ಆರಂಭಿಸಿದ ಕೆಲಸವನ್ನು ಗುರಿಮುಟ್ಟಿಸುವ ಸಾಮರ್ಥ್ಯ ಬಂಟರಿಗಿದೆ; ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ
ಉಡುಪಿ: ಯಾವುದೇ ಕೆಲಸವನ್ನು ಆರಂಭಿಸಿದರು ಕೂಡ ಅದನ್ನು ಗುರಿಮುಟ್ಟಿಸುವ ಸಾಮರ್ಥ್ಯ ಬಂಟರು ಹೊಂದಿದ್ದಾರೆ. ಅದಕ್ಕೆ ಅವರಲ್ಲಿ ಇರುವ ಒಗ್ಗಟ್ಟೇ ಕಾರಣವಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು.
ಜಾಗತಿಕ ಬಂಟ ಸಂಘಗಳ ಒಕ್ಕೂಟ, ಉಡುಪಿ ಬಂಟರ ಸಂಘಗಳ ಸಹಯೋಗದಲ್ಲಿ ಭಾನುವಾರ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಮಾರು 70ರ ದಶಕದಲ್ಲಿ ಭೂ ಮಸೂದೆ ಕಾಯ್ದೆ ಜಾರಿಗೆ ಬಂದ ಪರಿಣವಾಗಿ ಹೆಚ್ಚಿನ ಬಂಟರು ಸಾಮಾಜಿ ಹಾಗೂ ಆರ್ಥಿಕವಾಗಿ ವಿಚಲಿತರಾಗಿದ್ದರು. ಆದರೂ ಸ್ವ–ಸಾಮಾರ್ಥ್ಯದಿಂದ ಸಢೃರಾಗಿ ಸಮಾಜದಲ್ಲಿ ಬಲಿಷ್ಠ ಸಮುದಾಯವಾಗಿ ಗುರುತಿಸಲ್ಪಟ್ಟಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಬಂಟರ ಸಮುದಾಯದಲ್ಲಿ ಇನ್ನೂ ಸಾಕಷ್ಟು ಮಂದಿ ಬಡವರಿದ್ದು, ಅವರ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಸಮುದಾಯದ ಕರ್ತವ್ಯ ಅದಕ್ಕೆ ನಾನೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಒಡಿಯೂರು ಕ್ಷೇತ್ರದ ಗುರುದೇವನಂದ ಸ್ವಾಮೀಜಿ ಮಾತನಾಡಿ ಮಾತೃ ಪ್ರಧಾನ ಸಂಸ್ಕøತಿ ಮೂಲ ಬಂಟರದ್ದು, ಪುರುಷರಷ್ಟೆ ಮಹಿಳೆಯರಿಗೂ ಗೌರವಾದರ, ಸ್ಥಾನಮಾನಗಳಿವೆ ಎಂದರು. ಜೀವನಗುಣಮಟ್ಟ ಎಷ್ಟೇ ಸುಧಾರಿಸಿದರು ಸಂಪ್ರದಾಯ, ಸಂಸ್ಕøತಿಗೆ ಅನುಸಾರವಾಗಿ ಬಂಟರು ಜೀವನ ನಡೆಸುತ್ತಾರೆ ಎಂದರು.ಸಂವಿಧಾನ ಬರುವ ಮೊದಲೇ ಬಂಟ ಸಮುದಾಯ ಲಿಂಗ ತಾರತಮ್ಯ, ಅಸಮಾನತೆ ನಿವಾರಿಸಿ ಮಾದರಿಯಾಗಿದೆ ಎಂದರು. ಸಮುದಾಯವು ಮಾತೃ ಪ್ರಧಾನ ಸಂಸ್ಕøತಿಯನ್ನು ಹೊಂದಿದೆ. ದೂರದೃಷ್ಟಿ ವಿಚಾರಗಳನ್ನು ಮನಸ್ಸಿನಲ್ಲಿಟ್ಟು ಕಾರ್ಯಸಾಧನೆ ಮಾಡುವಲ್ಲಿ ಬಂಟ ಸಮುದಾಯ ಸದಾ ಮುಂದು, ಬಂಟ ಅಂದರೇ ಸಂಘಟಕ, ನಾಯಕತ್ವಕ್ಕೆ ಇನ್ನೊಂದು ಹೆಸರೇ ಬಂಟ ಸಮುದಾಯ ಎಂದರು.
ಬಾರ್ಕೂರು ಮಹಾಸಂಸ್ಥಾನ ಪೀಠ ಸಂತೋಷ್ ಭಾರತೀ ಸ್ವಾಮೀಜಿ ಮಾತನಾಡಿ, ಮುಂದಿನ ಪೀಳಿಗೆ ಬಂಟ ಸಮುದಾಯದ ಆಚಾರ ಮತ್ತು ವಿಚಾರಗಳನ್ನು ತಿಳಿಸುವ ಕೆಲಸವಾಗಬೇಕು. ನಮ್ಮಲ್ಲಿ ಭೂತಾರಾಧನೆ, ನಾಗರಾಧನೆ ಹಳಿ ತಪ್ಪುತಿದ್ದು, ನಮ್ಮಲ್ಲಿ ಈ ಪದ್ದತಿ ಕ್ರಮ ಪ್ರಕಾರ ಯಾವುದು ನಡೆಯುತ್ತಿಲ್ಲ. ಈ ವಿಚಾರದಲ್ಲಿ ದುಂದುವೆಚ್ಚ ಕೈಬಿಟ್ಟು, ಬಡವರ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡರೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸಲಹೆ ನೀಡಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಬಂಟರ ಸೌರಭ ಪುಸಕ್ತ ಬಿಡುಗಡೆ ಮಾಡಿದರು. ಸಮಾರಂಬದ ರಾಧಾ ಸುಂದರ್ ಶೆಟ್ಟಿ ದ್ವಾರವನ್ನು ಸಾಯಿರಾಧ ರವಿ ಶೆಟ್ಟಿ ಉದ್ಘಾಟಿಸಿದರು. ಸಮ್ಮೆಳನದ ವೇದಿಕೆಯನ್ನು ವಿಶ್ವ ಬಂಟರ್ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಕ್ರಮದ ವೇದಿಕೆಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬಂಟರ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೈಂದೂರು ಬಂಟರ್ ಯಾನೆ ನಾಡವರ ಸಂಘದ ಅಧ್ಯಕ್ಷ ಬಿ.ಜಗನ್ನಾಥ್ ಶೆಟ್ಟಿ, ಉದ್ಯಮಿ ವಿಠಲ್ ಶೆಟ್ಟಿ, ಮಾಜಿ ಶಾಸಕ ಬಿ ಅಣ್ಣಪ್ಪಣ ಹೆಗ್ಡೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ, ನಾರಾಯಣ ಶೆಟ್ಟಿ, ದಾಸಣ್ಣ ಅಳ್ವ, ಡಾ.ಪ್ರಭಾಕರ್ ಶೆಟ್ಟಿ, ಮೈನಾ ಸುಬ್ಬಣ್ಣ ಶೆಟ್ಟಿ, ಸರ್ವೋತ್ತಮ ಶೆಟ್ಟಿ ಅವರನ್ನು ಸನ್ಮಾನಿಲಾಯಿತು.
ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಕಾರ್ಯಕ್ರಮದ ಅದ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಕಾರ್ಯಕ್ರಮ ಸಂಘಟನ ಸಮಿತಿಯ ಲೀಲಾಧರ್ ಶೆಟ್ಟಿ ಕಾಪು, ಪದ್ಮನಾಭ ಪಯ್ಯಡೆ, ಸಂತೋಷ್ ಶೆಟ್ಟಿ ಇನ್ನ, ಉಪೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ , ಉದ್ಯಮಿಗಳಾದ ಪುರುಷೊತ್ತಮ್ ಶೆಟ್ಟಿ, ಜಗನ್ನಾಥ್ ಶೆಟ್ಟಿ ಬೈಂದೂರು, ವಿಠಲ ಹೆಗ್ಡೆ, ಉದ್ಯಮಿ ಕೆ.ಡಿ ಶೆಟ್ಟಿ, ಕೆ.ಎಂ. ಶೆಟ್ಟಿ, ಬಾಲಕೃಷ್ಣ ರೈ, ರವೀಂದ್ರ ಶೆಟ್ಟಿ ಮುಂಬೈ, ಕಾಪು ವಿಶ್ವನಾಥ್ ಶೆಟ್ಟಿ, ಮೈನ ಸುಬ್ಬಣ್ಣ ಶೆಟ್ಟಿ, ಸರ್ವೊತ್ತಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.