ್ರೌರ್ಯವೂ ಆಮಾದಾಗಿರುವುದು ಅತ್ಯಂತ ಅಪಾಯಕಾರಿ ಸಂಗತಿ. ಹಿಂದೂ ಯುವಕರ ಚಿತೆಯಲ್ಲೇ ಚಳಿ ಕಾಯಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಸರಕಾರ ಕೂಡಲೆ ಎಚ್ಚೆತ್ತುಕೊಂಡು ವಿಕೃತ ಮತಾಂಧ ಶಕ್ತಿಗಳನ್ನು ಮಟ್ಟ ಹಾಕದೇ ಹೋದರೆ 92 ರ ಬುಗಿಲೆದ್ದ ಭಟ್ಕಳವನ್ನು ಮತ್ತೊಮ್ಮೆ ನೋಡಬೇಕಾದೀತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರು ರಾಜ್ಯ ಸರಕಾರವನ್ನು ಎಚ್ಚರಿಸಿದ್ದಾರೆ.
ಹೊನ್ನಾವರದ ಪರೇಶ್ ಮೇಸ್ತ ಎಂಬ ಯುವಕನನ್ನು ವಿನಾ ಕಾರಣ ಚಿತ್ರ ಹಿಂಸೆ ನೀಡಿ ಕೊಂದು ಹಾಕಲಾಗಿದೆ. ಈ ಘಟನೆಗೆ ಸಂಬಂಧಿಸಿ ೨೯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ ಪ್ರಮುಖ ಆರೋಪಿಗಳಾದ ಅಣ್ಣಿಗೇರಿಯ ಸಲೀಂ, ಆಸೀಫ್, ಇಮ್ತಿಯಾಝ್ ಇನ್ನೂ ಸೆರೆ ಸಿಕ್ಕಿಲ್ಲ. ಇವರು ತಪ್ಪಿಸಿಕೊಳ್ಳಲು ಕೆಲವು ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಗುಮಾನಿಯೂ ಇದೆ.ಪರೇಶ್ ಮೇಸ್ತ ಹತ್ಯೆಯ ವಿಚಾರ ತಿಳಿದಿದ್ದರೂ ಸಿಎಂ ಕಾರ್ಯಕ್ರಮಕ್ಕೆ ತೊಡಕು ಆಗಬಾರದು ಎಂಬ ಉದ್ದೇಶದಿಂದ ಪೊಲೀಸರು ಎರಡು ದಿನಗಳ ಕಾಲ ಪ್ರಕರಣವನ್ನು ಮುಚ್ಚಿಟ್ಟ ಸಂಗತಿಯೂ ಈಗ ಬಹಿರಂಗವಾಗಿದೆ. ಮುಸ್ಲಿಂ ಓಲೈಕೆಯನ್ನೇ ತನ್ನ ಪ್ರಮುಖ ಅಜೆಂಡಾವಾಗಿಸಿಕೊಂಡಿರುವ ಸಿದ್ದರಾಮಯ್ಯ ಸರಕಾರ ಈ ಪ್ರಕರಣದಲ್ಲಿ ಮಾನವೀಯತೆಯ ಎಲ್ಲೆ ಮೀರಿ ವರ್ತಿಸಿದೆ. ಪರೇಶ್ ಮೇಸ್ತ ಅನುಭವಿಸಿರ ಬಹುದಾದ ಯಾತನೆಗಳಿಗೆ, ಹರಿಸಿದ ಒಂದೊಂದು ತೊಟ್ಟು ರಕ್ತಕ್ಕೂ ಮತಾಂಧ ಶಕ್ತಿಗಳು ಮತ್ತು ಅವರನ್ನು ರಕ್ಷಿಸುತ್ತಿರುವ ರಾಜ್ಯದ ಸಿದ್ದರಾಮಯ್ಯ ಸರಕಾರ ಭಾರಿ ಬೆಲೆಯನ್ನು ತೆರಬೇಕಾಗುತ್ತದೆ.
ಕರಾವಳಿ ಜಿಲ್ಲೆಗಳಲ್ಲಿ ಕೆಲ ವರ್ಷದ ಹಿಂದೆ ತಡರಾತ್ರಿವರೆಗೆ ಕುಡಿದು ಅನುಚಿತವಾಗಿ ವರ್ತಿಸುತ್ತಿದ್ದ ಯುವಕ ಯುವತಿಯರಿಗೆ ಸಂಘಟನೆಯ ಯುವಕರು ಕಪಾಳ ಮೋಕ್ಷ ಮಾಡಿದ ಸಮಯದಲ್ಲಿ ಮಾನವ ಹಕ್ಕಿನ ಗುತ್ತಿಗೆ ಪಡೆದಿದ್ದವರೆಲ್ಲಾ ಇಲ್ಲೇ ಬಂದು ಬೀಡು ಬಿಟ್ಟಿದ್ದರು. ಆದರೆ ಈಗ ಓರ್ವ ಅಮಾಯಕ ಹಿಂದೂ ಯುವಕನನ್ನು ಅತ್ಯಂತ ಪೈಶಾಚಿಕವಾಗಿ, ಶಬ್ಧಗಳಲ್ಲಿ ವರ್ಣಿಸಲೂ ಆಸಾಧ್ಯವಾದ ರೀತಿ ಹತ್ಯೆ ಮಾಡಲಾಗಿದೆ. ಕರ್ನಾಟಕದಲ್ಲಿ ನಡೆದ 23ನೇ ಹಿಂದೂ ಕಾರ್ಯಕರ್ತನ ಹತ್ಯೆ ಇದು. ಈ ನತದೃಷ್ಟ ಹಿಂದೂ ಕಾರ್ಯಕರ್ತರಿಗೆ ಮಾನವ ಹಕ್ಕುಗಳೆ ಇಲ್ಲವೇ..? ಈ ಬಗ್ಗೆ ಯಾಕೆ ಯಾವುದೇ ಸಂಘಟನೆಗಳು ದನಿ ಎತ್ತುತ್ತಿಲ್ಲ. ಎಂದು ಅವರು ಪ್ರಶ್ನಿಸಿದ್ದಾರೆ.
ಪರೇಶ್ ಮೇಸ್ತ ಹಂತಕರನ್ನು ಕೂಡಲೆ ಬಂಧಿಸಬೇಕು. ಪರೇಶ್ ಮೇಸ್ತ ಕುಟುಂಬ ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಕುಟುಂಬ. ಈ ಕುಟುಂಬಕ್ಕೆ ಸರಕಾರ ಕೂಡಲೆ 25 ಲಕ್ಷ ಪರಿಹಾರ ಒದಗಿಸಬೇಕು, ಹಂತಕರಿಗೆ ಸಹಕರಿಸಿರುವ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಮಾಡಿ ಅವರನ್ನೂ ಈ ಪ್ರಕರಣದಲ್ಲಿ ಆರೋಪಿಗಳಾಗಿ ಪರಿಗಣಿಸಬೇಕು,ಮತಾಂಧರ ದಾಳಿಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ನರಸಿಂಹ ಮೇಸ್ತ ಮತ್ತು ಶರತ್ ಅವರಿಗೂ ನ್ಯಾಯ ಸಿಗಬೇಕಿದೆ. ಭಟ್ಕಳದಲ್ಲಿ ರಾಷ್ಟ್ರಘಾತುಕ ಶಕ್ತಿಗಳು ಬಲಗೊಳ್ಳುತ್ತಿರುವ ಬಗ್ಗೆ ಜಸ್ಟಿಸ್ ಕೆ.ಜಗನ್ನಾಥ ಶೆಟ್ಟಿ ಅವರು 1994ರಲ್ಲೇ ವರದಿ ನೀಡಿದ್ದರು. ಈ ವರದಿಯನ್ನು ರಾಜ್ಯ ಸರಕಾರ ಕೂಡಲೆ ಗಣನೆಗೆ ಪಡೆದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ತಪ್ಪಿದ್ದಲ್ಲಿ ಉತ್ತರ ಕನ್ನಡದ ಹಿಂದೂ ಸಮಾಜದ ನೋವು ಆತಂಕಗಳಿಗೆ ದಕ್ಷಿಣ ಕನ್ನಡದಲ್ಲೂ ತೀಕ್ಷ್ಣ ಪ್ರತಿಕ್ರಿಯೆ ಸಿಗುವ ಸಾಧ್ಯತೆಗಳಿವೆ. ಹಿಂದೂ ಸಮುದಾಯವನ್ನು ಸಾವಿನ ಸುಳಿಗೆ ಒಡ್ಡಿ ತಮ್ಮ ಓಟು ಬ್ಯಾಂಕನ್ನು ಭದ್ರಗೊಳಿಸುತ್ತಿರುವ ಕಾಂಗ್ರೆಸ್ ಸರಕಾರದ ಅಪಾಯಕಾರಿ ಆಟಕ್ಕೆ ನಾವು ಪೂರ್ಣವಿರಾಮ ನೀಡಲು ಸಿದ್ಧರಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.