ಆನೇಕಲ್: ಸ್ನೇಹಿತರ ಕಣ್ಣೆದುರಲ್ಲೇ ನೀರುಪಾಲಾದ ಮತ್ತಿಬ್ಬರು ಸ್ನೇಹಿತರು
ಆನೇಕಲ್: ಈಜಲು ಹೋದ ಐವರ ಪೈಕಿ ಇಬ್ಬರು ವಿದ್ಯಾರ್ಥಿಗಳು ನೋಡನೋಡುತ್ತಿದಂತೆ ನೀರುಪಾಲಾಗಿರುವಂತಹ ಘಟನೆ ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿ ಗಾರ್ವೇಬಾವಿ ಪಾಳ್ಯದ ದೀಪು (20) ಮತ್ತು ಯೋಗಿಶ್ವರನ್ (20) ಮೃತರು. ಮೊಬೈಲ್ ಕ್ಯಾಮರಾದಲ್ಲಿ ಇಬ್ಬರು ವಿದ್ಯಾರ್ಥಿಗಳ ಕೊನೆಯ ದೃಶ್ಯ ಸೆರೆಯಾಗಿದೆ.
ಬೊಮ್ಮಸಂಸ್ರದ ಎಸ್ಎಫ್ಎಸ್ ಕಾಲೇಜಿನ ಐವರು ವಿದ್ಯಾರ್ಥಿಗಳು ಬನ್ನೇರುಘಟ್ಟ ಸುವರ್ಣಮುಖಿಗೆ ತೆರಳಿದ್ದಾರೆ. ಬಳಿಕ ಕಲ್ಯಾಣಿಗೆ ಈಜಲು ಇಳಿದಿದ್ದಾರೆ. ಈ ಪೈಕಿ ದೀಪು, ಯೋಗೇಶ್ವರ್ಗೆ ಈಜಲು ಆಗದೆ ಪರದಾಡಿದ್ದಾರೆ. ಕೆಲ ಕಾಲ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಇತ್ತ ರಕ್ಷಣೆ ಮಾಡಲು ಸಾಧ್ಯವಾಗದೆ ಉಳಿದ ಸ್ನೇಹಿತರು ಕಂಗಾಲಾಗಿದ್ದಾರೆ.
ಈಜಲು ಬಾರದೆ ಒಬ್ಬರಾದ ಮೇಲೆ ಒಬ್ಬರಂತೆ ಇಬ್ಬರು ಸ್ನೇಹಿತರು ಇನ್ನುಳಿದ ಸ್ನೇಹಿತರ ಕಣ್ಣೆದುರೇ ಮುಳುಗಿ ಪ್ರಾಣಬಿಟ್ಟಿದ್ದಾರೆ. ಘಟನೆಯ ಸಂಪೂರ್ಣ ವಿಡಿಯೋ ಅಲ್ಲಿದ್ದ ಯುವಕನ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.