ಅಶ್ಲೀಲ ವೀಡಿಯೋ ವಿಚಾರದಲ್ಲಿ ಬಿಜೆಪಿ ನಾಯಕರ ಮೌನದ ಹಿಂದಿರುವ ರಹಸ್ಯವೇನು? – ವೆರೋನಿಕಾ ಕರ್ನೇಲಿಯೋ

Spread the love

ಅಶ್ಲೀಲ ವೀಡಿಯೋ ವಿಚಾರದಲ್ಲಿ ಬಿಜೆಪಿ ನಾಯಕರ ಮೌನದ ಹಿಂದಿರುವ ರಹಸ್ಯವೇನು? – ವೆರೋನಿಕಾ ಕರ್ನೇಲಿಯೋ

ಹಾಸನದ ಯುವ ರಾಜಕಾರಣಿಯದ್ದು ಎನ್ನಲಾಗುತ್ತಿರುವ ಅಶ್ಲೀಲ ವೀಡಿಯೋ ಪ್ರಕರಣದ ಕುರಿತು ರಾಜ್ಯದ ಸೋ ಕಾಲ್ಡ್ ಬಿಜೆಪಿ ನಾಯಕರು ಯಾಕೆ ಮೌನ ವಹಿಸಿದ್ದಾರೆ ಅವರಿಗೆ ಈ ರಾಜ್ಯದ ಮಹಿಳೆಯರ ಮಾನ ಪ್ರಾಣದ ಕುರಿತು ಯಾವುದೇ ರೀತಿಯ ಕಾಳಜಿ ಇಲ್ಲವೇ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಪ್ರಶ್ನಿಸಿದ್ದಾರೆ.

ಒರ್ವ ರಾಜಕಾರಣಿಯಾಗಿ ತನಗೆ ಅಧಿಕಾರವಿದೆ ಎಂಬ ದರ್ಪದಿಂದ ಎರಡು ಸಾವಿರಕ್ಕೂ ಅಧಿಕ ಮಹಿಳೆಯರನ್ನು ತನ್ನ ಚಪಲತೆಗೆ ಬಳಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳೇ ಸಾಕ್ಷಿ. ಈ ವೀಡಿಯೋಗಳು ಹಾಸನದ ಯುವ ರಾಜಕಾರಣಿ ಪ್ರಜ್ವಲ್ ರೇವಣ್ಣ ಅವರದ್ದೇ ಎಂದು ಪ್ರಾಥಮಿಕ ತನಿಖೆಗಳಿಂದ ಸಾಬೀತಾಗಿದ್ದು ರಾಜ್ಯ ಸರಕಾರ ಮಹಿಳಾ ಅಯೋಗದ ಮನವಿ ಮೇರೆಗೆ ಎಸ್ ಐಟಿ ತನಿಖೆಗೆ ಆದೇಶ ನೀಡಿದೆ.

ಸದಾ ಮಹಿಳೆಯರನ್ನು ಮಾತೆ ಎಂದು ಸಂಬೋಧನೆ ಮಾಡುವ ಬಿಜೆಪಿ ಈ ವಿಚಾರದಲ್ಲಿ ಮೌನ ವಹಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ಮಹಿಳೆಯರು ಎಲ್ಲೆಲ್ಲೋ ಹೋಗುತ್ತಿದ್ದಾರೆ ಎಂದು ತನ್ನ ನಾಲಗೆಯನ್ನು ಹರಿ ಬಿಟ್ಟ ಬಿಜೆಪಿ ನಾಯಕಿ ಶ್ರುತಿ ಅವರಿಗೆ ಈ ಪ್ರಕರಣ ಗಮನಕ್ಕೆ ಬಂದಿಲ್ಲ ಅನಿಸುತ್ತದೆ. ಕಾಂಗ್ರೆಸ್ ಸರಕಾರ ಇದ್ದರೆ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಬೊಬ್ಬೆ ಹಾಕುವ ಬಿಜೆಪಿಯ ಶೋಭಾ ಕರಂದ್ಲಾಜೆ, ಮಾಳವಿಕ, ಭಾರತೀ ಶೆಟ್ಟಿ ಸಹಿತ ಎಲ್ಲಾ ಮಹಿಳಾ ನಾಯಕಿಯರು ಏನು ನಿದ್ದೇ ಮಾಡಿತ್ತಿದ್ದಾರೆಯೇ? ಇಷ್ಟೊಂದು ಸಂಖ್ಯೆಳ ಮಹಿಳೆಯರನ್ನು ತನ್ನ ವೈಯುಕ್ತಿಕ ತೀಟೆ ತೀರಿಸಿ ಕೊಳ್ಳಲು ಬಳಸಿಕೊಂಡಾಗಲೂ ಸಹ ಇದರ ಬಗ್ಗೆ ಚಕಾರವೆತ್ತದಿರುವುದು ಬಿಜೆಪಿಗರ ಮಹಿಳಾ ಪರ ಕಾಳಜಿ ಏನು ಎನ್ನುವುದನ್ನು ತೋರಿಸುತ್ತದೆ.

ಇಡೀ ರಾಜ್ಯವೇ ತಲೆತಗ್ಗಿಸುವಂತಹ ಕೃತ್ಯವನ್ನು ಎಸಗಿ ರಾಜ್ಯ ಸರಕಾರ ತನಿಖೆಗೆ ಆದೇಶ ನೀಡುತ್ತಿದ್ದಂತೆ ವಿದೇಶಕ್ಕೆ ಓಡಿ ಹೋಗಿರುವ ಪ್ರಜ್ವಲ್ ರೇವಣ್ಣ ಅವರ ವಿರುದ್ದ ಈಗಾಗಲೇ ಸಂತ್ರಸ್ತ ಮಹಿಳೆಯರು ಪ್ರಕರಣ ದಾಖಲಿಸುತ್ತಿದ್ದಾರೆ. ಸದಾ ಇತರರಿಗೆ ಪಾಠ ಹೇಳುತ್ತಿರುವ ಎಚ್ ಡಿ ಕುಮಾರಸ್ವಾಮಿ ಕೂಡ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರ ಕುರಿತು ಕೇವಲವಾಗಿ ಮಾತನಾಡಿದ್ದು ಇಂದು ಅದೇ ಕುಮಾರಸ್ವಾಮಿ ಕುಟುಂಬದ ಸದಸ್ಯನೋರ್ವ ದಾರಿ ತಪ್ಪಿರುವುದು ಅವರಿಗೆ ಕಾಣಿಸುತ್ತಿಲ್ಲವೇ? ಕುಮಾರಸ್ವಾಮಿ ಪ್ರತಿಬಾರಿ ತನ್ನಲ್ಲಿ ಪೆನ್ ಡ್ರೈವ್ ಇದೆ ಎಂದು ಕಾಂಗ್ರೆಸ್ ಪಕ್ಷವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು ಆದರೆ ಈಗ ಅವರ ಬಳಿ ಇದ್ದ ಪೆನ್ ಡ್ರೈವ್ ಯಾವುದು ಎನ್ನುವುದು ಜಗತ್ ಜಾಹೀರಾಗಿದೆ ಈ ಪೆನ್ ಡ್ರೈವ್ ಬಗ್ಗೆ ಅವರ ನಿಲುವು ಏನು ಎನ್ನುವುದು ಮುಖ್ಯವಾಗಿದೆ. ಅದರೊಂದಿಗೆ ಇತ್ತೀಚೆಗೆ ಬಿಜೆಪಿ ಪಕ್ಷ ಜೆ ಡಿಎಸ್ ಪಕ್ಷದೊಂದಿಗೆ ದೋಸ್ತಿ ಮಾಡಿಕೊಂಡಿದ್ದು ಈ ಬಗ್ಗೆ ಸಂಪೂರ್ಣ ಮೌನ ವಹಿಸುವುದರ ಮೂಲಕ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುವ ಕೆಲಸದಲ್ಲಿ ತೊಡಗಿದೆ.

ಎಲ್ಲೋ ಸಾವು ಸಂಭವಿಸಿದಾಗ ಓಡೋಡಿ ಬರುವ ಶೋಭ ಕರಂದ್ಲಾಜೆ ಅವರಿಗೆ ಒರ್ವ ಹೆಣ್ಣಾಗಿ ಇನ್ನೊಂದು ಹೆಣ್ಣಿನ ಕಣ್ಣೀರು ಕಾಣಿಸದೇ ಇರುವುದು ವಿಪರ್ಯಾಸವೇ ಸರಿ. ರಾಜ್ಯ ಸರಕಾರ ಈಗಾಗಲೇ ತನಿಖೆ ನಡೆಸುವ ಜವಾಬ್ದಾರಿಯನ್ನು ಎಸ್ ಐಟಿ ಗೆ ವಹಿಸಿದ್ದು ಸೂಕ್ತ ರೀತಿಯ ತನಿಖೆ ನಡೆಸಿ ಒಂದು ವೇಳೆ ಪ್ರಜ್ವಲ್ ರೇವಣ್ಣ ಅವರ ಮೇಲಿನ ಆರೋಪ ಸಾಬೀತಾದರೆ ಕಠಿಣ ಶಿಕ್ಷೆಯನ್ನು ನೀಡಬೇಕು. ಇನ್ನಾದರೂ ಬಿಜೆಪಿಯ ಮಹಿಳಾ ಮಣಿ ನಾಯಕಿಯರು ತಮ್ಮ ಮುಚ್ಚಿರುವ ಬಾಯನ್ನು ತೆರೆದು ಪ್ರಜ್ವಲ್ ರೇವಣ್ಣ ವಿರುದ್ದ ಪ್ರತಿಭಟಿಸುವ ದಮ್ಮು ತಾಕತ್ತು ಇದೆ ಎನ್ನುವುದನ್ನು ತೋರಿಸಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love