ಆರೋಗ್ಯ ಶಿಬಿರದಿಂದ ಸ್ವಾಥ್ಯ ಸಮಾಜ ನಿರ್ಮಾಣ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಆರೋಗ್ಯ ಶಿಬಿರ ನಡೆಸುವುದರಿಂದ ಒಂದು ಸ್ವಾಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ಜೆ.ರ್.ಲೋಬೊ ಅವರು ಹೇಳಿದರು.
ಅವರು ಶಕ್ತಿನಗರ ನಾಲ್ಯಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದಿರಾ ಗಾಂಧಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಉಚಿತ ವೈದ್ಯಕೀಯ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಬಡವರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯವಾಗಿದ್ದು ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವ ಉದ್ದೇಶದಿಂದ ಈ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡರೆ ನಮ್ಮ ಕಿಂಚಿತ ಸೇವೆಯನ್ನು ಜನರು ಪಡೆದಂತಾಗುತ್ತದೆ ಎಂದರು.
ಇದು ಜೆ.ಆರ್.ಲೋಬೊ ಅವರು ಆಯೋಜಿಸಿರುವ 25 ನೇ ಆರೋಗ್ಯ ಶಿಬಿರವಾಗಿತ್ತು. ಈ ಶಿಬಿರವನ್ನು ಸಿಟಿ ಆಸ್ಪತ್ರೆಯ ನಿರ್ದೇಷಕರಾದ ಭಾಸ್ಕರ್ ಶೆಟ್ಟಿ ಅವರು ಉದ್ಘಾಟಿಸಿದರು.
ಕಾರ್ಯಕ್ರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ ಕುಮಾರ್ ದಾಸ್ , ಕಳ್ಳಿಗೆ ತಾರಾನಾಥ ಶೆಟ್ಟಿ , ಕೆ.ಆರ್.ಶ್ರೀಯಾನ್ ಅವರು ಭಾಗವಹಿಸಿದ್ದರು.