Home Mangalorean News Kannada News ಅಮೃತ ಸಂಜೀವಿನಿಯಿಂದ ಅಶಕ್ತರಿಗೆ ಸಹಾಯ ಹಸ್ತ

ಅಮೃತ ಸಂಜೀವಿನಿಯಿಂದ ಅಶಕ್ತರಿಗೆ ಸಹಾಯ ಹಸ್ತ

Spread the love
RedditLinkedinYoutubeEmailFacebook MessengerTelegramWhatsapp

ಅಮೃತ ಸಂಜೀವಿನಿಯಿಂದ ಅಶಕ್ತರಿಗೆ ಸಹಾಯ ಹಸ್ತ

ಮಂಗಳೂರು: ಸೇವೆಯೇ ಪರಮಧರ್ಮ ಎಂಬ ಮಾತಿನಂತೆ ಅಶಕ್ತ ಸಮಾಜದ ಏಳಿಗೆಯ ಪಣತೊಟ್ಟು ಸಶಕ್ತ ಯುವ ಸಮಾಜವನ್ನು  ಒಗ್ಗೂಡಿಸುತ್ತಾ ವಜ್ರದೇಹಿ ಶ್ರೀಗಳ ಉತ್ತಮ ಮಾರ್ಗದರ್ಶನದಲ್ಲಿ ತಿಂಗಳಿಗೆ ಒಂದು ಅಶಕ್ತರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ಚಾಚುವ ಕೆಲಸವನ್ನು ಸತತ 13 ತಿಂಗಳಿಂದ ಅಮೃತ ಸಂಜೀವಿನಿ(ರಿ.) ಸಂಸ್ಥೆ ಮಾಡುತ್ತಾ ಬರುತಿದೆ.
 

donation-mangalore donation-mangalore00

ಗುರುತಿಸಿದ ವ್ಯಕ್ತಿಯು ವಿವರವನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯ ಬಿಡುವ ಸಂಜೀವಿನಿಗಳು ಅದರ ಪ್ರತಿಫಲದಿಂದ ಸಂಗ್ರಹವಾದ ಮೊತ್ತವನ್ನು ತಿಂಗಳ ಮೂರನೇ ಭಾನುವಾರ ಗುರುತಿಸಿದ ವ್ಯಕ್ತಿಯ ಬಳಿಗೆ ತೆರಳಿ ಸಹಾಯ ಹಸ್ತ ಚಾಚುವ ಕಾರ್ಯವನ್ನು ನಿರಂತರ ಮಾಡುತಿದ್ದಾರೆ. ಇಷ್ಟೇ ಅಲ್ಲದೆ ಸಮಾಜ ಬದಲಾವಣೆಯ ಬೃಹತ್ತಾದ ಕನಸು ಹೊತ್ತಿರುವ ಅಮೃತಸಂಜೀವಿನಿ(ರಿ.) ಇತರ ಅನೇಕ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳುತ್ತಿದೆ.

ಕೇವಲ ಸಾಮಾಜಿಕ ಜಾಲತಾಣವನ್ನೇ ಉಪಯೋಗಿಸಿಕೊಂಡು ಸತತ 12 ಮಾಸಿಕ ಯೋಜನೆಯನ್ನು ಯಶಸ್ವಿಯಾಗಿ ಪೋರೈಸಿದ ಅಮೃತಸಂಜೀವಿನಿ(ರಿ.) ಸುಮಾರು 8ಲಕ್ಷದವರೆಗೆ ಧನ ಸಂಗ್ರಹಿಸಿ ಅಶಕ್ತರಿಗೆ ನೀಡಿ ಸಣ್ಣ ಮಟ್ಟದಲ್ಲಿ ಅವರ ಕಣ್ಣೀರೊರೆಸುವ ಕಾರ್ಯವನ್ನು ಮಾಡುವ ಮೂಲಕ ಕರಾವಳಿ ಕರ್ಣಾಟಕದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅಮೃತಸಂಜೀವಿನಿ(ರಿ.) ಸಹೃದಯಿಗಳ ನೆರವಿನಿಂದ  ತನ್ನ 13ನೇ ಮಾಸಿಕ ಯೋಜನೆಯನ್ನು ಯಶಸ್ವಿಯಾಗಿ ಪೋರೈಸಿದೆ.

ಮನೆಗೆ ಆದಾರ ಸ್ಥಂಬವಾಗಿದ್ದ ಮನೆಯ ಯಜಮಾನ ಚನ್ನಿಯಪ್ಪ ನಾಯ್ಕ್ ಮಾರಕ ರೋಗದಿಂದ ಬಳಲುತಿದ್ದರೆ ಮನೆಯ ಇಡೀ ಜವಾಬ್ದಾರಿ ಅಂದರೆ ದೊಡ್ಡ ಮಗಳ ಮದುವೆಗೆ ಮಾಡಿದ ಸಾಲ, ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಖರ್ಚು, ಮನೆಯ ಯಜಮಾನನ ಚಿಕಿತ್ಸಾ ವೆಚ್ಚ ಇಷ್ಟೇ ಅಲ್ಲದೆ ಪ್ರಾಯಕ್ಕೆ ಬಂದಿರುವ ಆ ಎರಡು ಹೆಣ್ಣು ಮಕ್ಕಳ ಮದುವೆಯ ಚಿಂತೆ ಇವೆಲ್ಲವನ್ನು ಸರಿದೂಗಿಸಲು ಮನೆಯ ಯಜಮಾನಿಗೆ ಇರುವ ಉದ್ಯೋಗ ಬೀಡಿ ಕಟ್ಟುವುದು ಇವರ ಕಷ್ಟವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಸಂಜೀವಿನಿಗಳು 13ನೇ ಮಾಸಿಕ ಯೋಜನೆಗೆ ಈ ಕುಟುಂಬವನ್ನು ಆರಿಸಿ ಅವರ ಕುಟುಂಬಕ್ಕೆ 90,000rs ಚೆಕ್ ಹಾಗೂ ಧರ್ಮ ಪ್ರಜ್ಞೆ ಜಾಗೃತಿಗೊಳಿಸುವ ಉದ್ದೇಶದಿಂದ ಭಗವದ್ಗೀತೆ ನೀಡುವ ಮೂಲಕ 13ನೇ ಮಾಸಿಕ ಯೋಜನೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿತು.

ಅಷ್ಟೇ ಅಲ್ಲದೆ ತುರ್ತು ಯೋಜನೆಯ ರೂಪದಲ್ಲಿ ವೇಣೂರಿನಲ್ಲಿ ನೆಲೆಸಿರು ಒಂದು ಕುಟುಂಬದ ಮನೆಯ ಯಜಮಾನನ ಅಗಲುವಿಕೆಯಿಂದ ಬಹು ಕಷ್ಟದಲ್ಲಿದ್ದ ದಿ. ಸುರೇಶ್ ಅವರ ಕುಟುಂಬಕ್ಕೆ rs5,000 ಗಳ ಸಹಾಯ ನೀಡುವ ಮೂಲಕ ಒಟ್ಟಾರೆ 13ನೇ ಮಾಸಿಕ ಯೋಜನೆಯಲ್ಲಿ rs95,000 ಗಳ ಸಹಾಯ ಸಂಗ್ರಹಿಸಿ ಅಶಕ್ತರ ಕಣ್ಣೀರನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸುವ ಪ್ರಯತ್ನವನ್ನು ಅಮೃತಸಂಜೀವಿನಿ® ಮಾಡಿದೆ.

 


Spread the love

Exit mobile version