ಅ. 17; ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ ; ಅಭಿಮಾನಿ ಬಳಗದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ: ಉಡುಪಿಯ ಜನಪ್ರಿಯ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ರವರ ಹುಟ್ಟುಹಬ್ಬದ ಪ್ರಯುಕ್ತ ಮಣಿಪಾಲದ ಪ್ರತಿಷ್ಟಿತ ಕಸ್ತೂರ್ಬಾ ಆಸ್ಪತ್ರೆಯ ತಜ್ಞವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅಕ್ಟೋಬರ್ 17, ಮಂಗಳವಾರ ಬೆಳಿಗ್ಗೆ 08.30ರಿಂದ ಅಪರಾಹ್ನ 12.30ರವರೆಗೆ ಉಡುಪಿಯ ಅಜ್ಜರಕಾಡಿನ ಪುರಭವನದಲ್ಲಿ ಪ್ರಮೋದ್ ಮಧ್ವರಾಜ್ರವರ ಅಭಿಮಾನಿ ಬಳಗದವರಿಂದ ಹಮ್ಮಿಕೊಳ್ಳಲಾಗಿದೆ.
ಹೃದಯ ತಪಾಸಣೆ, ಕಿವಿ, ಮೂಗು, ಗಂಟಲು (ENT), ಮಧುಮೇಹ, ರಕ್ತದೊತ್ತಡ, ಪಾದ ತಪಾಸಣೆ, ಚರ್ಮ ತಪಾಸಣೆ ಇತ್ಯಾದಿ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು.
ಬೆಳಿಗ್ಗೆ 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪರ್ಯಾಯ ಪೇಜಾವರ ಮಠ, ಉಡುಪಿ ಇವರು ಉದ್ಘಾಟಿಸಲಿದ್ದು, ಪ್ರಮೋದ್ ಮದ್ವರಾಜ್ರವರ ಉಪಸ್ಥಿತಿಯಲ್ಲಿ, ರೆ.ಫಾ.ಲಾರೆನ್ಸ್ ಡಿಸೋಜ, ಕಾರ್ಯದರ್ಶಿಗಳು,ಕ್ಯಾಥೋಲಿಕ್ ಎಜ್ಯುಕೇಶನ್ ಸೊಸೈಟಿ ಆಫ್ ಉಡುಪಿ; ಮೌಲಾನ ಹೆಚ್ ಐ ಸೂಫಿಯಾನ್ ಸಖಾಫೀ, ಪ್ರೋ ಆಲ್ ಖಾದೀನ ಇಸ್ಲಾಮಿಕ್ & ಸದರ್ನ್ ಅಕಾಡೆಮಿ ಬಂಟ್ವಾಳ; ಮಾಲಾಡಿ ಅಜಿತ್ ಕುಮಾರ್ ರೈ, ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ದ.ಕ; ಬಾಬು ಅಮೀನ್ ಬನ್ನಂಜೆ, ತುಳು ಜಾನಪದ ವಿದ್ವಾಂಸರು; ಡಾ.ಪದ್ಮರಾಜ್ ಹೆಗ್ಡೆ, ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ಯುರೋಲಾಜಿ ವಿಭಾಗ, ಕೆ.ಎಂ.ಸಿ, ಮಣಿಪಾಲ ಮತ್ತು ರಾಹುಲ್, ರಾಜ್ಯಾಧ್ಯಕ್ಷರು, ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಸಮಾಜ ಸೇವಾ ಸಂಘ(ರಿ), ಬೆಂಗಳೂರು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸದ್ರಿ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕೆಂದು ಶ್ರೀ ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ, ನಾಯರ್ಕೆರೆ, ಉಡುಪಿ ಇದರ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.