Home Mangalorean News Kannada News ಅ.5ರಂದು ಪತ್ರಕರ್ತರ ರಾಜ್ಯ ಸಂಘದ ಚುನಾವಣೆ

ಅ.5ರಂದು ಪತ್ರಕರ್ತರ ರಾಜ್ಯ ಸಂಘದ ಚುನಾವಣೆ

Spread the love

ಅ.5ರಂದು ಪತ್ರಕರ್ತರ ರಾಜ್ಯ ಸಂಘದ ಚುನಾವಣೆ

ಮಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) 2018-2021 ನೇ ಸಾಲಿನ ರಾಜ್ಯ ಸಂಘದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯು ಆಗಸ್ಟ್ 5ರಂದು ನಡೆಯಲಿದೆ.

ಈ ಕೆಳಕಂಡ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. 1. ಅಧ್ಯಕ್ಷರು (ಒಂದು ಹುದ್ದೆ-ಕೇಂದ್ರ ಸ್ಥಾನ) 2. ಉಪಾಧ್ಯಕ್ಷರು (ಒಟ್ಟು ಮೂರು ಹುದ್ದೆ- ಒಂದು ಕೇಂದ್ರ ಸ್ಥಾನ, ಎರಡು ಗ್ರಾಮೀಣ), 3. ಪ್ರಧಾನ ಕಾರ್ಯದರ್ಶಿ (ಒಂದು ಹುದ್ದೆ-ಕೇಂದ್ರ ಸ್ಥಾನ) 4. ಕಾರ್ಯದರ್ಶಿಗಳು (ಒಟ್ಟು ಮೂರು ಹುದ್ದೆ-ಒಂದು ಕೇಂದ್ರ ಸ್ಥಾನ, ಎರಡು ಗ್ರಾಮೀಣ) 5. ಖಜಾಂûಚಿ (ಒಂದು ಹುದ್ದೆ-ಕೇಂದ್ರ ಸ್ಥಾನ). ಇದರೊಂದಿಗೆ ಜಿಲ್ಲಾ ಕಾರ್ಯಕಾರಿಣಿಯ 15 ಸದಸ್ಯರು, ರಾಜ್ಯ ಸಮಿತಿಗೆ ಒಬ್ಬರನ್ನು ಆಯ್ಕೆ ಮಾಡಲಾಗುವುದು.

ಜುಲೈ 14ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಜುಲೈ 17- ಮಧ್ಯಾಹ್ನ 12 ಗಂಟೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆ, ನಾಮಪತ್ರ ಸಲ್ಲಿಕೆ ಆರಂಭ, ಜು.19 ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕ. ಜುಲೈ 22 – ನಾಮಪತ್ರಗಳ ಪರಿಶೀಲನೆ, ಜು.24- ನಾಮಪತ್ರ ಹಿಂದೆಗೆಯಲು ಕೊನೆಯ ದಿನಾಂಕ. ಆಗಸ್ಟ್ 5ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರ ವರೆಗೆ ಚುನಾವಣೆ ನಡೆಯಲಿದ್ದು, ನಂತರ ಮತಗಳ ಎಣಿಕೆ ನಡೆಯಲಿದೆ.

ಒಬ್ಬ ಅಭ್ಯರ್ಥಿಯು ಪದಾಧಿಕಾರಿ ಹುದ್ದೆ ಅಥವಾ ಕಾರ್ಯಕಾರಿ ಸಮಿತಿ ಸದಸ್ಯತ್ವ ಈ ಎರಡರಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಸ್ಪರ್ಧಿಸಬಹುದು.

ಜಿಲ್ಲಾ ಪದಾಧಿಕಾರಿ ಸ್ಥಾನಕ್ಕೆ 2,000 ರೂ. ಠೇವಣಿ, ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವವರು 1,000/- ರೂ. ಠೇವಣಿ ಕಟ್ಟಬೇಕು. ಸ್ಪರ್ಧೆ ಬಯಸುವ ಅಭ್ಯರ್ಥಿಗಳು ಸಂಘದಲ್ಲಿ ನಾಲ್ಕು ವರ್ಷ ನಿರಂತರವಾಗಿ ಸದಸ್ಯತ್ವ ಹೊಂದಿರಬೇಕು. 2017 ರಲ್ಲಿ ಸದಸ್ಯತ್ವದ ಪಟ್ಟಿಯು ಚುನಾವಣೆಯ ಮತದಾರರ ಪಟ್ಟಿ ಆಗಿರುತ್ತದೆ. ಜಿಲ್ಲಾ ಪದಾಧಿಕಾರಿ ಹುದ್ದೆಗೆ ಸ್ಪರ್ಧೆ ಬಯಸುವವರು ಒಮ್ಮೆಯಾದರೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರಲೇಬೇಕು.

ಜಿಲ್ಲಾ ಸಂಘದ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸುವವರು ಆಯಾ ಜಿಲ್ಲಾ ಘಟಕದ ಚುನಾವಣಾಧಿಕಾರಿಯ ಕೈಗೆ ನಾಮಪತ್ರವನ್ನು £ಸಲ್ಲಿಸಬೇಕು. ರಾಜ್ಯ ಪದಾಧಿಕಾರಿ ಸ್ಥಾನಕ್ಕೆ ಸ್ಪರ್ಧಿಸುವವರು ರಾಜ್ಯ ಸಂಘದ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಸಮ್ಮುಖದಲ್ಲಿ ಅಥವಾ ಅವರಿಂದ ಅಧಿಕಾರ ಪಡೆದವರಿಗೆ ನೇರವಾಗಿ ನಾಮಪತ್ರ ಸಲ್ಲಿಸಬೇಕು.

ಜಿಲ್ಲಾ ಘಟಕಕ್ಕೆ ಎರಡು ಬಾರಿ ಸತತವಾಗಿ ಒಂದೇ ಹುದ್ದೆಗೆ ಆಯ್ಕೆಯಾಗಿದ್ದವರು ಮೂರನೇ ಅವಧಿಗೆ ಅದೇ ಹುದ್ದೆಗೆ ಸ್ಪರ್ಧಿಸುವಂತಿಲ್ಲ. ಜಿಲ್ಲಾ ಸಂಘದ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸುವವರು ಜಿಲ್ಲಾ ವಾರ್ತಾ ಇಲಾಖೆ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Spread the love

Exit mobile version