ಅಮಿತ್ ಶಾ ಭೇಟಿ ವಿರೋಧಿಸಿ ಯುವಕಾಂಗ್ರೆಸ್ ಪ್ರತಿಭಟನೆ, ಬಂಧನ
ಮಂಗಳೂರು: ತಿರಂಗಾ ಯಾತ್ರೆಯ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಭೇಟಿಯನ್ನು ವಿರೋಧಿಸಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ನೇತ್ರತ್ವದಲ್ಲಿ ನಗರದ ಕದ್ರಿ ಸರ್ಕಿಟ್ ಹೌಸ್ ಎದುರು ನೂರಾರು ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಗೋ ರಕ್ಷಕರ ಮುಖವಾಡ ಧರಿಸಿ ದಿನನಿತ್ಯ ಅಮಾಯಕ ಯುವಕರನ್ನು ಹತ್ಯೆ ಮಾಡಲಾಗುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಮತೀಯ ಸೌಹಾರ್ದಕ್ಕೆ ಧಕ್ಕೆ ತರುವ ಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಪ್ರತಿಭಟಿಸಿದ ಯುವಕಾಂಗ್ರೆಸ್ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ಉರ್ವ ಪೋಲಿಸ್ ಠಾಣೆಗೆ ಕೊಂಡೊಯ್ದರು.