ಅಯೋಧ್ಯೆ ತೀರ್ಪು ಮರುಪರಿಶೀಲನಾ ಆರ್ಜಿ ಹಾಕುವ ಮುಸ್ಲೀಂ ಪರ್ಸನಲ್ ಲಾ ಬೋರ್ಡ್ ನಿರ್ಧಾರ ಸರಿಯಲ್ಲ – ಬಾಬಾ ರಾಮ್ ದೇವ್

Spread the love

ಅಯೋಧ್ಯೆ ತೀರ್ಪು ಮರುಪರಿಶೀಲನ ಆರ್ಜಿ ಹಾಕುವ ಮುಸ್ಲೀಂ ಪರ್ಸನಲ್ ಲಾ ಬೋರ್ಡ್ ನಿರ್ಧಾರ ಸರಿಯಲ್ಲ – ಬಾಬಾ ರಾಮ್ ದೇವ್

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲನಾ ಅರ್ಜಿ ಹಾಕಲು  ಮುಸ್ಲೀಂ ಪರ್ಸನಲ್ ಲಾ ಬೋರ್ಡ್ ಮಾಡಿದ ನಿರ್ಧಾರ ಸರಿಯಲ್ಲ ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಅವರು ಸೋಮವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸುಪ್ರೀಂ ಕೋರ್ಟಿನ ತೀರ್ಪಿನ  ಮೇಲೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮರು ಪರಿಶೀಲನಾ ಅರ್ಜಿ ಹಾಕಲು ಸ್ವತಂತ್ರವಾಗಿದೆ. ಸಂವಿಧಾನದಲ್ಲಿ ಅರ್ಜಿ ಹಾಕಲು ಅವಕಾಶ ಇದೆ ಆದರೆ ಸುಪ್ರೀಂ‌ಕೋರ್ಟ್ ನ‌ ಪಂಚ ನ್ಯಾಯಾಧೀಶರು ಕೊಟ್ಟ ತೀರ್ಪು ಒಪ್ಪದಿದ್ದರೆ ಹೇಗೆ ಎಂದು ಬಾಬಾ ರಾಮ್ ದೇವ್ ಪ್ರಶ್ನಿಸಿದರು.

 ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮರು ಪರಿಶೀಲನಾ ಅರ್ಜಿ ಹಾಕುವುದರಿಂದ ಹೆಚ್ಚಿನ ಲಾಭವಿಲ್ಲ ಇದರಿಂದ ಮುಸ್ಲೀಂ ಸಹೋದರರಿಗೆ ಹಿಂದೂ ಸಹೋದರ ರ ಬಗ್ಗೆ ಅಸಹಿಷ್ಣುತೆ ಇದೆ ಅನ್ನೋ ಸಂದೇಶ ಹೋಗಲಿದೆ.  ಸುಪ್ರೀಂ‌ಕೋರ್ಟ್ ಆದೇಶ ಒಪ್ಪಲ್ಲ ಅನ್ನೋದು ಸರಿಯಲ್ಲ ಇದರಿಂದ ರಾಮಮಂದಿರ ನಿರ್ಮಾಣ ವಿಳಂಬ ಆಗಲ್ಲ ಸುಪ್ರೀಂ ಕೋರ್ಟ್ ಶೀಘ್ರ ವಿಚಾರಣೆ ನಡೆಸುತ್ತೆ ಅನ್ನೋ ವಿಶ್ವಾಸ ಇದೆ ಎಂದರು.

 ತುಳಸಿಯಿಂದ ಮೊಬೈಲ್ ರೇಡಿಯೇಷನ್ ತಡೆಯಬಹುದು ಬಾಬಾ ರಾಮ್ ದೇವ್ ಹೇಳಿಕೆಗೆ ವಿಚಾರವಾದಿಗಳ ವಿರೋಧ  ವ್ಯಕ್ತಪಡಿಸಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ತುಳಸಿಯಿಂದ ಮೊಬೈಲ್ ರೇಡಿಯೇಷನ್ ಕಡಿಮೆ ಯಾಗುತ್ತೆ ಇದನ್ನು ಯಾರು ಕೂಡಾ ಪ್ರಾಯೋಗಿಕವಾಗಿ ಇದನ್ನು ಪ್ರಯತ್ನಿಸಬಹುದು ವೈಜ್ಞಾನಿಕ ಸಂಶೋಧನೆಗೆ ಸಮಯ ಹಿಡಿಯಬಹುದು. ಕೆಲವರಿಗೆ ತುಳಸಿ, ದನ, ವೇದದ ಬಗ್ಗೆ ಮಾತನಾಡಿದರೆ ಸರಿ ಅನಿಸಲ್ಲ ಅದನ್ನು ಸುಳ್ಳು ಎಂದು ಸಾಬೀತು ಮಾಡುವ ತರಾತುರಿ ಅವರಲ್ಲಿ ಹೆಚ್ಚಾಗಿದೆ.  ವೇದ ಪರಂಪರೆಯನ್ನು ಒಪ್ಪುವುದರಲ್ಲಿ ತೊಂದರೆ ಇಲ್ಲ ವೇದದಲ್ಲಿ ವೈಜ್ಞಾನಿಕ‌ ಸತ್ಯಗಳು ಅಡಗಿವೆ  ವಿಕಿರಣ ತಡೆಯುವ ಗುಣ ತುಳಸಿಗೆ ಇದೆ ಅದನ್ನು ಮನುಷ್ಯನ‌ ಮೇಲೆ ಪ್ರಯೋಗ ಮಾಡಿ ನೋಡಿದ್ದೇನೆ ಎಂದರು.

ಪೆರಿಯಾರ್ ಬಗ್ಗೆ ರಾಮ್ ದೇವ್ ಅವಹೇಳನಕಾರಿ ಹೇಳಿಕೆ ವಿಚಾರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಡಿಂಗ್  ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು  ಪೆರಿಯಾರ್ ದೇವಿ ದೇವತೆಗಳು ಸುಳ್ಳು, ವ್ಯಭಿಚಾರಿಗಳು, ದೇವತೆಗಳಿಗೆ ಚಪ್ಪಲಿ ಹಾರ ಹಾಕಿ ಅಂದಿದ್ದರು.  ನಾನು ಪೆರಿಯಾರ್ ಗೆ ಚಪ್ಪಲ್ಲಿಯಲ್ಲಿ ಹೊಡೆಯಿರಿ ಅಂದ್ರೆ ಸರಿಯಾಗುತ್ತಾ? ನನ್ನ ವಿರೋಧ ಇರುವುದು ಪೆರಿಯಾರ್ ಅವರ ವಿಚಾರಧಾರೆ ಯ ಬಗ್ಗೆ ಹಾಗಂತ ನಮ್ಮ ಪೂರ್ವಜರಿಗೆ ಬಯ್ಯೋದು, ಅವಮಾನಿಸುವುದು ಸರಿಯಾ? ಎಂದು ಪ್ರಶ್ನಿಸಿದರು.

ನಮ್ಮ ಸಮಾಜದಲ್ಲಿ ಅಸಮಾನತೆ ಇತ್ತು ನಿಜ ಆದರೆ ಎಲ್ಲಕ್ಕೂ ಬ್ರಾಹ್ಮಣರೇ ಹೊಣೆ ಅನ್ನೋದು ಎಷ್ಡು ಸರಿ. ನಮ್ಮ ಪ್ರಾಚೀನ ಪರಂಪರೆ ಢೋಂಗಿ ಅಂತಾರೆ  ರಾಮ, ಕೃಷ್ಣ ಎಲ್ಲರೂ ಸುಳ್ಳು ಅಂತಾರೆ ಈ ವಿಚಾರದಲ್ಲಿ ದಲಿತರು ಅನಗತ್ಯವಾಗಿ ನನಗೆ ಬಯ್ತಿದಾರೆ  ನನಗೆ ಚಪ್ಪಲಿ ಯಲ್ಲಿ ಹೊಡೆಯೋದಾಗಿ ಹೇಳ್ತಾರೆ ಆದರೆ ಎಂದೂ ಕೂಡ ನಾನು ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ. ಅಂಬೇಡ್ಕರ್ ಜಾತಿಮುಕ್ತ ಭಾರತ ಸಮರ್ಥನೆ ಮಾಡಿದವರು  ಆದರೆ ಅಂಬೇಡ್ಕರ್ ಅನುಯಾಯಿಗಳ ವಾದ ನಾನು ಒಪ್ಪಲ್ಲ ಎಂದರು.

ಬ್ರಾಹ್ಮಣರು, ಕ್ಷತ್ರೀಯರು ವೈಶ್ಯರು ಹೊರಗಿಂದ ಬಂದವರು ಅಂತಾರೆ ಆದರೆ  ಈ ವಿಚಾರ ನಾನು ಒಪ್ಪಲ್ಲ ಇದು ವೈಚಾರಿಕ ಭಯೋತ್ಪಾಧನೆ ನನ್ನ ಹೇಳಿಕೆ  ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಅಷ್ಟೇ ಎಂದರು.


Spread the love