Home Uncategorized ಆನೆಗುಡ್ಡೆ ದೇವಸ್ಥಾನಕ್ಕೆ ನಟ ಉಪೇಂದ್ರ ಭೇಟಿ

ಆನೆಗುಡ್ಡೆ ದೇವಸ್ಥಾನಕ್ಕೆ ನಟ ಉಪೇಂದ್ರ ಭೇಟಿ

Spread the love

ಆನೆಗುಡ್ಡೆ ದೇವಸ್ಥಾನಕ್ಕೆ ನಟ ಉಪೇಂದ್ರ ಭೇಟಿ

ಕುಂದಾಪುರ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ಚಲನಚಿತ್ರ ನಟ ಉಪೇಂದ್ರ ದೇವರ ದರ್ಶನ ಪಡೆದು, ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನದ ವತಿಯಿಂದ ಉಪೇಂದ್ರ ಅವರನ್ನು ಸತ್ಕರಿಸಿ , ಗೌರವಿಸಲಾಯಿತು.

ದೇವಾಲಯದ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ, ಹಿರಿಯ ಅರ್ಚಕ ಹಾಗೂ ಮಾಜಿ ಆಡಳಿತ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಮೊಕ್ತೇಸರ ನಿರಂಜನ ಉಪಾದ್ಯಾಯ, ಪರ್ಯಾಯ ಅರ್ಚಕ ಕೃಷ್ಣಾನಂದ ಉಪಾಧ್ಯಾಯ, ಅರ್ಚಕ ಮಂಡಳಿಯ ಸದಸ್ಯರು, ವ್ಯವಸ್ಥಾಪಕ ನಟೇಶ್ ಕಾರಂತ ಹಾಗು ಸಿಬ್ಬಂದಿಗಳು ಇದ್ದರು.


Spread the love

Exit mobile version