ಅರ್ಥಶಾಸ್ತ್ರ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಮ0ಗಳೂರು: “ಆರ್ಥಿಕ ಅಭಿವೃಧ್ಧಿಯ ಧಾವಂತದಲ್ಲಿ ಪರಿಸರಕ್ಕೆ ಉಂಟಾಗುತ್ತಿರುವ ಹಾನಿಯನ್ನು ಕಡೆಗಣಿಸಿದರೆ ಮುಂದೆ ಅತ್ಯಂತ ದಾರುಣ ದಿನಗಳನ್ನು ಎದುರಿಸಬೇಕಾದೀತು ಹಾಗೂ ನೆಲ ಜಲ ಗಾಳಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ” ಎಂದು ಪ್ರೊ. ರಾಜಮಣಿ ರಾಮಕುಂಜ ಅಭಿಪ್ರಾಯ ಪಟ್ಟರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು, ರಥಬೀದಿ ಇಲ್ಲಿನ ಅರ್ಥಶಾಸ್ತ್ರ ವಿಭಾಗ ಏರ್ಪಡಿಸಿದ ವಿಷೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ “ಮಾನವನ ಮಿತಿಮೀರಿದ ದುರಾಸೆ ಮತ್ತು ಕೊಳ್ಳುಬಾಕ ಸಂಸ್ಕøತಿ ನಮ್ಮ ಪರಿಸರಕ್ಕೆ ದಕ್ಕೆಯುಂಟುಮಾಡುತ್ತಿದೆ” ಎಂದು ತಿಳಿಸಿದರು
ಡಾ. ಶಿವರಾಮ್ ಇವರು ಪರಿಸರ ಮಾಲಿನ್ಯದ ಮಾರಕಗಳನ್ನು ವಿವರಿಸಿದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಪುರುಷೋತ್ತಮ ಭಟ್ ಯನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಭವ್ಯಶ್ರೀ ಉಪಸ್ಥಿತರಿದ್ದರು.