Home Mangalorean News Kannada News ಆಗಸ್ಟ್ ಮೊದಲ ವಾರದಲ್ಲಿ ಉಡುಪಿಯಲ್ಲಿ ಆದದ್ದು ಬೂದಿ ಮಳೆ

ಆಗಸ್ಟ್ ಮೊದಲ ವಾರದಲ್ಲಿ ಉಡುಪಿಯಲ್ಲಿ ಆದದ್ದು ಬೂದಿ ಮಳೆ

Spread the love

ಆಗಸ್ಟ್ ಮೊದಲ ವಾರದಲ್ಲಿ ಉಡುಪಿಯಲ್ಲಿ ಆದದ್ದು ಬೂದಿ ಮಳೆ

ಉಡುಪಿ : ಆಗಸ್ಟ್ 3-4ರಂದು ಉಡುಪಿ ಪರಿಸರದಲ್ಲಿ ಆದ ಮಳೆಯಲ್ಲಿ ಉದುರಿದ ಬಿಳಿಯ ವಸ್ತು ಬೂದಿಎಂಬುದನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೋರಿಕೆಯ ಮೇರೆಗೆ ತಪಾಸಣೆನಡೆಸಿದ ಸುರತ್ಕಲ್ಲಿನ ಎನ್ ಐ ಟಿ ಕೆ ರಾಸಾಯನಿಕ ಎಂಜಿನಿಯರಿಂಗ್ ವಿಭಾಗ ನಿಡಿದವಿಶ್ಲೇಷಣಾ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಮನೋವೈದ್ಯ ಡಾ| ಪಿ. ವಿ.ಭಂಡಾರಿ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಮತ್ತು ಮಾಜಿ ಪತ್ರಕರ್ತ ರಾಜಾರಾಂ ತಲ್ಲೂರು ಅವರು, ಮಾಹಿತಿ ಹಕ್ಕು ಕಾನೂನಿನಡಿ ಅರ್ಜಿ ಸಲ್ಲಿಸಿ ಪಡೆದುಕೊಂಡ ಎನ್ ಐ ಟಿ ಕೆವಿಶ್ಲೇಷಣಾ ವರದಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು.

ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹ ಮಾಡಿದ ಮಾದರಿಯಲ್ಲಿ ಅದರ ತೂಕದ 71.43ಶೇಕಡಾ ಬೂದಿ, 12.51 ಶೇಕಡಾ ಫಿಕ್ಸೆಡ್ ಕಾರ್ಬನ್, 10.92 ಶೇಕಡಾ ವಲಟೈಲ್ರಾಸಾಯನಿಕಗಳು ಮತ್ತು 5.09 ಶೇಕಡಾ ತೇವಾಂಶ ಇತ್ತು ಎಂದು ವರದಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಡಾ| ಪಿ. ವಿ ಭಂಡಾರಿ ಅವರು ಕೊಡಗು ಹಾಗೂ ಕೇರಳದಲ್ಲಿ ಮಾನವ ನಿರ್ಮಿತ ಅಪಘಾತಗಳನ್ನು ಕಣ್ಣಾರೆ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಪರಿಸರ ನಾಶ ಚಟುವಟಿಕೆಗಳ ಕುರಿತು ಎಚ್ಚೆತ್ತುಕೊಳ್ಳಬೇಕು. ಉಡುಪಿಯಲ್ಲಿ ಬೂದಿ ಪ್ರಕರಣದ ಕುರಿತು ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು. ಈ ಪ್ರಕರಣ ಸುತ್ತಮುತ್ತಲಿನ ಕೈಗಾರಿಕೆಗಳು ನಮ್ಮ ಪರಿಸರವನ್ನು ಹಾನಿ ಮಾಡುವ ಸಾಧ್ಯತೆಗಳ ಬಗ್ಗೆ ಎಲ್ಲ ಚಿಹ್ನೆಗಳನ್ನು ತೋರಿಸುತ್ತಿದೆ ಎಂದರು.

ಒಬ್ಬ ವೈದ್ಯರಾಗಿ ಇಲ್ಲಿನ ಮನುಷ್ಯರ ಆರೋಗ್ಯ, ಸಸ್ಯ-ಪ್ರಾಣಿಗಳ ಮೇಲೆ ಆಗುವ ಪರಿಣಾಮಗಳನ್ನು ಹಗುರವಾಗಿ ಪರಿಗಣಿಸಲು ಆಗುವುದಿಲ್ಲ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದವರು ಹೇಳಿದರು.

ಎಂಡೋಸಲ್ಫಾನ್ ಸಮಸ್ಯೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಾವು ಕಂಡಿದ್ದೇವೆ. ಸರ್ಕಾರ ಅವರಿಗೆ ಪ್ಯಾಕೇಜ್ ಕೊಟ್ಟು ಕೈತೊಳೆದುಕೊಂಡಿದೆ. ಇಂತಹ ಪ್ಯಾಕೇಜ್ ನಿರ್ವಹಿಸಲು ಸರ್ಕಾರದ ಬಳಿ ದುಡ್ಡೂ ಇರುವುದಿಲ್ಲ. ಹಾರು ಬೂದಿಯ ವಿಷಯದಲ್ಲೂ ಇಂತಹದೇ ಸನ್ನಿವೇಶ ಪುನರಾವರ್ತನೆ ಆಗದಿರಲಿ. ಜನಸಾಮಾನ್ಯರಿಗೆ ಬದುಕುವ ಹಕ್ಕು ಬೇಕೇ ಹೊರತು ಬದುಕಲಾಗದ ಅಭಿವ್ರದ್ಧಿ ಬೇಡ ಎಂದು ಅವರು ಸ್ಪಷ್ಟಪಡಿಸಿದರು.
ಈಗಲೂ ಮಾತಾಡದಿದ್ದರೆ ಅಪಚಾರ

ಮೈ ಮೇಲೆ ಬೂದಿ ಉದುರಿರುವಾಗಲೂ ಉಡುಪಿಯ ಜನ ಮಾತನಾಡದಿದ್ದರೆ, ನಮ್ಮ ನಾಗರಿಕಜವಾಬ್ದಾರಿಗಳಿಗೆ ನಾವೇ ಅಪಚಾರ ಮಾಡಿದಂತಾಗುತ್ತದೆ ಎಂದ ರಾಜಾರಾಂ ತಲ್ಲೂರುಅವರು ಈ ವಿಚಾರದಲ್ಲಿ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಗಳುತುರ್ತಾಗಿ ಕ್ರಮ ಕೈಗೊಂಡು ನಾಗರಿಕರಿಗೆ ರಕ್ಷಣೆಯ ಅಭಯ ನೀಡದಿದ್ದರೆ, ಈ ಕುರಿತುನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವುದು ಅನಿವಾರ್ಯಆಗಬಹುದು ಎಂದು ಎಚ್ಚರಿಸಿದ್ದಾರೆ.

ನಾವು ಇಂತಹವರೇ ಈ ಕ್ರತ್ಯಕ್ಕೆ ಕಾರಣ ಎಂದು ಬೊಟ್ಟು ಮಾಡುವುದಿಲ್ಲ; ಆದರೆ ಅದುಯಾರಿಮ್ದ ಆಯಿತು ಎಂಬುದನ್ನು ಪತ್ತೆ ಹಚ್ಚಿ ಸಾರ್ವಜನಿಕರ ಗಮನಕ್ಕೆ ತರುವುದು ಮತ್ತುಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿಎಂದು ರಾಜಾರಾಂ ತಲ್ಲೂರು ನೆನಪಿಸಿದರು.

ಪರಿಸರ ಮಂಡಳಿ/ಜಿಲ್ಲಾಡಳಿತಕ್ಕೆ ಏಳು ಪ್ರಶ್ನೆಗಳು

ಪತ್ರಿಕಾಗೋಷ್ಟಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತಕ್ಕೆ ಏಳುಪ್ರಶ್ನೆಗಳ ಪ್ರಶ್ನಾವಳಿಯೊಂದನ್ನು ಕೇಳಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಮಾಧ್ಯಮಗಳಮೂಲಕ ಸ್ಪಷ್ಟೀಕರಣ ನೀಡಬೇಕೆಂದು ಅಧಿಕಾರಿಗಳನ್ನು ಡಾ| ಪಿ ವಿ ಭಂಡಾರಿ ಮತ್ತುರಾಜಾರಾಂ ತಲ್ಲೂರು ಒತ್ತಾಯಿಸಿದ್ದಾರೆ.

1. ಎನ್ ಐ ಟಿ ಕೆ ತಪಾಸಣಾ ವರದಿಯಲ್ಲಿ ಬಿದ್ದಿರುವುದು ಬೂದಿ ಎಂದು ಫಲಿತಾಂಶಬಂದಿರುವ ಹಿನ್ನೆಲೆಯಲ್ಲಿ ಈವತ್ತಿನ ತನಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಏನೇನುಕ್ರಮಗಳನ್ನು ಕೈಗೊಂಡಿದೆ?

2. ಪರಿಸರ ಮಾಲಿನ್ಯ ಮಂಡಳಿಯನ್ನು ಉಲ್ಲೇಖಿಸಿ ಮಾಧ್ಯಮಗಳ ಒಂದು ವರ್ಗ ಬಿದ್ದದ್ದುಬೂದಿ ಅಲ್ಲ ಮರಳು (ಸಿಲಿಕಾ) ಎಂದು ಸಾರ್ವಜನಿಕರ ಹಾದಿ ತಪ್ಪಿಸಿದೆ. ಇದನ್ನು ಯಾರು,ಯಾವ ಉದ್ದೇಶಕ್ಕಾಗಿ ಮಾಡಿದರು ಎಂಬ ಬಗ್ಗೆ ಜಿಲ್ಲಾಡಳಿತ ಮತ್ತು ಮಾಧ್ಯಮಗಳ ಆಡಳಿತಮಂಡಳಿ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ ಅಲ್ಲವೆ?

3. ಉಡುಪಿ ಜಿಲ್ಲಾಡಳಿತಕ್ಕೆ ಈ ಎನ್ ಐ ಟಿ ಕೆ ತಪಾಸಣಾ ವರದಿ ತಲುಪಿದೆಯೆ? ತಲುಪಿದ್ದರೆ, ಈನಿಟ್ಟಿನಲ್ಲಿ ಅವರು ಈವತ್ತಿನ ತನಕ ಏನು ಕ್ರಮ ಕೈಗೊಂಡಿದ್ದಾರೆ?

4. ಮಾಹಿತಿ ಹಕ್ಕಿನಡಿ ಕೇಳಿದಾಗ, ಇಂತಹ ಮಳೆ ಆದರೆ ಅದನ್ನು ತಪಾಸಣೆ ನಡೆಸಲು, ಮಾದರಿಸಂಗ್ರಹಿಸಲು ತಮ್ಮಲ್ಲಿ ಯಾವುದೇ ಸ್ಟಾಂಡರ್ಡ್ ಪ್ರೊಸೀಜರ್ ಇಲ್ಲ ಎಂದು ಮಾಲಿನ್ಯನಿಯಂತ್ರಣ ಮಂಡಳಿ ಲಿಖಿತವಾಗಿ ಹೇಳಿದೆ. ಉಡುಪಿ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲೇದೊಡ್ಡ ಉಷ್ಣವಿದ್ಯುತ್ ಸ್ಥಾವರದಂತಹಾ ಕಾರ್ಖಾನೆಗಳು ಇರುವಾಗ ಈ ರೀತಿಯಮುನ್ನೆಚ್ಚರಿಕೆಗಳೊಂದಿಗೆ ಸನ್ನದ್ಧ ಆಗಿರುವುದು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತುಜಿಲ್ಲಾಡಳಿತದ ಕರ್ತವ್ಯ ಅಲ್ಲವೇ?

5. ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ಹರಡುವ ವ್ಯಾಪ್ತಿಯಲ್ಲಿ ಕ್ಯಾನ್ಸರ್, ಚರ್ಮದಅಲರ್ಜಿ ತೊಂದರೆಗಳು, ಶ್ವಾಸಕೋಶದ ಅಲರ್ಜಿಯಂತಹ ತೊಂದರೆಗಳ ಬಗ್ಗೆ ಸಮಗ್ರಅಧ್ಯಯನ ಆಗಿದೆಯೆ? ಆಗಿರದಿದ್ದರೆ ಅದು ನಡೆಯಬೇಕು ಮತ್ತು ಈ ಸಮೀಕ್ಷಾ ವರದಿಸಾರ್ವಜನಿಕರಿಗೆ ಸಿಗಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತಿದ್ದೇವೆ.

6. ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ನಿಗಾ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ಕಾರ್ಖಾನೆಯವರು ಇಲಾಖೆಗೆ ಸಲ್ಲಿಸುವ ಅಂಕಿ-ಅಂಶ, ರೀಡಿಂಗ್ ಗಳುವಾಸ್ತವದಷ್ಟೇ ಇವೆಯೇ ಎಂಬುದನ್ನು ಪರಿಸರ ಮಾಲಿನ್ಯ ಮಂಡಳಿ ಯಾವಾಗ ಅಡ್ಡಪರಿಶೀಲನೆ ನಡೆಸಿದೆ? ಈ ಬಗ್ಗೆ ತಪಾಸಣೆ ನಡೆದಿದೆಯೆ? ಎಂಬುದನ್ನು ಪರಿಸರ ಮಂಡಳಿಸಾರ್ವಜನಿಕರಿಗೆ ತಿಳಿಸಬೇಕು. ಯಾಕೆಂದರೆ ಮಂಡಳಿ ಕೊಟ್ಟಿರುವ ಪರವಾನಿಗೆಯಲ್ಲಿ ಈರೀತಿಯ ತಪಾಸಣೆಗಳನ್ನು ನಡೆಸಬೇಕು ಎಂದು ಉಲ್ಲೇಖಿಸಲಾಗಿದೆ.

7. ಪರಿಸರ ಮಾಲಿನ್ಯ ಮಂಡಳಿ ಯುಪಿಸಿಎಲ್ ಗೆ ನೀಡಿರುವ ಪರವಾನಿಗೆ ಪತ್ರದಲ್ಲಿ ಹಾಕಿರುವಷರತ್ತುಗಳಲ್ಲಿ (ಜನರಲ್ ಕಂಡೀಷನ್ಸ್ ಎಚ್ 5) ಅಕಸ್ಮಾತ್ ಆಗಿ ನಿಗದಿಗಿಂತ ಹೆಚ್ಚುಪ್ರಮಾಣದಲ್ಲಿ ಕಲುಷಿತ ವಸ್ತುಗಳು ವಾತಾವರಣಕ್ಕೆ ಬಿಡುಗಡೆ ಆದರೆ, ಕಾರ್ಖಾನೆ ಆ ಬಗ್ಗೆತಕ್ಷಣ ಮಾಲಿನ್ಯ ನಿಯಂತ್ರಣ ಮಂಡಳಿಗೆ ತುರ್ತು ಮಾಹಿತಿ ನಿಡಬೇಕು ಎಂದಿದೆ. ಅಂತಹಮಾಹಿತಿ ಮಂಡಳಿಗೆ ಕಾರ್ಖಾನೆಯಿಂದ ಬಂದಿದೆಯೆ ಎಂದು ಪ್ರಶ್ನಿಸಿದ್ದಾರೆ?


Spread the love

Exit mobile version