ಆರ್ಟಿಕಲ್ 370 ಸುಪ್ರೀಂ ತೀರ್ಪು : ಮೋದಿ ನೇತೃತ್ವದಲ್ಲಿ ದೇಶದ ಸಾರ್ವಭೌಮತೆಗೆ ಸಂದ ಜಯ – ಯಶ್ಪಾಲ್ ಸುವರ್ಣ

Spread the love

ಆರ್ಟಿಕಲ್ 370 ಸುಪ್ರೀಂ ತೀರ್ಪು : ಮೋದಿ ನೇತೃತ್ವದಲ್ಲಿ ದೇಶದ ಸಾರ್ವಭೌಮತೆಗೆ ಸಂದ ಜಯ – ಯಶ್ಪಾಲ್ ಸುವರ್ಣ

ಉಡುಪಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿದ್ದ ಸಂವಿಧಾನದ ಆರ್ಟಿಕಲ್ 370 ವಿಧಿ ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಸಾರ್ವಭೌಮತೆಗೆ ಸಂದ ಜಯ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹರ್ಷ ವ್ಯಕ್ತ ಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದಕ್ಕೆ ನೀಡಿದ್ದ ವಿಶೇಷ ಹಕ್ಕನ್ನು ತೆಗೆಯುವ ಮೂಲಕ ಭಾರತ ಸಾರ್ವಭೌಮತೆಯನ್ನು ಎತ್ತಿ ಹಿಡಿಲಾಗಿದೆ. 370 ರದ್ದಾದ ಬಳಿಕ ಅಲ್ಲಿ ಅಭಿವೃದ್ಧಿ ಆಗುತ್ತಿದ್ದು, ಅಹಿತಕರ ಘಟನೆಗಳು ನಿಯಂತ್ರಣಕ್ಕೆ ಬಂದಿದ್ದು ಭಾರತದ ಸಮಗ್ರ ಅಭಿವೃದ್ಧಿಯೊಂದಿಗೆ ಜಮ್ಮು ಕಾಶ್ಮೀರ ಜೊತೆ ಸಾಗಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಇಚ್ಛಾಶಕ್ತಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ದೃಢ ನಿರ್ಧಾರ ಮತ್ತು ಅದ್ಭುತ ತಂತ್ರಗಾರಿಕೆಯಿಂದಾಗಿ ಈ ನಿರ್ಧಾರ ಸಾಧ್ಯವಾಗಿದ್ದು, 2019ರ ಆಗಸ್ಟ್ 5 ಹಾಗೂ ಇವತ್ತಿನ ದಿನ ಭಾರತದ ಇತಿಹಾಸದಲ್ಲಿ ಉಳಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love