ಆಮೇರಿಕ ಕಾನ್ಸುಲೇಟ್ ಪ್ರಶಸ್ತಿ ಪಡೆದ ಮೊದಲ ಐ.ಪಿ.ಎಸ್ ಅಧಿಕಾರಿ ಹರಿಶೇಖರನ್
ಬೆಂಗಳೂರು: ಆಮೇರಿಕಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿರುವ ಜಾಲ ಭೇಧಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಪಿ. ಹರಿಶೇಖರನ್ ಅಮೇಕನ್ ಕಾನ್ಸುಲೇಟ್ಲ ಜನರಲ್ ಅಂತರಾಷ್ಟ್ರೀಯ ಮಟ್ಟದ ಕಾನೂನು ಜಾರಿ ವಿಭಾದಲ್ಲಿ ನೀಡುವ ಅತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹರಿಶೇಖರನ್ ಅವರು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವೇಳೆ ಬೆಂಗಳೂರಿನಿಂದ ಆಮೇರಿಕಕ್ಕೆ ಮಕ್ಕಳನ್ನು ಕಳ್ಳ ಸಾಗಣಿಕೆ ಮಾಡುವ ವಿಚಾರ ಬೆಳಕಿಗೆ ಬಂದಿತ್ತು. ಹರಿಶೇಖರನ್ ಅವರ ನೇತೃತ್ವದಲ್ಲಿ ಎಸ್ ಐ ಟಿ ತಂಡ ರಚಿಸಲಾಗಿತ್ತು.
ಕಾರ್ಯಾಚರಣೆ ನಡೆಸಿದ ತಂಡ ಗುಜರಾತ್ ನ ಏಜೆಂಟ್ ಸೇರಿ 17 ಮಂದಿಯ ತಂಡವನ್ನು ಬಂಧಿಸಿತ್ತು. ಅಮೇರಿಕಕ್ಕೆ ಸಾಗಣೆ ಮಾಡಲಾದ ಮಕ್ಕಳ ಪೈಕಿ ಗುಜರಾತ್ ರಾಜ್ಯ ಹೆಚ್ಚು ಮಕ್ಕಳಿದ್ದರು ಎಂಬುದು ತನಿಖೆ ವೇಳೆ ಪತ್ತೆಯಾಗಿತ್ತು. ಈ ಪ್ರಶಸ್ತಿ ಪಡೆದ ಮೊದಲ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಹರೀಶೇಖರನ್ ಪಾತ್ರರಾಗಿದ್ದಾರೆ.