ಆಳ್ವಾಸ್‍ನಲ್ಲಿ ‘ಆಟಿ ಕಷಾಯ’ ವಿತರಣೆ

Spread the love

ಆಳ್ವಾಸ್‍ನಲ್ಲಿ ‘ಆಟಿ ಕಷಾಯ’ ವಿತರಣೆ

ಮೂಡಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ‘’ಆಟಿ ಕಷಾಯ’’ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಜ್ಯೋತಿಷಿ ಸುಧಾಕರ ತಂತ್ರಿ ಸಾಂಕೇತಿಕವಾಗಿ ಔಷಧಿಯನ್ನು ಒರ್ವ ವ್ಯಕ್ತಿಗೆ ನೀಡುವುದರ ಮೂಲಕ ಉದ್ಘಾಟಿಸಿದರು. ಪ್ರತಿ ವರ್ಷದಂತೆ ಆಟಿ ಅಮವಾಸ್ಯೆಯ ವಿಶೇಷವಾದ, ಸರ್ವರೋಗ ನಿರೋಧಕ ಪಾರಂಪರಿಕ ದಿವ್ಯೌಷಧ, ಗುರುವಾರ ಬೆಳಿಗ್ಗೆ ಘಂಟೆ 08.30ರಿಂದ 11.00 ರತನಕ ವಿದ್ಯಾಗಿರಿ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಉಚಿತವಾಗಿ ವಿತರಿಸಲಾಯಿತು. ಆಟಿ ಕಷಾಯ ವಿತರಣೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 3000ಕ್ಕೂ ಅಧಿಕ ಮಂದಿ ಅಗಮಿಸಿ ಔಷಧೀಯ ಪಾನೀಯ ಸೇವಿಸಿದರು.

ಕಾರ್ಯಕ್ರಮದ ಸಂಯೋಜಕ ಹಾಗೂ ಆತ್ಮ ರಿಸರ್ಚ ಸೆಂಟರ್‍ನ ಸಂಯೋಜಕ ಡಾ ಸುಬ್ರಮಣ್ಯ ಪದ್ಯಾಣ ಮಾತನಾಡಿ, ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ಆಟಿ ಕಷಾಯ ರಾಮಭಾಣ. ಹಾಲೆಮರದ ತೊಗಟೆಯಲ್ಲಿ ಅಮಾವಾಸ್ಯೆಯ ದಿನ ರೋಗ ನಿರೋಧಕ ಶಕ್ತಿ ಜಾಸ್ತಿ ಇರುವುದರಿಂದ ಈ ದಿನ ಮಾಡುವ ಕಷಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ ಎಂದು ತಿಳಿಸಿದರು.

ಪ್ರಾಂಶುಪಾಲೆ ಡಾ ಝನೀಕಾ ಡಿಸೋಜಾ, ಉಪಪ್ರಾಂಶುಪಲಾ ಡಾ ರವಿಕಾಂತ್ ಹಾಗೂ ಇತಿನ್ನಿತರರು ಉಪಸ್ಥಿತರಿದ್ದರು.


Spread the love