Home Mangalorean News Kannada News ಅಮಾಸೆಬೈಲು : ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ, 30 ಕೋಣಗಳ ರಕ್ಷಣೆ, 4 ಮಂದಿ ವಶಕ್ಕೆ

ಅಮಾಸೆಬೈಲು : ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ, 30 ಕೋಣಗಳ ರಕ್ಷಣೆ, 4 ಮಂದಿ ವಶಕ್ಕೆ

Spread the love

ಅಮಾಸೆಬೈಲು : ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ, 30 ಕೋಣಗಳ ರಕ್ಷಣೆ, 4 ಮಂದಿ ವಶಕ್ಕೆ

ಕುಂದಾಪುರ: ಲಾರಿಯೊಂದರಲ್ಲಿ ಅಕ್ರಮವಾಗಿ ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಅಮಾಸೆಬೈಲು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತರನ್ನು ಹರಿಯಾಣ ರಾಜ್ಯದ ಮಂಜಿತ್ ಸಿಂಗ್ (38), ರಾಜಸ್ಥಾನದ ಪವಾನ್ ಕುಮಾರ್ (32), ಉತ್ತರ ಪ್ರದೇಶದ ಗುಲ್ವಾಂ (29) ಮತ್ತು ಹರಿಯಾಣದ ರವಿಕುಮಾರ್ (25) ಎಂದು ಗುರುತಿಸಲಾಗಿದೆ.

ಶನಿವಾರ ಬೆಳಿಗ್ಗೆ ಅಮಾಸೆಬೈಲು ಠಾಣಾಧಿಕಾರಿ ಅನಿಲ್ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಹೊಸಂಗಡಿ ಚೆಕ್ ಪೋಸ್ಟ್ ಹತ್ತಿರ ವಾಹನ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 9:30 ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ ಲಾರಿಯೊಂದು ಬರುತ್ತಿದ್ದು ಲಾರಿಯ ಚಾಲಕನಿಗೆ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದು ಚಾಲಕನು ವಾಹನವನ್ನು ನಿಲ್ಲಿಸಿದ್ದು ವಾಹನವನ್ನು ತಪಾಸಣೆ ಮಾಡಿದಾಗ ವಾಹನದ ಹಿಂದುಗಡೆ ಟರ್ಪಾಲು ಮುಚ್ಚಿದ ಬಾಡಿಯಲ್ಲಿ ಸುಮಾರು 30 ಕೋಣಗಳಿದ್ದು ಸದ್ರಿ ಕೋಣಗಳನ್ನು ಯಾವುದೇ ಮೇವು, ಆಹಾರ ನೀಡದೆ ಒಂದಕ್ಕೊಂದು ತಾಗಿಕೊಂಡು ಮಿಸುಕಾಡದಂತೆ ಹಿಂಸ್ಮಾತಕವಾಗಿ ಕಟ್ಟಿ ಹಾಕಿ ತುಂಬಿರುವುದು ಪತ್ತೆಯಾಗಿದೆ.

ಆರೋಪಿಗಳು ಕೋಣಗಳನ್ನು ಸಾಗಾಟ ಮಾಡುವ ಬಗ್ಗೆ ಯಾವುದೇ ಪರವಾನಿಗೆಯನ್ನು ಹೊಂದಿರುವುದಿಲ್ಲ ಹಾಗೂ ಜಾನುವಾರುಗಳನ್ನು ಆರೋಪಿಗಳು ವಧೆ ಮಾಡುವ ಉದ್ದೇಶದಿಂದ ಹಿಂಸ್ಮಾತಕವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಆರೋಪಿಗಳನ್ನು ವಶಕ್ಕೆ ಪಡೆದು ಲಾರಿಯಲ್ಲಿದ್ದ 30 ಕೋಣಗಳನ್ನು ರಕ್ಷಣೆ ಮಾಡಿದ್ದು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

Exit mobile version