ಅ. 29: ಕೆಸಿಸಿಸಿಐ ಪ್ರೇರಣಾ ಪ್ರಶಸ್ತಿ – 2023 ಪ್ರದಾನ

Spread the love

ಅ. 29: ಕೆಸಿಸಿಸಿಐ ಪ್ರೇರಣಾ ಪ್ರಶಸ್ತಿ – 2023 ಪ್ರದಾನ

ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ಉಡುಪಿ ಇದರ ವತಿಯಿಂದ ಕ್ರೈಸ್ತ ಉದ್ಯಮಿಗಳಿಗೆ ಪ್ರೇರಣಾ ಪ್ರಶಸ್ತಿ ವಿತರಣಾ ಸಮಾರಂಭ ಅಕ್ಟೋಬರ್ 29 ರಂದು ಕಡಿಯಾಳಿ ಮಾಂಡವಿ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಸ್ಥಾಪಕಾಧ್ಯಕ್ಷ ಡಾ. ಜೆರಿ ವಿನ್ಸೆಂಟ್ ಡಾಯಸ್ ಹೇಳಿದರು.

ಅವರು ಶುಕ್ರವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 200ರಲ್ಲಿ ಪ್ರಾರಂಭಗೊಂಡು 12ನೆ ವರ್ಷಕ್ಕೆ ಪಾದಾರ್ಪಣೆಗೊಂಡ ಈ ಸಂಘಟನೆ (KCCC) ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ (IFKCA) ಇಲ್ಲಾ ಇದರ ಕರ್ನಾಟಕ ರಾಜ್ಯ ಸ್ಥಾಪಕಾಧ್ಯಕ್ಷರಾಗಿದ್ದ ಅನಿವಾಸಿ ಉದ್ಯಮಿ, ಸನ್ಮಾನ್ಯ ಡಾ| ರೊನಾಲ್ಡ್ ಕೊಲಾಸೊ ಇವರ ಕನಸಿನ ಕೂಸು ಹಾಗೂ ಅದನ್ನು ಪ್ರಾಯೋಜಿಸಿದ ಇಫಾ ಸಂಘಟನೆಯ ಅಂದಿನ ಜಿಲ್ಲಾಧ್ಯಕ್ಷ ಶ್ರೀ ಲೂವಿಸ್ ಲೋಬೊ ಇವರ ಮುಂದಾಳತ್ವದಲ್ಲಿ ಶ್ರೀ ಆಲ್ವಿನ್ ಕ್ವಾಡ್ರಸ್, ಶ್ರೀ ಜಿತೇಂದ್ರ ಫುಡ್ತಾದೊ, ಡಾ| ನೇರಿ ಕರ್ನೇಲಿಯೊ, ಪ್ರಶಾಂತ್ ಜತ್ತನ, ಶ್ರೀ ಸಂತೋಷ್ ಡಿ’ಸಿಲ್ವ ಹಾಗೂ ದಿ| ರಾಬರ್ಟ್ ಫುರ್ಟಾಡೊ ಇವರುಗಳ ಸಹಭಾಗಿತ್ವದಲ್ಲಿ ಸನ್ಮಾನ್ಯ ಡಾ| ಜೆರಿ ವಿನ್ಸೆಂಟ್ ಡಾಯಸ್, ಇವರ ಘನ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು. ಈ ಸಂಘಟನೆಯನ್ನು ಸಹಕಾರಿ ಸೊಸೈಟಿ: ಕಾಯ್ದೆ 1860ರ ಅಡಿಯಲ್ಲಿ ನೊಂದಾವಣೆಗೊಂಡು ಮಾಂಡವಿ ಕೋರ್ಟ್ ಕಾಂಪ್ಲೆಕ್ಸ್ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.

ಈ ಸಂಸ್ಥೆಯ ಕಾರ್ಯವ್ಯಾಪ್ತಿ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಒಳಗೊಂಡಿದ್ದರೂ ಸದ್ಯಕ್ಕೆ ಇದರ ಕಾರ್ಯವ್ಯಾಪ್ತಿಯನ್ನು, ಉಡುಪಿ ಜಿಲ್ಲೆಗೇನೇ ಸೀಮಿತಗೊಳಿಸಿದ್ದೇವೆ. ಕ್ರೈಸ್ತ ಸಮಾಜದ ಎಲ್ಲಾ ವರ್ಗಗಳನ್ನು (ಕೆಥೋಲಿಕ್, ಪ್ರೊಟೆಸ್ಟೆಂಟ್, ಸೀರಿಯನ್ ಒರ್ಟೊಡೊಕ್ ಹಾಗೂ ಇನ್ನಿತರ) ಒಳಗೊಂಡು ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು, ಪ್ರೊಫೆಶನಲ್ಸ್ ಹಾಗೂ ಕೃಷಿಕರ ಸದಸ್ಯರಾಗಿರುತ್ತಾರೆ. ಅಂದು ಕೇವಲ 30 ಜನರಿಂದ ಪ್ರಾರಂಭಗೊಂಡ ಈ ಸಂಸ್ಥೆ ಇಂದು ನೂರರ ಗಡಿ ದಾಟಿದೆ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ.

ಕಳೆದ 11 ವರ್ಷಗಳಲ್ಲಿ ಈ ಸಂಸ್ಥೆ ತನ್ನ ಸದಸ್ಯರಿಗೆ ಉದ್ಯಮ ಶೀಲ ಶಿಬಿರಗಳು, ಕಾರ್ಯಾಗಾರಗಳು ಹಾಗೂ ಉದ್ಯಮಕ್ಕೆ ಸಂಬಂಧಪಟ್ಟಂತೆ ಜಿ.ಎಸ್.ಟಿ./ಆದಾಯ ತೆರಿಗೆ, ಕೇಂದ್ರ ಹಾಗೂ ರಾಜ್ಯ ಬಜೆಟ್ ವಿಚಾರ ವಿನಿಮಯ ಹಾಗೂ ಇನ್ನಿತರ ಕಾನೂನು ಮಾಹಿತಿಗಳನ್ನು ನಡೆಸುತ್ತಾ ಬಂದಿದೆ. ನಾವು ಇದುವರೆಗೆ ನಮ್ಮ ಸಮಾಜದ ಉದ್ಯಮಿಗಳನ್ನು ಗುರುತಿಸಿ ಸನ್ಮಾನಿಸಿದರೂ, ಪ್ರಶಸ್ತಿ ಕೊಟ್ಟು ಗೌರವಿಸಿರಲಿಲ್ಲ. ಆ ನ್ಯೂನತೆಯನ್ನು ಸರಿಪಡಿಸಿ, ಪ್ರೇರಣಾ ಪ್ರಶಸ್ತಿ ಪ್ರಮುಖ ನಾಲ್ಕು ಆಯ್ದ ವಿಭಾಗಗಳಲ್ಲಿ ಕೊಡಲು ನಿರ್ಧರಿಸಿದ್ದು, ಈ ವರ್ಷದಿಂದ ಪ್ರಾರಂಭಿಸಿದ್ದೇವೆ. ಅರ್ಹ ವಿಜೇತರನ್ನು ಗುರುತಿಸಲು ಉಪಸಮಿತಿಗಳನ್ನು ರಚಿಸಿ ಈ ಕೆಳಗಿನ ಉದ್ಯಮಿಗಳನ್ನು ಪ್ರೇರಣಾ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದರು.

ಪ್ರಶಸ್ತಿ ವಿಜೇತರ ವಿವರ ಹೀಗಿದೆ.
KCCCI ಪ್ರೇರಣಾ ಪ್ರಶಸ್ತಿ 2023

  1. ವರ್ಷದ ಉದ್ಯಮಿ ಪ್ರಶಸ್ತಿ 2023: ರಾಜೇಶ್ ಕುಮಾರ್ ಸಾಲಿನ್ಸ್ ಮ್ಯಾನೇಟಿಂಗ್ ಡೈರೆಕ್ಟರ್ ಸುಬ್ರಮಣ್ಯನಗರ, ಕಲ್ಯಾಣಪುರ, ಉಡುಪಿ.
  2. ವರ್ಷದ ಮಹಿಳಾ ಉದ್ಯಮಿ ಪ್ರಶಸ್ತಿ 2023: ಕೆರೋಲ್ ವಿಲ್ಮಾ ಡಿ’ಕುನ್ಹಾ ಈವೆಂಟ್ ಮ್ಯಾನೇಜ್ಮೆಂಟ್, ಕಾರ್ಕಳ
  3. ವರ್ಷದ ಯುವ ಉದ್ಯಮಿ ಪ್ರಶಸ್ತಿ 2023 : ನಿಯೋನ್ಸ್ ಅಂತೋನಿ ಡಿ’ಸೋಜ ಬಿಲ್ಡರ್ & ಡೆವಲಪರ್ ಎನ್.ಎನ್. ಇನ್ಫ್ರಾಸ್ಟಕ್ಟರ್ ಲಿ. ಬ್ರಹ್ಮಾವರ
  4. ವರ್ಷದ ಕೃಷಿಕ ಪ್ರಶಸ್ತಿ 2023: ವಿಲ್ಫ್ರೇಡ್ ಫಲಿಕ್ಸ್ ಡಿ’ಸೋಜ ಡಿ’ಸೋಜ ಎಗ್ರಿಕಲ್ಡ ಎಸ್ಟೇಟ್, ಹರ್ಕೂರು-ಸೇನಾಮರ ಗ್ರಾಮ ನಾಡ, ಕುಂದಾಪುರ ತಾಲೂಕು

KCCCI ಪ್ರೇರಣಾ ವಿಶೇಷ ಪ್ರಶಸ್ತಿ 2023
1. ಡೇವಿಡ್ ವಿ. ಸಿಕ್ವೆರಾ ಕೋಟೇಶ್ವರ, ಕು೦ದಾಪುರ, ಸಮಾಜ ಸೇವೆ ಹಾಗೂ ಆರೋಗ್ಯ ಕ್ಷೇತ್ರ
2. ಗ್ಲೆನ್ ಲಾರ್ಸನ್ ರೆಬೆಲ್ಲೊ ಮೂಡುಬೆಳ್ಳೆ, ಉಡುಪಿ ಜಿಲ್ಲೆ ವಿದ್ಯಾರ್ಥಿ ಹಾಗೂ ಯುವ ಉದ್ಯಮಿ ಡೋನ್ ತಂತ್ರಜ್ಞಾನ ಪರಿಣಿತ
3. ಲಾರೆನ್ಸ್ ಆಳ್ವ ಮೂಡುಬೆಳೆ, ಉಡುಪಿ ಜಿಲ್ಲೆ ಹಡಿಲು ಭೂಮಿ ಕೃಷಿ ಸಾಧಕ ಹಾಗೂ ಸಮಾಜ ಸೇವಕ

KCCCI ಪ್ರೇರಣಾ ಸೇವಾ ಪ್ರಶಸ್ತಿ 2023
1. ಮ್ಯೂರಿಯಲ್ ಪ್ರೇಮಲತಾ, ಉಡುಪಿ (ಶಿಕ್ಷಕರ ಕ್ಷೇತ್ರ)
2. ರುಫಿನಾ ಮೆಂಡೋನ್ಸಾ, ಪಲಿಮಾರು, ಪಡುಬಿದ್ರಿ (ನರ್ಸಿಂಗ್ ಕ್ಷೇತ್ರ)

KCCCI ಪ್ರೇರಣಾ ಪುರಸ್ಕಾರ 2023
ಸಂಘದ ಸದಸ್ಯರ ಮಕ್ಕಳು ಶಿಕ್ಷಣ, ಸಂಗೀತ, ಕ್ರೀಡೆ ಹಾಗೂ ಇತರೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಗುರುತಿಸುವ ಉದ್ದೇಶಕ್ಕಾಗಿ ಪುರಸ್ಕಾರ ನೀಡಲಾಗುತ್ತದೆ ಎಂದರು.

ಈ ಪ್ರಶಸ್ತಿಗಳನ್ನು ಅವರ ಉಪಸ್ಥಿತಿಯಲ್ಲಿ ಈ ತಿಂಗಳ ಭಾನುವಾರ 29 ರಂದು “ಮಾಂಡವಿ ಸಭಾಭವನ” ಕಡಿಯಾಳಿ ಇಲ್ಲಿ ಸನ್ಮಾನ್ಯ ಡೊ ಜೆರಿ ವಿನ್ಸೆಂಟ್ ಡಾಯಿಸ್, ಸ್ಥಾಪಕಾಧ್ಯಕ್ಷರು, KCCCI ಹಾಗೂ ಸನ್ಮಾನ್ಯ ಡೋ| ಸುಶೀಲ್ ಜತ್ತನ್ನ, ನಿರ್ದೇಶಕರು, ಲೊಂಬಾರ್ಡ್ ಮಿಶನ್ ಹಾಸ್ಪಿಟಲ್ ಇವರುಗಳ ಘನ ಉಪಸ್ಥಿತಿಯಲ್ಲಿ ನೀಡಲಾಗುವುದು. ಈ ಸಮಾರಂಭವು ಸಾಯಂಕಾಲ 6 ಗಂಟೆಗೆ ಸಂಘದ ಸಾಮಾನ್ಯ ಸಭೆ (A.G.M.) ನೊಂದಿಗೆ ಪ್ರಾರಂಭವಾಗಿ, ಪ್ರಶಸ್ತಿ ವಿತರಣೆ ಜೊತೆಗೆ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಜೊತೆಗೆ ಕಾರ್ಯಕ್ರಮವು ಭೋಜನದೊಂದಿಗೆ ಕೊನೆಗೊಳ್ಳುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಸಿಸಿಸಿಐ ಅಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಪದಾಧಿಕಾರಿಗಳಾದ ಜಿತೇಂದ್ರ ಫುರ್ಟಾಡೊ, ಲೂಯಿಸ್ ಲೋಬೊ ಉಪಸ್ಥಿತರಿದ್ದರು.


Spread the love