Home Mangalorean News Kannada News ಆನ್ ಲೈನ್ ವೇಶ್ಯಾವಾಟಿಕೆ ಭೇಧಿಸಿದ ಸಿಸಿಬಿ ಪೋಲಿಸರು

ಆನ್ ಲೈನ್ ವೇಶ್ಯಾವಾಟಿಕೆ ಭೇಧಿಸಿದ ಸಿಸಿಬಿ ಪೋಲಿಸರು

Spread the love

ಆನ್ ಲೈನ್ ವೇಶ್ಯಾವಾಟಿಕೆ ಭೇಧಿಸಿದ ಸಿಸಿಬಿ ಪೋಲಿಸರು

ಮಂಗಳೂರು: ಆನ್ ಲೈನ್ ಮೂಲಕ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದ ಜಾಲವನ್ನು ಭೇಧಿಸಿದ ಸಿಸಿಬಿ ಪೋಲಿಸರು ನಗರದ ಖಾಸಗಿ ಹೋಟೆಲೊಂದಕ್ಕೆ ಧಾಳಿ ನಡೆಸಿ ಒರ್ವ ಗ್ರಾಹಕ, 2 ದಲ್ಲಾಳಿ ಹಾಗೂ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೋಲಿಸ್ ಮಾಹಿತಿಗಳ ಪ್ರಕಾರ ಆರೋಪಿಗಳು ಈ ಹೈಟೆಕ್ ವೇಶ್ಯಾವಾಟಿಕೆ ಧಂಧೆಯನ್ನು ನಡೆಸಲು ಇಂಟರ್ ನೆಟ್ ನಲ್ಲಿ http://m.locanto.in/mangalore/Women-Seeking-Men ಎಂಬ ಹೆಸರಿನಲ್ಲಿ ವೆಬ್ ಸೈಟ್ ನಲ್ಲಿ ಇವರ ಮೊಬೈಲ್ ನಂಬ್ರಗಳನ್ನು ನಮೂದಿಸಿ ಈ ಮೊಬೈಲ್ ನಂಬ್ರಗಳಿಗೆ ಕರೆ ಮಾಡಿದ ಗ್ರಾಹಕರಿಗೆ ಯುವತಿಯರನ್ನು ವೇಶ್ಯಾವಾಟಿಕೆಗಾಗಿ ನೀಡುತ್ತಿದ್ದರು.  ವಶಕ್ಕೆ ಪಡೆದುಕೊಂಡ ಯುವತಿಯರನ್ನು ಮಹಿಳಾ ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಗಿರುತ್ತದೆ. ಆರೋಪಿಗಳ ವಶದಿಂದ 8 ಮೊಬೈಲ್ ಫೋನ್ ಗಳನ್ನು ಹಾಗೂ ನಗದು ರೂ. 6,700/- ಮತ್ತು ಈ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ ಒಂದು ಟಾಟಾ ಸಫಾರಿ ಕಾರು, ಮಾರುತಿ ಅಲ್ಟೋ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 8,97,700/- ಆಗಿರುತ್ತದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಬಂಧಿತರನ್ನು ಪ್ರೀತಮ್ (30), ಸುನಿಲ್ (22) ಮತ್ತು ನಾಗರಾಜ್ (28) ಎಂದು ಗುರುತಿಸಲಾಗಿದೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು  ಪತ್ತೆಕಾರ್ಯದಲ್ಲಿ  ಭಾಗವಹಿಸಿದ್ದರು.


Spread the love

Exit mobile version