‘ಆಪತ್ಕಾಲೀನ ನಿಧಿ’ ಬಳಕೆಗೆ ಕೈಹಾಕಿದ ಸಿಎಂ ಬಿಎಸ್ ವೈ
ಬೆಂಗಳೂರು : ಕಿಸಾನ್ ಸನ್ಮಾನ್ ಯೋಜನೆಗಾಗಿ ಸಾದಿಲ್ವಾರು ನಿಧಿ ಅಧಿನಿಯಮಕ್ಕೆ ತಿದ್ದುಪಡಿ ತಂದು, ರಾಜ್ಯದ ರೈತರಿಗೆ ಗುಡ್ ನ್ಯೂಸ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊಟ್ಟಿದ್ದೇನೋ ನಿಜ. ಆದರೇ ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಆಪತ್ಕಾಲೀನ ನಿಧಿ ಬಳಸಿಕೊಂಡು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎನಿಸಿಕೊಂಡಿದ್ದಾರೆ. ಈ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂಬುದಾಗಿ ಅನೇಕ ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕಿಸಾನ್ ಸನ್ಮಾನ್ ಯೋಜನೆ ಜಾರಿ ಮಾಡಲು ತುರ್ತಿ ನಿರ್ವಹಣೆಗಾಗಿ ಬಳಸು ಕರ್ನಾಟಕ ಸಾದಿಲ್ವಾರು ನಿಧಿ ಅಧಿನಿಯಮ 1975ಕ್ಕೆ ತಿದ್ದುಪಡಿ ತಂದು, ಸುಗ್ರೀವಾಜ್ಞೆಗಾಗಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ.
ಆದರೇ ಇದು ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಆಪತ್ಕಾಲೀನ ನಿಧಿ ಬಳಸಿಕೊಂಡು ತಮ್ಮ ಸರ್ಕಾರದ ಭರವಸೆ ಈಡೇರಿಸಿಕೊಂಡ ಕೆಟ್ಟ ಸಂಪ್ರದಾಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಂದಿ ಹಾಡಿದಂತಾಗಿದೆ.
ಅಂದಹಾಗೇ ರಾಜ್ಯದ ತುರ್ತು ಕಾರ್ಯಕ್ರಮಗಳ ನಿರ್ವಹಣಾ ನಿಧಿ(Contingency Fund)ಯ ಮೊತ್ತವನ್ನು 80 ಕೋಟಿ ರೂ ನಿಂದ ತಾತ್ಕಾಲಿಕವಾಗಿ 2200 ಕೋಟಿ ರೂಗಳಿಗೆ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೊದಲ ಕಂತಿನ ರೂ.2000ಗಳನ್ನು ಬಿಡುಗಡೆ ಮಾಡಲು ಸಿಎಂ ಅವರು ಇಂದು ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದಾರೆ.
ಕಿಸಾನ್ ಸನ್ಮಾನ್ ಯೋಜನೆ ಜಾರಿ ಮಾಡಲು ತುರ್ತಿ ನಿರ್ವಹಣೆಗಾಗಿ ಬಳಸು ಕರ್ನಾಟಕ ಸಾದಿಲ್ವಾರು ನಿಧಿ ಅಧಿನಿಯಮ 1975ಕ್ಕೆ ತಿದ್ದುಪಡಿ ತಂದು, ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡದಿದ್ದರೂ ಸಚಿವ ಸಂಪುಟ ಸಭೆಯಲ್ಲಿಟ್ಟು ಅನುಮೋದನೆ ಪಡೆದು ಸುಗ್ರೀವಾಜ್ಞೆ ಮೂಲಕ ಯೋಜನೆ ಜಾರಿಗೊಳಿಸಲು ಕಾಯ್ದೆಯ ಕಡತವನ್ನು ರಾಜಭವನಕ್ಕೆ ರವಾನಿಸಿದ್ದಾರೆ.