ಅಶಕ್ತರಿಗೆ ಮನೆ ನಿರ್ಮಾಣದ ಕೆಲಸವು ಪ್ರಜಾಪ್ರಭುತ್ವದ ದೇವ ಕಾರ್ಯ : ಸತೀಶ್ ಅಡಪ್ಪ

Spread the love

ಅಶಕ್ತರಿಗೆ ಮನೆ ನಿರ್ಮಾಣದ ಕೆಲಸವು ಪ್ರಜಾಪ್ರಭುತ್ವದ ದೇವ ಕಾರ್ಯ : ಸತೀಶ್ ಅಡಪ್ಪ

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಸೋಮೇಶ್ವರ ಬಂಟರ ಸಂಘ, ಲಯನ್ಸ್ ಕ್ಲಬ್ ಕಾವೇರಿ, ಮಂಗಳೂರು ಇವರುಗಳ ಸಹಯೋಗದೊಂದಿಗೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಪಿಲಾರ್ ದಾರಂದ ಬಾಗಿಲಿನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ  ಐಕಳ ಹರೀಶ್ ಶೆಟ್ಟಿ ಅವರ ಬಹುರೂಪಿತ ಕನಸಿನ“ಆಶ್ರಯ” ಯೋಜನೆಯ ಮುಖಾಂತರ ವಿನೋದ ಶೆಟ್ಟಿಯವರಿಗೆ ಅವರ 2.5ಸೆಂಟ್ಸ್ ಜಾಗದ ನಿವೇಶನದಲ್ಲಿ ನೂತನವಾಗಿ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

 ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್ ರವರು ಒಕ್ಕೂಟದ ಕಾರ್ಯಕ್ರಮಗಳನ್ನು ಪ್ರಸ್ತಾಪಿಸುತ್ತಾ ಅಶಕ್ತ ಫಲಾನುಭವಿಗಳಿಗೆ ಮನೆಯನ್ನು ನಿರ್ಮಿಸಿ ಕೊಡುವ ಕೆಲಸವು ಒಂದು ದೇವ ಕಾರ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಭಾಗವಹಿಸಿ ಇಂಥ ಯೋಜನೆಗಳು ಫಲಿಸುವುದು ಸ್ತುತ್ಯರ್ಹವಾದ ಒಂದು ಮಾದರಿ ನಡೆ ಎಂದು ನುಡಿದರು .

ಈ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿಕಟಪೂರ್ವ ಗೌರವ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ , ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ,ಮಾಜಿ ಜಿಲ್ಲಾ ಲಯನ್ ಗವರ್ನರ್ ಕವಿತಾ ಶಾಸ್ತ್ರಿ ಶುಭ ಹಾರೈಸಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು .

ಸೋಮೇಶ್ವರ ಬಂಟರ ಸಂಘದ ಗೌರವ ಅಧ್ಯಕ್ಷ ಯು.ಸುಧಾಕರ್ ಭಂಡಾರಿ, ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ವರ್ಕಾಡಿ,ಪ್ರಧಾನ ಸಂಚಾಲಕರಾದ ಗಂಗಾಧರ ಶೆಟ್ಟಿ ಉಳ್ಳಾಲ ,ಲಯನ್ಸ್ ಕ್ಲಬ್ ಕಾವೇರಿ ಅಧ್ಯಕ್ಷೆ ಶಾಲಿನಿ ರೈ,ಸೋಮೇಶ್ವರ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷರಾದ ಯಶು ಪಕ್ಕಳ ತಲಪಾಡಿ ,ಸದಸ್ಯರುಗಳಾದ ಮೋಹನ್ ಶೆಟ್ಟಿ ಕುಂಪಲ, ಗಣೇಶ್ ಶೆಟ್ಟಿ ಬೋಡಂಗಿಲ ಆನಂದ್ ಶೆಟ್ಟಿ, ಪ್ರದೀಪ್ ಕಿಲ್ಲೆ, ರಾಜಾರಾಮ ಅಡ್ಯಂತಾಯ . ರವೀಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯ ಪ್ರತಿನಿಧಿ ಚಂದ್ರಶೇಖರ ಶೆಟ್ಟಿಯವರು ಕಾರ್ಯಕ್ರಮ ಸಂಯೋಜಿಸಿದರು


Spread the love