ಆದಾಯ ತೆರಿಗೆ ಜಿಲ್ಲಾ ಕಚೇರಿ ಉದ್ಘಾಟನೆ
ಮಂಗಳೂರು: ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ತೆರಿಗೆ ವಿಭಾಗದ ತಪಾಸಣಾ ಮತ್ತು ಅಪರಾದ ವಿಭಾಗದ ಜಿಲ್ಲಾ ಕಚೇರಿಯನ್ನು ಅಕ್ಟೋಬರ್ 1 ರಂದು ಅಪರಾಹ್ನ 4 ಗಂಟೆಗೆ ಪಾಂಡೇಶ್ವರದ ಅಲ್ಬುಕರ್ಕ ಹೌಸ್‍ನ ನೆಲಮಹಡಿಯಲ್ಲಿ ಆದಾಯ ತೆರಿಗೆ ಇಲಾಖೆಯ ನಿರ್ದೇಶಕ ಡಿ.ಕೆ. ಮಿಶ್ರಾ ಉದ್ಘಾಟಿಸಲಿದ್ದಾರೆ.
ಮಂಗಳೂರು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ನರೋತ್ತಮ ಮಿಶ್ರಾ, ಬೆಂಗಳೂರು, ಜಂಟಿ ನಿರ್ದೇಶಕ ನರಸಿಂಹ ರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಮಂಗಳೂರು ಆದಾಯ ತೆರಿಗೆ ಅಧಿಕಾರಿ ರಾಮನಾಯ್ಕ್ ಎನ್. ಪ್ರಕಟಣೆ ತಿಳಿಸಿದೆ.