Home Mangalorean News Kannada News ಆಲ್ ಆರ್ಟ್ ಚಿತ್ರಕಲಾ ಶಿಬಿರ

ಆಲ್ ಆರ್ಟ್ ಚಿತ್ರಕಲಾ ಶಿಬಿರ

Spread the love

ಆಲ್ ಆರ್ಟ್ ಚಿತ್ರಕಲಾ ಶಿಬಿರ

ನಗರದ ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಇತ್ತೀಚೆಗೆ ಒಂದು ದಿನದ ಆಲ್ ಆರ್ಟ್ ಚಿತ್ರಕಲಾ ಶಿಬಿರವು ನಡೆಯಿತು. ಸಂತ ಅಲೋಶಿಯಸ್‍ರವರ 450ನೇ ವರ್ಷದ ಜನ್ಮಶತಾಬ್ದಿಯ ಮಹೋತ್ಸವಾಚರಣೆಯ ಪ್ರಯುಕ್ತ ಸಂತ ಅಲೋಶಿಯಸ್ ಪಿ.ಯು. ಕಾಲೇಜು ಹಾಗೂ ಕರಾವಳಿ ಚಿತ್ರಕಲಾ ಚಾವಡಿ ಕಲಾವಿದರ ಜಂಟಿ ಆಶ್ರಯದಲ್ಲಿ ಈ ಶಿಭಿರವು ಆಯೋಜನೆಗೊಂಡಿತು.

ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ವಂದನೀಯ ಡಯೊನೀಶಿಯಸ್ ವಾಜ್ ಎಸ್.ಜೆ., ಶಿಬಿರದ ಉದ್ಘಾಟನೆಗೈದು, ಕಲಾ ಜಗತ್ತು ಭಗವಂತನ ಅದ್ಭುತವಾದ ಸೃಷ್ಠಿಯ ಒಂದು ರಚನೆ ಹಾಗೂ ವಿದ್ಯಾರ್ಥಿಗಳಿಗೆ ಭವಿಷ್ಯದ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಇದೊಂದು ವೇದಿಕೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ನಗರದ ಪ್ರಸಾದ್ ಆರ್ಟ್ ಗ್ಯಾಲರಿಯ ನಿರ್ದೇಶಕರು ಶ್ರೀ ಕೋಟಿ ಪ್ರಸಾದ್ ಆಳ್ವ, ಇಂದಿನ ಯುವಜನರು, ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುವ ಬದಲು, ಚಿತ್ರಕಲೆಯಂತಹ ಮೌಲ್ಯಯುತ ವಿಚಾರಗಳಲ್ಲಿ ತಮ್ಮ ಅಮೂಲ್ಯ ಸಮಯವನ್ನು ತೊಡಗಿಸಿಕೊಳ್ಳುವುದು ಅವಶ್ಯವೆಂದರು.
ಮುಖ್ಯ ಅತಿಥಿ ಫಾ. ಜಾನ್ ಲಾಂಗ್, ಕಲಾವಿದರಿಗೆ ಶುಭಹಾರೈಸಿದರು. ಶ್ರೀ ಗಣೇಶ್ ಸೋಮಯಾಜಿಯವರು ಕಾರ್ಯಕ್ರಮಕ್ಕೆ ಶುಭಕೋರಿದರು.

ಕಲಾ ಶಿಬಿರದಲ್ಲಿ ಚಿತ್ರಕಲಾ ಜಾವಡಿಯ ಖ್ಯಾತ ಕಲಾವಿದರುಗಳಾದ ಬಿ. ಗಣೇಶ್ ಸೋಮಯಾಜಿ, ಸಯ್ಯದ್ ಆಸಿಫ್ ಆಲಿ, ದಿನೇಶ್ ಹೊಳ್ಳ, ಜಾನ್ ಚಂದ್ರನ್, ಸಪ್ನಾ ನೊರೊನ್ಹಾ, ಮುರುಳಿಧರ್ ಕೆ.ಎಸ್., ರಚನಾ ಸೂರಜ್, ಭಗೀರಥಿ ಭಂಡಾರ್ಕರ್, ಪೂರ್ಣೇಶ್, ನವೀನ್ ಕೋಡಿಕಲ್, ನವೀನ್ ಚಂದ್ರ ಬಂಗೇರ, ಜಯಶ್ರೀ ಶರ್ಮ, ಸುಧೀರ್ ಕವೂರು, ಈರಣ್ಣ, ಭವನ್ ಮತ್ತು ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿ ಕಲಾವಿದರುಗಳಾದ ಗೌರವ್ ದೇವ್ ಹೆಚ್.ಬಿ., ಧನುಷ್, ನಿಶಾನ್ ಎಸ್., ಉಲ್ಲಾಸ್ ಹೆಗ್ಡೆ, ಸರ್ವಿನ್ ಡಿಯೋನ್, ಪ್ರಣವ್ ಶೆಟ್ಟಿ, ಅಖಿಲ್ ಮೊಂತೆರೊ, ರುತ್ ಸಲ್ಡಾನ್ಹಾ, ನಿವೇದಿತಾ, ಅಶ್ವಿತಾ ರೈ ಚಿತ್ರ ರಚಿಸಿದರು.

ಕಲಾವಿದ ಶ್ರೀ ಸಯ್ಯದ್ ಆಸಿಫ್ ಆಲಿಯವರು ಸಂತ ಅಲೋಶಿಯಸ್‍ರವರ ಭಾವ ಚಿತ್ರದ ರಚನಾ ಪ್ರಾತ್ಯಕ್ಷಿಕೆಯ ಮೂಲಕ ಶಿಭಿರಕ್ಕೆ ಚಾಲನೆ ನೀಡಿದರು. ಪ್ರೌಢ ಶಾಲೆಯ ಕಲಾಶಿಕ್ಷಕ ಶ್ರೀ ಜಾನ್ ಚಂದ್ರನ್ ಶಿಭಿರವನ್ನು ಸಂಯೋಜಿಸಿದ್ದರು. ಪಿ.ಯು. ಕಾಲೇಜಿನ ಉಪನ್ಯಾಸಕಿಯರಾದ ಅನಷಾ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ಪಿರೇರಾ ಸ್ವಾಗತಿಸಿ, ಸಂಗೀತಾ ಸಿಕ್ವೇರಾ ಧನ್ಯವಾದ ಸಮರ್ಪಿಸಿದರು.


Spread the love

Exit mobile version