Home Mangalorean News Kannada News ಆಟೋರಿಕ್ಷಾಗಳು ನಿಯಮ ಉಲ್ಲಂಘನೆ ಮಾಡಿದರೆ ಪರವಾನಿಗೆ ಅಮಾನತು

ಆಟೋರಿಕ್ಷಾಗಳು ನಿಯಮ ಉಲ್ಲಂಘನೆ ಮಾಡಿದರೆ ಪರವಾನಿಗೆ ಅಮಾನತು

Spread the love

ಆಟೋರಿಕ್ಷಾಗಳು ನಿಯಮ ಉಲ್ಲಂಘನೆ ಮಾಡಿದರೆ ಪರವಾನಿಗೆ ಅಮಾನತು

ಮ0ಗಳೂರು: ಮಂಗಳೂರು ನಗರದಲ್ಲಿ ಈಗಾಗಲೇ ವಿವಿಧ ನಿಗಮಗಳಿಂದ ಸ್ವ-ಉದ್ಯೋಗದಡಿ ಆಟೋರಿಕ್ಷಾ ಪರವಾನಿಗೆ ಪಡೆದುಕೊಂಡು, ಷರತ್ತುಗಳನ್ನು ಉಲ್ಲಂಘಿಸುತ್ತಿರುವುದು ಹಾಗೂ ಮಂಗಳೂರು ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ಬರುವ ಆಟೋರಿಕ್ಷಾಗಳು ನಗರದಲ್ಲಿ ಬಾಡಿಗೆ ಮಾಡುತ್ತಿರುವುದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ದೂರು ಬಂದಿರುತ್ತದೆ. ಆದ್ದರಿಂದ ವಿಶೇಷ ತಪಾಸಣೆ ನಡೆಸಿ ಉಲ್ಲಂಘನೆ ಕಂಡು ಬಂದಲ್ಲಿ ಅಂತಹ ಪರವಾನಿಗೆಯನ್ನು ಅಮಾನತುಗೊಳಿಸಲು ಕಾನೂನು ರೀತ್ಯಾ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಉಪಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, (ಪ್ರಭಾರ), ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಮಹಾನಗರಪಾಲಿಕೆ ಸಾಮಾನ್ಯ ಸಭೆ

ಮ0ಗಳೂರು: ಮಂಗಳೂರು ಮಹಾನಗರಪಾಲಿಕೆಯ ಸಾಮಾನ್ಯ ಸಭೆಯು ಜೂನ್ 29 ರಂದು ಬೆಳಿಗ್ಗೆ 10.30 ಕ್ಕೆ ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.

ದ್ವಿತೀಯ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮ0ಗಳೂರು: ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ಈ ಸಂಸ್ಥೆಗೆ ಸಂಬಂಧಿಸಿದಂತೆ 2017-18ನೇ ಸಾಲಿಗೆ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷಕ್ಕೆ ಡಿಪ್ಲೋಮಾ ಅರ್ಜಿಗಳನ್ನು ಮತ್ತು ಮಾಹಿತಿಯನ್ನು ತಿತಿತಿ.ಜಣe.ಞಚಿಡಿ.ಟಿiಛಿ.iಟಿ ಅಥವಾ ತಿತಿತಿ.ಞeಚಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್ ಮೂಲಕ ಡೌನ್‍ಲೋಡ್ ಮಾಡಿ ಜೂನ್ 27 ರೊಳಗೆ ಪಡೆಯಬೇಕು. ಹಾಗೂ ಭರ್ತಿ ಮಾಡಿದ ಅರ್ಜಿ ಹಾಗೂ ದಾಖಲೆಗಳು ಹಾಗೂ ಬ್ಯಾಂಕ್ ಚಲನ್‍ನೊಂದಿಗೆ ಜೂನ್ 27 ರೊಳಗೆ ಈ ಸಂಸ್ಥೆಯಲ್ಲಿ ಅಥವಾ ಸಮೀಪದ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಕಂಪ್ಯೂಟರ್‍ಗೆ ಅಪ್ಲೋಡ್ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-2211636ನ್ನು ಸಂಪರ್ಕಿಸಲು ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

94ಸಿ/ 94ಸಿಸಿ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಮ0ಗಳೂರು: ಸರ್ಕಾರದ ನಿರ್ದೇಶನದಂತೆ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅರ್ಜಿ ಸ್ವೀಕರಿಸುವ ದಿನವನ್ನು ಜೂನ್ 12 ರಿಂದ ಮೂರು ತಿಂಗಳು ಕಾಲಾವಕಾಶ ವಿಸ್ತರಿಸಿರುವುದರಿಂದ ಜಿಲ್ಲೆಯ ಎಲ್ಲಾ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ ಜಮೀನಿನಲ್ಲಿ ದಿನಾಂಕ 01-01-2012 ರ ಮೊದಲು ಅತಿಕ್ರಮಿಸಿಕೊಂಡು ಮನೆಕಟ್ಟಿ ವಾಸ್ತವ್ಯ ಹೊಂದಿರುವ ಅರ್ಹ ಫಲಾನುಭವಿಗಳು, ಮಾತ್ರ ಸಕ್ರಮೀಕರಣಕ್ಕಾಗಿ ಅರ್ಜಿಯನ್ನು ಈವರೆಗೆ ಸಲ್ಲಿಸದೇ ಇದ್ದಲ್ಲಿ ಜೂನ್ 12 ರಿಂದ 3 ತಿಂಗಳೊಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ನಾಡ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

ಖ ಗ್ರೂಪ್ ಸರಕಾರಿ ನೌಕರರ ಸಂಘಕ್ಕೆ ಆಯ್ಕೆ

ಮ0ಗಳೂರು: ದ.ಕ ಜಿಲ್ಲಾ ‘ಡಿ’ ವರ್ಗ ಸರಕಾರಿ ನೌಕರರ ಸಂಘ(ರಿ) ದ.ಕ ಮಂಗಳೂರು ಸಂಘದ ಅಧ್ಯಕ್ಷರಾಗಿ ಸತತ 5ನೇ ಭಾರಿ ಫ್ರಾಂಕಿ ಪ್ರಾನ್ಸಿಸ್ ಕುಟಿನ್ಹ (ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಂಗಳೂರು)ಅವರು ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ವಸಂತ ನಾಯ್ಕ (ಕಂದಾಯ ಇಲಾಖೆ), ಪ್ರಧಾನ ಕಾರ್ಯದರ್ಶಿಯಾಗಿ ಸಿರಿಲ್ ರಾಬರ್ಟ್ ಡಿಸೋಜ (ದ.ಕ ಜಿಲ್ಲಾಪಂಚಾಯತ್/ತೋಟಗಾರಿಕೆ) ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಐಎಎಸ್ ತರಬೇತಿ: ಸಾಮಾನ್ಯ ಪ್ರವೇಶ ಪರೀಕ್ಷೆ

ಮ0ಗಳೂರು: 2017-18ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ನೀಡುವ ಐ.ಎ.ಎಸ್., ಮತ್ತು ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗಳಿಗಾಗಿ ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಜೂನ್ 25 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ಹಾಗೂ ಸಹಾಯವಾಣಿ : 080-65970009 ಸಂಪರ್ಕಿಸಲು ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ದಕ್ಷಿಣ ಕನ್ನಡ ಜಿಲ್ಲೆ, ಇವರ ಪ್ರಕಟಣೆ ತಿಳಿಸಿದೆ.

ಎಸಿಬಿ ಅಧಿಕಾರಿಗಳ ಪ್ರವಾಸ

ಮ0ಗಳೂರು: ದಕ್ಷಿಣಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಜೂನ್ 30 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಪುತ್ತೂರು ಸರ್ಕಾರಿ ಪ್ರವಾಸಿ ಮಂದಿರ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆವರೆಗೆ ಬಂಟ್ವಾಳ ಸರ್ಕಾರಿ ಪ್ರವಾಸಿ ಮಂದಿರ ಭೇಟಿ ನೀಡಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ ಎಂದು ಪೊಲೀಸ್‍ಉಪಾಧೀಕ್ಷಕರು, ಎಸಿಬಿ, ದ.ಕಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಅತಿಥಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ

ಮ0ಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ದ.ಕ.ಜಿಲ್ಲೆ,ಮಂಗಳೂರು ಇದರ ಅಧೀನದಲ್ಲಿ ನಡೆಸಲ್ಪಡುವ ಶಿಕ್ಷಣ ಸಂಸ್ಥೆಗಳಿಗೆ ಗೌರವ ಅತಿಥಿ ಉಪನ್ಯಾಸರು/ಶಿಕ್ಷಕರುಗಳನ್ನು ನೇಮಕ ಮಾಡುವ ಸಲುವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಜೂನ್ 30 ರ ಒಳಗಾಗಿ ಇತ್ತೀಚಿನ ಒಂದು ಭಾವಚಿತ್ರದೊಂದಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೊದಲನೇ ಮಹಡಿ, ಮೌಲನಾ ಅಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ- ಈ ಕಛೇರಿಗೆ ಸಲ್ಲಿಸಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

26 ರಂದು ಪಿಲಿಕುಳ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ

ಮ0ಗಳೂರು: ಜೂನ್ 26 ರಂದು ಇತರೆ ದಿನಗಳಂತೆ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಲೇಕ್ ಗಾರ್ಡನ್, ಗುತ್ತು ಮನೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಸಾರ್ವಜನಿಕರ ಗಮನಕ್ಕೆ ಪ್ರಕಟಿಸಿದೆ.

ಚರ್ಮಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

ಮ0ಗಳೂರು: 2017-18ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಅನುದಾನದೊಂದಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಿದೆ. ಈ ಯೋಜನೆ ಸದ್ಭಳಕೆ ಮಾಡಿಕೊಳ್ಳುವಂತೆ ಪರಿಶಿಷ್ಟ ಜಾತಿಗೆ ಸೇರಿದ ಚರ್ಮಕುಶಲಕರ್ಮಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 2017-18ನೇ ಸಾಲಿನ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಡಾ. ಬಾಬು ಜಗಜೀವನ ರಾಂ ಧರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ , ಜಿಲ್ಲಾ ಸಂಯೋಜಕರು ಲಿಡ್‍ಕರ್, ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಚಿಗುರು ಸಾಂಸ್ಕøತಿಕ ಕಾರ್ಯಕ್ರಮ

ಮ0ಗಳೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದ.ಕ ಜಿಲ್ಲೆ ಇವರು ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಚಿಗುರು ಸಾಂಸ್ಕøತಿಕ ಕಾರ್ಯಕ್ರಮವನ್ನು ಜೂನ್ 29 ರಂದು ಬೆಳಿಗ್ಗೆ 10.30ಕ್ಕೆ ಸರೋಜಿನಿ ಮದುಸೂದನ ಕುಶೆ ವಿದ್ಯಾಸಂಸ್ಥೆ ಅತ್ತಾವರ, ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಈದ್: ವಾಹನ ಸಂಚಾರ ಮಾರ್ಪಾಡು

ಮ0ಗಳೂರು: ಜೂನ್ 25 ಅಥವಾ 26ರಂದು ರಂಜಾನ್ ಈದ್ ಹಬ್ಬದಂದು ಬೆಳಗ್ಗೆ 6.30 ಗಂಟೆಯಿಂದ ನಗರದ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಪ್ರಾರ್ಥನೆ ಮುಗಿಯುವವರೆಗೆ ವಾಹನ ಸಂಚಾರದಲ್ಲಿ ಬದಲಿ ವ್ಯವಸ್ಥೆ ಮಾಡಲಾಗಿದೆ.

ಅಂದು ಬೆಳಗ್ಗೆ 6.30 ರಿಂದ ಪ್ರಾರ್ಥನೆ ಮುಗಿದು ಜನರು ಮತ್ತು ವಾಹನಗಳು ತೆರಳುವ ತನಕ ಹಂಪನಕಟ್ಟೆಯಿಂದ ಬಾವುಟಗುಡ್ಡೆಯ ಮುಖಾಂತರ ಡಾ: ಅಂಬೇಡ್ಕರ್ ವೃತದ ಕಡೆಗೆ ಸಂಚರಿಸಬೇಕಾದ ವಾಹನಗಳು ಕೆ.ಎಸ್.ಆರ್ ರಸ್ತೆ ಅಥವಾ ಎಲ್.ಹೆಚ್.ಹೆಚ್ ರಸ್ತೆ ಅಥವಾ ಫಳ್ನೀರ್ ರಸ್ತೆಯ ಮೂಲಕ ಸಂಚರಿಸಬೇಕು. ಅದೇ ರೀತಿ ಡಾ: ಅಂಬೇಡ್ಕರ್ ವೃತ್ತದ ಕಡೆಯಿಂದ, ಸಿಟಿ ಸೆಂಟರ್ ನಿಂದ ಬಾವುಟಗುಡ್ಡೆ ಕಡೆಗೆ ಬರುವ ರಸ್ತೆ ಹಾಗೂ ಸಿಟಿಸೆಂಟರ್ ಪಾರ್ಕಿಂಗ್‍ನಿಂದ ಬಾವುಟಗುಡ್ಡೆಗೆ ಬರುವ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿದೆ.

ಬಾವುಟಗುಡ್ಡೆ ಬದಿಯಲ್ಲಿ ಸಾಧ್ಯವಾದಷ್ಟು ರಸ್ತೆಬದಿಯಲ್ಲಿ ವಾಹನಗಳನ್ನು 45 ಡಿಗ್ರಿ ಕೋನಗದಲ್ಲಿ ತಾತ್ಕಾಲಿಕವಾಗಿ ಪಾರ್ಕ್ ಮಾಡಬೇಕು. ನಂತರ ಹಂಪನಕಟ್ಟೆಯಿಂದಲೇ ವಾಹನಗಳ ಸಂಚಾರವನ್ನು ತಡೆಹಿಡಿಯಲಾಗುವುದು. ನಗರ ಕೇಂದ್ರ ಗ್ರಂಥಾಲಯದಿಂದ ವಿಜಯ ಬ್ಯಾಂಕ್ ವರೆಗೆ ರಸ್ತೆಯ ಎಡಬದಿ ಮಾತ್ರ ವಾಹನಗಳನ್ನು ಪಾರ್ಕ್ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

ಉಸ್ತುವಾರಿ ಸಚಿವರ ಪ್ರವಾಸ

ಮ0ಗಳೂರು: ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಪ್ರವಾಸ ಇಂತಿವೆ. ಜೂನ್ 25 ಹಾಗೂ 26 ರಂದು ಬಂಟ್ವಾಳ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.


Spread the love

Exit mobile version