Home Mangalorean News Kannada News ಅ. 24-27ರ ವರೆಗೆ ಬಳ್ಳಾರಿಯಲ್ಲಿ ಯುವಜನೋತ್ಸವ

ಅ. 24-27ರ ವರೆಗೆ ಬಳ್ಳಾರಿಯಲ್ಲಿ ಯುವಜನೋತ್ಸವ

Spread the love

ಅ. 24-27ರ ವರೆಗೆ ಬಳ್ಳಾರಿಯಲ್ಲಿ ಯುವಜನೋತ್ಸವ

ಬಳ್ಳಾರಿ: ಕರ್ನಾಟಕದ 1600ಕ್ಕೂ ಹೆಚ್ಚು ಯುವ ನಾಯಕರು ಬಳ್ಳಾರಿಯಲ್ಲಿ ಇದೇ ಅಕ್ಟೋಬರ್ 24 ರಿಂದ 27 ವರೆಗೆ ಜರಗಲಿರುವ ಯುವಜನೋತ್ಸವದಲ್ಲಿ ಭಾಗವಹಿಸಿ “ಭೂಮಿಯ ಆರೈಕೆಯ ಮೂಲಕ ನವ ವಿಶ್ವದ ನಿರ್ಮಾಣ”ಕ್ಕಾಗಿ ತಮ್ಮನ್ನೇ ತೊಡಗಿಸಿಕೊಳ್ಳಲಿರುವರು. “

ಈ ಯುವಜನೋತ್ಸವವು ಕರ್ನಾಟಕ ಕ್ಯಾಥೋಲಿಕ್ ಧರ್ಮಾಧ್ಯಕ್ಷರ ಪರಿಷತ್ತಿನ ಕರ್ನಾಟಕ ಯುವಜನ ಆಯೋಗ ಕ್ಯಾಥೋಲಿಕ್ ಮತ್ತು ಬಳ್ಳಾರಿ ಧರ್ಮಾಕ್ಷೇತ್ರದ ಸಹಯೋಗದೊಂದಿಗೆ ಜರುಗಲಿದ್ದು, ನಾಯಕತ್ವದ ಮೂಲಕ ಯುವಕರನ್ನು ಸಬಲೀಕರಿಸುವ ಉದ್ದೇಶವನ್ನು ಹೊಂದಿದೆ . ಈ ಕಾರ್ಯಕ್ರಮವು ಬಳ್ಳಾರಿಯ ಆರೋಗ್ಯ ಮಾತೆ ದೇವಾಲಯದ ಆವರಣದಲ್ಲಿರುವ ಆಧ್ಯಾತ್ಮ ಸಬಾಂಗಣದಲ್ಲಿ ಜರುಗುವುದು.

ಯುವಜನೋತ್ಸವದಲ್ಲಿ ಭೂಮಿಯ ಸಂರಕ್ಷಣೆ, ನೂತನ ಕೃಷಿಕಾರ್ಯಕ್ಕೆ ಪ್ರೇರಣೆ, ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಸಬಲೀಕರಣ, ಸರ್ವಧರ್ಮೀಯ ಸಾಮರಸ್ಯ, ಮುಂತಾದ ವಿಷಯಗಳ ಬಗೆಗೆ ಯುವಜನರು ಚಿಂತನೆ ನಡೆಸುವರು.

ಯುವಜನತೆಯನ್ನು ಉದ್ದೇಶಿಸಿ ಪೂಜ್ಯ ಶ್ರೀ ನಿಜಗುಣ ಪ್ರಭು ತೋಂಟದಾರ್ಯಸ್ವಾಮಿಗಳು ತೋಂಟದಾರ್ಯ ಮಠ, ಮುಂಡರಗಿ, ಮತ್ತು ನಿಷ್ಕಲ ಮಂಟಪ, ಬೇಲೂರು, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮತ್ತು ಮಾನ್ಯ ಕರ್ನಾಟಕ ಲೋಕಾಯುಕ್ತ ಮಾನ್ಯಶ್ರೀ ಸಂತೋಷ್ ಹೆಗ್ಡ, ರಾಷ್ಟ್ರೀಯ ನವ ಕೃಷಿ ಪದ್ಧತಿ ಖ್ಯಾತೆ  ಕವಿತ ಮಿಶ್ರ, ಸೂರ್ಯನಾರಾಯಣ ರೆಡ್ಡಿ ಮುಂತಾದವರು ಯುವಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದಿ. 24.10.2019 ರಂದು ಸಾಯಂಕಾಲ 5 ಗಂಟೆಗೆ ಬಳ್ಳಾರಿ ಧರ್ಮಾಧ್ಯಕ್ಷರಾದ ಪೂಜ್ಯ ಹೆನ್ರಿ ಡಿ’ಸೋಜರವರ ಅಧ್ಯಕ್ಷತೆಯಲ್ಲಿ ಉದ್ಗಾಟನಾ ಸಮಾರಂಭ ನಡೆಯಲಿದೆ. ತೋಂಟದಾರ್ಯ ಮಠ, ಮುಂಡಾರಗಿ ಮತ್ತು ನಿಷ್ಕಲ ಮಂಟಪ ಬೇಲೂರಿನ ಪೂಜ್ಯ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮಿಗಳು ಸಭೆಯನ್ನು ಉದ್ಗಾಟಿಸುವರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕರಾದ  ನಾಗೇಂದ್ರ, ವಿಧಾನಪರಿಷತ್ ಸದಸ್ಯರಾದ ಕೆ. ಸಿ. ಕೊಂಡಯ್ಯ, ಶ್ರೀ ಅಲ್ಲಂ ವೀರಭದ್ರಪ್ಪನವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಯುವಜನೋತ್ಸವ ದಿನಗಳಲ್ಲಿ ಈ ಕೆಳಗಿನ ವಿವಿಧ ಸೇವಾಕಾರ್ಯಗಳು ನಡಯಲಿವೆ:
• ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀರಾಮುಲು ರವರು ಸ್ವಚ್ಛ ಭಾರತ ಅಭಿಯಾನ ವಿಮ್ಸ್ ಆವರಣದಲ್ಲಿ ಚಾಲನೆ ನೀಡಲಿದ್ದಾರೆ.
• ಬಳ್ಳಾರಿ ನಗರ ಶಾಸಕರಾದ ಜಿ. ಸೋಮಶೇಖರ ರೆಡ್ಡಿಯವರು ಹಸಿರು ಕರ್ನಾಟಕ ಅಭಿಯಾನದ ಮೂಲಕ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸುವರು.
• ಯುವ ನಾಯಕರು ಸುಂದರ ಕರ್ನಾಟಕ ಕಾರ್ಯಕ್ರಮದ ಮೂಲಕ ಗೋಡೆ ಚಿತ್ರಣ ಮಾಡಲಿರುವರು.
• ಆರೈಸುವ ಬಳ್ಳಾರಿ ಕಾರ್ಯಕ್ರಮದ ಅಂಗವಾಗಿ ರಕ್ತ ದಾನ ಶಿಬಿgವನ್ನು ಮಾಡಿ ಬಳ್ಳಾರಿ ಕಾರ್ಯಕ್ರಮವನ್ನು ನಡೆಸುವರು.

27 ಅಕ್ಟೋಬರ್ ಭಾನುವಾರದಂದು ಯುವಜನರು ಶಾಂತಿ ಮತ್ತು ಪ್ರಗತಿಗಾಗಿ ರ್ಯಾಲಿಯನ್ನು ನಡೆಸುವರು. ಬೆಂಗಳೂರಿನ ಆರ್ಚ್ಬಿಷಫ್ರಾದ ಪರಮ ಪೂಜ್ಯ ಡಾ. ಪೀಟರ್ ಮಚಾದೊ ಮತ್ತು ಕರ್ನಾಟಕದ ಧರ್ಮಾಧ್ಯಕ್ಷರುಗಳು ಮೆರವಣಿಗೆಯಲ್ಲಿ ಪಾಲ್ಗೋಳ್ಳುವರು. ರಾಜ್ಯಸಭಾ ಸದಸ್ಯರಾದ ಡಾ. ನಾಸೀರ್ ಹುಸೇನ್ರವರು ಮೆರವಣಿಗೆಗೆ ಚಾಲನೆ ನೀಡುವರು.

27 ಅಕ್ಟೋಬರ್ ಭಾನುವಾರದಂದು ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಆರ್ಚ್ ಬಿಷಪ್, ಕರ್ನಾಟಕದ ಧರ್ಮಾಧ್ಯಕ್ಷರುಗಳು, ಶಾಸಕರು ಮತ್ತು ಮಾಜಿ ಸಚಿವರಾದ  ಕೆ.ಜೆ. ಜಾರ್ಜ್, ಐವನ್ ಡಿ’ಸೋಜ, ಮತ್ತು ಮಾಜಿ ಶಾಸಕ   ಜೆ.ಆರ್. ಲೋಬೊರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.


Spread the love

Exit mobile version