Home Mangalorean News Kannada News ಆರ್ಥಿಕ ಅಬಿವೃದ್ಧಿಯಲ್ಲಿ ಕುಟುಂಬ ಉದ್ದಿಮೆಯ ಪಾತ್ರ ಗಣನೀಯ- ಮಾಜಿ ಆರ್.ಬಿ.ಐ. ಡೆಪುಟಿ ಗವರ್ನರ್ ವಿ. ಲೀಲಾಧರ್

ಆರ್ಥಿಕ ಅಬಿವೃದ್ಧಿಯಲ್ಲಿ ಕುಟುಂಬ ಉದ್ದಿಮೆಯ ಪಾತ್ರ ಗಣನೀಯ- ಮಾಜಿ ಆರ್.ಬಿ.ಐ. ಡೆಪುಟಿ ಗವರ್ನರ್ ವಿ. ಲೀಲಾಧರ್

Spread the love

ಆರ್ಥಿಕ ಅಬಿವೃದ್ಧಿಯಲ್ಲಿ ಕುಟುಂಬ ಉದ್ದಿಮೆಯ ಪಾತ್ರ ಗಣನೀಯ- ಮಾಜಿ ಆರ್.ಬಿ.ಐ. ಡೆಪುಟಿ ಗವರ್ನರ್ ವಿ. ಲೀಲಾಧರ್

ಮಂಗಳೂರು: ಕುಟುಂಬದ ವ್ಯವಹಾರಗಳು ಅತಿ ದೊಡ್ಡ ಗಾತ್ರವನ್ನು ಹೊಂದಿದ್ದು ಒಟ್ಟು ರಾಷ್ಟ್ರೀಯ ಉತ್ಪನ್ನ, ಉದ್ಯೋಗ ಮತ್ತು ರಫ್ತು ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಾ ಬಂದಿದೆ. ಜಾಗತಿಕವಾಗಿ ಕುಟುಂಬ ವ್ಯವಹಾರಗಳು ಶ್ರೀಮಂತ ಮತ್ತು ಅದ್ಭುತ ಇತಿಹಾಸವನ್ನು ಹೊಂದಿದ್ದು, ನೊವಾರ್ಟಿಸ್, ವಾಲ್ ಮಾರ್ಟ್ ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳು ಕುಟುಂಬ ಮೂಲದಿಂದ ಬಂದ ವ್ಯವಹಾರಗಳಾಗಿವೆ.  ವಿಶೇಷವಾಗಿ ಭಾರತದಲ್ಲಿ ಇಂದಿನ ಕಾರ್ಪೋರೇಟ್ ಜಗತ್ತಿನ ಯುವ ನಾಯಕರು ಅಂಬಾನಿ, ಜಿಂದಾಲ್, ಮಿತ್ತಲ್, ಅದಾನಿಸ್, ಗೋದ್ರೆಜ್, ಮತ್ತು ಇನ್ನಿತರ ಪ್ರಸಿದ್ಧ ಕುಟುಂಬದಿಂದ ಬಂದಿದ್ದಾರೆ. ಕುಟುಂಬದ ಹೆಸರುಗಳ ಬ್ರ್ಯಾಂಡ್, ಕೌಟುಂಬಿಕ ಖ್ಯಾತಿ ಮತ್ತು ಅಭಿಮಾನ, ಸ್ವಯಂ-ಶಿಸ್ತು ಮತ್ತು ಸ್ವ-ಆಡಳಿತದ ಅಂಶಗಳಿಂದಾಗಿ  ಕುಟುಂಬದ ವ್ಯವಹಾರಗಳು ಇಂದು ಹೆಚ್ಚು ಪ್ರಸ್ತುತತೆ ಪಡೆದುಕೊಂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದ ಮಾಜಿ ಡೆಪ್ಯುಟಿ ಗವರ್ನರ್ ವಿಟ್ಠಲ್ ದಾಸ್ ಲೀಲಾಧರ್ ಅಭಿಪ್ರಾಯ ಪಟ್ಟರು.

ಅವರು ನಗರದ ಬೊಂದೇಲಿನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಸ್ಮಾರಕ ಸ್ನಾತಕೋತ್ತರ ವಿದ್ಯಾ ಸಂಸ್ಥೆಯಲ್ಲಿ ನಡೆದ ಕುಟುಂಬ ವ್ಯವಹಾರ: ಸವಾಲುಗಳು ಮತ್ತು ಅವಕಾಶಗಳು ಎನ್ನುವ ವಿಷಯದಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮುಂದುವರೆಸಿ ಮಾತನಾಡುತ್ತಾ ಕುಟುಂಬದ ಸದಸ್ಯರ ನಡುವೆ ಸಂವಹನ ಕೊರತೆ, ಕುಟುಂಬದ ಸಂಬಂದವನ್ನು ನಿಭಾಯಿಸಲು ಕೌಟುಂಬಿಕ  ಸಂವಿಧಾನದ ಅಸ್ಪಷ್ಟತೆ, ಯಾವುದೇ ಸಂಘರ್ಷವನ್ನು ಪರಿಹರಿಸಲು ಲಿಖಿತ ತಿಳುವಳಿಕೆ ಕೊರತೆ, ಉದ್ಯೋಗಿಗಳಿಗೆ ಅಸಮರ್ಪಕ  ನೀತಿಗಳು, ಗುಣಮಟ್ಟದ ನಿಯಂತ್ರಣಗಳ ಕೊರತೆ ಮತ್ತು ಆಧುನಿಕ ತಂತ್ರಗಳು ಮತ್ತು ಸುಧಾರಣೆಗಳೊಂದಿಗೆ ವೇಗವಾಗಿ ಸಾಗುವುದು ಇತ್ಯಾದಿಗಳು ಕುಟುಂಬದ ಸಂಸ್ಥೆಗಳಿಗೆ ಇರುವ ಪ್ರಮುಖ ಸವಾಲುಗಳಾಗಿವೆ ಎಂದರು.

ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಕುಡ್ಪಿ ಜಗದೀಶ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಶ್ರೀ ಮಣೇಲ್ ಅಣ್ಣಪ್ಪ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಬೆಸಂಟ್ ಸ್ನಾತಕೋತ್ತರ ಸಂಸ್ಥೆಯ ನಿರ್ದೇಶ್ಕರಾದ ಡಾ. ನಾರಾಯಣ ಕಾಯರ್ ಕಟ್ಟೆ ಸ್ವಾಗತಿಸಿದರು. ಸಂಯೋಜಕರಾದ ಆಶಾಲತಾ ವಂದಿಸಿದರು. ಬೆಸೆಂಟ್ ಆಡಳಿತ ಮಂಡಳಿಯ ಸದಸ್ಯರಾದ ಶ್ಯಾಮ ಸುಂದರ ಕಾಮತ್, ನಗರ ನಾರಾಯಣ ಶೆಣೈ, ರಾಘವ ಕಾಮತ್, ಸುರೇಶ್ ಮಲ್ಯ ಮಂಗಳೂರು ವಿಶ್ವ ವಿದ್ಯಾನಿಲಯದ ಡಾ. ಮಲ್ಲಿಕಾರ್ಜುನಪ್ಪ ಮುಂತಾದವರು ಉಪಸ್ಥಿತರಿದ್ದರು.

ನಂತರ ನಡೆದ ವಿವಿಧ ಗೋಷ್ಠಿ ಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಫಸ್ಟ್ ಬೆಸ್ಟ್ ಕನ್ಸಲ್ಟಂಟ್ ಸಂಸ್ಥೆಯ ಮುಖ್ಯಸ್ಥರಾದ ಪ್ರಭಾಕರ್ ಕಿಣಿ, ಟಾಟಾ ಕಾಫಿ ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ ಎಂ.ಬಿ ಗಣಪತಿ, ನ್ಯಾಚುರಲ್ ಐಸ್ ಕ್ರೀಂ ನ ಮುಖ್ಯಸ್ಥರಾದ ರಘುನಂದನ್ ಕಾಮತ್, ಕಾಮತ್ಸ್ ಐಸ್ ಕ್ರೀಮ್ ನಿರ್ದೇಶಕರಾದ ಶ್ರೀನಿವಾಸ್ ಕಾಮತ್ ಮುಂತಾದವರು ಕುಟುಂಬ ವ್ಯವಹಾರಗಳ ವಿವಿಧ ಆಯಾಮಗಳ ಬಗ್ಗೆ ಮಾತನಾಡಿದರು. ದೇಶಾದ್ಯಂತ ಆಗಮಿಸಿದ ವಿವಿಧ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಿದರು.


Spread the love

Exit mobile version