ಅಮೇರಿಕಾದ ಲಾಸಂಜಲೀಸ್ ನಲ್ಲಿ ನೂತನ ಶ್ರೀ ಕೃಷ್ಣ ಬೃಂದಾವನ ದೇವಾಲಯ

Spread the love

ಉಡುಪಿಯ ಶ್ರೀ ಪುತ್ತಿಗೆ ಮಠದ ಅಂಗಸಂಸ್ಥೆಯಾದ  ಶ್ರೀ ಕೃಷ್ಣ ಬೃಂದಾವನ ಲಾಸಂಜಲೀಸ್ ನಲ್ಲಿ ೨೦೦೪ರಲ್ಲೇ ವುಡ್ಲ್ಯಾಂಡ್ ಹಿಲ್ಸ್ ನಲ್ಲಿ ಸ್ಥಾಪಿಸಲಾಗಿತ್ತು. ದೈನಂದಿನ ಪೂಜೆ, ಆರಾಧನೆಗಳು, ಹಬ್ಬ ಹರಿದಿನಗಳ ಆಚರಣೆ  ಹಾಗೂ ಆಧ್ಯಾತ್ಮಿಕ ವಿಚಾರದಲ್ಲಿ  ಸಾವಿರಾರು ಭಕ್ತಾದಿಗಳಿಗೆ ಶ್ರೀ ಕೃಷ್ಣ ಬೃಂದಾವನ ಕೇಂದ್ರಬಿಂದುವಾಗಿತ್ತು. ಪೂಜಾ ಮಂದಿರದ ಮತ್ತು ವಾಹನ ನಿಲುಗಡೆಯ ಸ್ಥಳಾವಭಾವದ ಕಾರಣದಿಂದ ಶ್ರೀ ಮಠದ ಆಡಳಿತವರ್ಗದವರು  ನೂತನ ನಿವಾಸದ ಹುಡುಕಾಟದಲ್ಲಿ ತೊಡಗಿದರು.

1-vrindavan-20150713

ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದ ಶ್ರೀ ಕೃಷ್ಣ ಬೃಂದಾವನಕ್ಕೆ ಥೌಸಂಡ್ ಓಕ್ಸ್ ನ ಬಳಿಯಲ್ಲಿ ೫ ಎಕರೆ  ವಿಶಾಲವಾದ ಸ್ಥಳ ದೊರಕಿತು . ಜೂನ್ ೨೮,೨೦೧೫ ಭಾನುವಾರದಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ  ದಿವ್ಯ ಉಪಸ್ಥಿತಿಯಲ್ಲಿ ಹಾಗು ಬನ್ನಂಜೆ ಗೋವಿಂದಾಚಾರ್ಯರ ಉಪಸ್ಥಿತಿಯಲ್ಲಿ ನೂತನ ದೇವಸ್ಥಾನದ ಪ್ರತಿಷ್ಟಾಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಶ್ರೀ ಮಠದ ವಿವಿಧ ಶಾಖೆಗಳಿಂದ ಅನೇಕ ಹಿರಿಯ ಅರ್ಚಕರು ಬಂದು ನಡೆಸಿಕೊಟ್ಟರು. ಸುಮಾರು ೮೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಕ್ಯಾಲಿಫೋರ್ನಿಯ ರಾಜ್ಯದ ೩೯ನೇ ಕಂಗ್ರೆಸ್ಸನಲ್  ಜಿಲ್ಲೆಯ ,ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟ್ಟಿಟಿವ್ ಸದಸ್ಯರಾದ ಶ್ರೀಯುತ ಎಡ್ ರಾಯ್ಸ್ ರವರೂ  ಉಪಸ್ಥಿತರಿದ್ದರು.

2-vrindavan-20150713-001

 ಬನ್ನಂಜೆ ಹಾಗು ಶ್ರೀಪಾದರ ಮಧ್ಯೆ ಕುಶಲೋಪರಿ….. 

3-vrindavan-20150713-002

ಶ್ರೀಪಾದರಿಂದ ಆಶೀರ್ವಚನ…

4-vrindavan-20150713-003

ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟ್ಟಿಟಿವ್ ಸದಸ್ಯರಾದ ಶ್ರೀಯುತ ಎಡ್ ರಾಯ್ಸ್ ರವರಿಗೆ ಸನ್ಮಾನ

5-vrindavan-20150713-004

ಅರ್ಚಕರಿಂದ ಶ್ರೀ ಶ್ರೀನಿವಾಸನಿಗೆ ಕಲ್ಯಾಣ ಮಹೋತ್ಸವದ ಸಂಭ್ರಮ… 6-vrindavan-20150713-005

ಸಂಜೆ ಸಾಂಸ್ಕೃತಿಕ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು. ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರು “ಆಧುನಿಕ ಯುಗದಲ್ಲಿ ಭಗವದ್ಗೀತೆ ಹಾಗೂ ಮಧ್ವ ಶಾಸ್ತ್ರದ ಪ್ರಾಮುಖ್ಯತೆ  ” ಯ ಬಗ್ಗೆ ಪ್ರವಚನವನ್ನಿತ್ತು ನೂತನ ದೇವಾಲಯದ ಎಲ್ಹ್ಗೆಗೆ ಶುಭ ಹಾರೈಸಿದರು. ಬಳಿಕ ಕರ್ನಾಟಕದ ಸುಪ್ರಸಿದ್ದ ಶಾಸ್ತ್ರೀಯ ಸಂಗೀತಗಾರರಾದ ಡಾ .ಆರ್ . ಕೆ . ಪದ್ಮನಾಭನ್ ಹಾಗು ಸಂಗಡಿಗರಿಂದ ಸಂಗೀತಕಛೇರಿ ಏರ್ಪಡಿಸಲಾಗಿತ್ತು . ಊರ ಪರಊರ ಭಕ್ತಾದಿಗಳೆಲ್ಲ ಬಂದು ದೇವರ ಅನುಗ್ರಹ ಪ್ರಸಾದ ಸ್ವೀಕರಿಸಿ ಪುನೀತರಾದರು.


Spread the love