ಅಯ್ಯೊ ಶೃದ್ಧಾ ದುಬಾಯಿಯಲ್ಲಿ ಸ್ಪೋಟಿಸಿದ ನಗೆಗಡಲ್ಲಿ ತೇಲಾಡಿದ ಪ್ರೇಕ್ಷಕರು

Spread the love

ಅಯ್ಯೊ ಶೃದ್ಧಾ ದುಬಾಯಿಯಲ್ಲಿ ಸ್ಪೋಟಿಸಿದ ನಗೆಗಡಲ್ಲಿ ತೇಲಾಡಿದ ಪ್ರೇಕ್ಷಕರು

ಅರಬ್ ಸಂಯುಕ್ತ ಸಂಸ್ಥಾನದ ಗಿನ್ನೆಸ್ ದಾಖಲೆಗಳ ನಗರ ಎಂದೇ ಪ್ರಖ್ಯಾತಿಯನ್ನು ಪಡೆದಿದಿರುವ ವಾಣಿಜ್ಯ ನಗರಿ ದುಬಾಯಿ2024 ಮೇ 18 ಸಂಜೆ ಇಂಡಿಯನ್ ಹೈಸ್ಕೂಲ್ ದುಬಾಯಿ ಶೇಖ್ ರಾಶೀದ್ ಆಡಿಟೋರಿಯಂನಲ್ಲಿ ಅನಿವಾಸಿ ಭಾರತೀಯ ಪ್ರೇಕ್ಷಕರ ನಗೆ ಸ್ಪೋಟಗೊಂಡು ಮರಳು ನಾಡಿನಲ್ಲಿ ಪ್ರತಿಧ್ವನಿಸಿದೆ. “ಅಯ್ಯೊ ಸೋ ಮಿನಿ ಥಿಂಗ್ಸ್ ವಿತ್ ಶೃದ್ಧಾಜೈನ್ ಎ ಸ್ಟ್ಯಾಂಡ್‍ಅಪ್ ಶೋ”ನ ಪೋಸ್ಟರ್ ಎಲ್ಲರ ಮೊಬೈಲ್ ನಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಬಹು ದಿನಗಳ ಆತುರ ಕಾತರದಿಂದ ನಿರೀಕ್ಷೆಯಲ್ಲಿದ್ದ ಯು.ಎ.ಇ. ಜನತೆಗೆ ಮೇ 18ನೇ ತಾರೀಕು ಸಂಜೆ7.30 ಕ್ಕೆ ವೇದಿಕೆಯ ಮೇಲೆ ಅಯ್ಯೊ ಶೃದ್ಧಾ ಪ್ರತ್ಯಕ್ಷವಾದಂತೆ ಕಡು ಕೆಂಪು, ಕಪ್ಪು ವಸ್ತ್ರಧಾರಿಣಿಯ ಕೋಲ್ಮಿಂಚು ಮೂಡಿಸಿದ ಅನುಭವ. ಪ್ರಾರಂಭದ ಕ್ಷಣದಿಂದ ಕೊನೆಯವರೆಗೂ ಶೃದ್ಧಾಳ ಅರ್ಥಪೂರ್ಣ ನವಿರಾದ ಹಾಸ್ಯ ಮಾಲೆ ಪಟಾಕಿಯಂತೆ ಸಿಡಿಯುತಿದ್ದಂತೆ ಪ್ರೇಕ್ಷಕರ ನಗೆ, ಚಪ್ಪಾಳೆ ಹರ್ಷೋದ್ಘಾರ ಕ್ಷಣಕ್ಷಣ ಮುಗಿಲು ಮುಟ್ಟಿದ್ದು ಶೇಕ್ ರಾಶೀದ್ ಆಡಿಟೋರಿಯಂನಲ್ಲಿಇಂದೆಂದೂ ನಾವು ನೋಡಿರಲಿಲ್ಲ.

ನಮ್ಮ ದಿನ ನಿತ್ಯಜೀವನದ ಅತ್ಯಂತ ಅಮೂಲ್ಯವಾದ ಅವಿಸ್ಮರಣೆಯ ಕ್ಷಣಗಳನ್ನು ಅರ್ಥಗರ್ಭಿತವಾಗಿ ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದು ಹಾಸ್ಯ ಲೇಪನವಾಗಿಸಿ ಮುಟ್ಟಿಸುವಲ್ಲಿ ಅಯ್ಯೊ ಶ್ರದ್ಧಾ ಜನ ಮನಸೆಳೆದು ಒಂದು ಐತಿಹಾಸಿಕ ದಾಖಲೆಯನ್ನು ದುಬಾಯಿಯ ಪ್ರತಿಷ್ಠಿತ ವೇದಿಕೆಯಲ್ಲಿ ಸಾಕ್ಷೀಕರಿಸಿಸಿರುವುದು ಇದೆ ಪ್ರಥಮವೆಂದೇ ಹೇಳಬಹುದಾಗಿದೆ.

ಬೆಂಗಳೂರಿನ “ಲೈವ್ ಟ್ರೀ ಎಂಟರ್ಟೈನ್ ಮೆಂಟ್” ನ ನಿರ್ದೇಶಕರು ಶ್ರೀಯುತರುಗಳಾದ ಶೀಕರ್ ಕೆ.ವಿ. ಮತ್ತು ಶರತ್ ವತ್ಸಾ ಆಯೋಜನೆಯಲ್ಲಿ ಪ್ಲಾಟಿನಂಟಿಕೆಟ್ಸ್ ಪ್ಲಾಟ್ ಫಾರಂ ನಲ್ಲಿ ಮುಂಗಡ ಬುಕ್ಕಿಂಗ್ ನಲ್ಲಿ ಟಿಕೆಟ್ ಗಳು ಪೂರ್ತಿಯಾಗಿ ಮಾರಾಟವಾಗಿ ಸಭಾಂಗಣ ಪೂರ್ತಿಯಾಗಿ ಭರ್ತಿಯಾಗಿದ್ದು ಒಂದು ಅಭೂತಪೂರ್ವ ಕಾರ್ಯಕ್ರಮಕ್ಕೆ ದುಬಾಯಿ ಶೇಖ್ ರಾಶೀದ್ ಆಡಿಟೋರಿಯಂ ಸಾಕ್ಷಿಯಾಯಿತು.

ದುಬಾಯಿಯ ದಿನ ನಿತ್ಯದ ಬದುಕಿನ ಪಯಣದಲ್ಲಿ ಅವಿಶ್ರಾಂತ ದುಡಿತ, ಟ್ರಾಫಿಕ್ ಜಾಂ ನ ಕಹಿ ಅನುಭವ, ಕೆಲಸ ಕಾರ್ಯಗಳ ಒತ್ತಡ, ಸಿಗುವ ರಜಾದಿನದಲ್ಲಿ ನಿರಾಳವಾದ ವಿಶ್ರಾಂತಿಯ ನಿರೀಕ್ಷೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಅಯ್ಯೊ ಶೃದ್ಧಾ ನೀಡಿರುವ ಕಾರ್ಯಕ್ರಮ ಅವಿಸ್ಮರಣೀಯ ಅನುಭವ ನೀಡಿದೆ.

ಅಯ್ಯೊ ಶೃದ್ಧಾ ಮತ್ತು ಆಯೋಜಕರ ಇಂತಹ ಪ್ರದರ್ಶನ ವಿಶ್ವದಾದ್ಯಂತ ನಿತ್ಯ ನಿರಂತರವಾಗಿ ಪಸರಿಸುತಿರಲಿ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸುತ್ತಿರುವ ವಿಶ್ವದಾದ್ಯಂತ ಅಯ್ಯೊ ಶೃದ್ದಾಳ ಪ್ರದರ್ಶನ ಲೈವ್ ಪ್ರದರ್ಶನದ ಮೂಲಕ ನೋಡುವಂತಾಗಲಿ.


Spread the love