ಆಳ್ವಾಸ್‍ನಲ್ಲಿ `ದಕ್ಷ’-ಕಿರಿಯ ವೈದ್ಯರ ವೃತ್ತಿ ಕೌಶಲ್ಯಾಭಿವೃದ್ದಿ ಕಾರ್ಯಕ್ರಮ
ಮೂಡುಬಿದಿರೆ: ನಿರಂತರ ಅಧ್ಯಯನ, ಕೌಶಲ್ಯ ಹಾಗೂ ಪರಿಶ್ರಮದಿಂದ ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸು ಕಾಣಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ ಎಂ. ಆಳ್ವ ತಿಳಿಸಿದರು.
ಆಳ್ವಾಸ್ ಆಯುರ್ವೇದ ಕಾಲೇಜು ವಿದ್ಯಾಗಿರಿ ಮೂಡಬಿದಿರೆ ಹಮ್ಮಿಕೊಂಡ ಕಾರ್ಯಕ್ರಮ `ದಕ್ಷ’ ಪ್ರಸಕ್ತ ಸಾಲಿನ ಕಿರಿಯ ವೈದ್ಯರ ವೃತ್ತಿ ಕೌಶಲ್ಯಾಭಿವೃದ್ದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗ ಕಾಲೇಜಿನ ಪಾಂಶುಪಾಲರಾದ ಡಾ. ವನಿತಾ ಶೆಟ್ಟಿ , ಆಳ್ವಾಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಹನಾ ಶೆಟ್ಟಿ ಶುಭಾಶಂಸನೆಗೈದರು.
ಪ್ರಾಂಶುಪಾಲರಾದ ಡಾ.ಜೆನಿಕಾ ಡಿ’ಸೋಜ, ವೈದ್ಯಕೀಯ ವೃತ್ತಿಯಲ್ಲಿ ಕಾರ್ಯದಕ್ಷತೆ, ಶಾಸ್ತ್ರ ಜ್ಞಾನ, ಶುಚಿತ್ವ, ಕರ್ಮ ಕೌಶಲ್ಯದ ಮಹತ್ವವನ್ನು ವಿವರಿಸಿದರು.
ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಅಮಲ್ ಕಾರ್ಯಕ್ರಮ ನಿರೂಪಣೆಗೈದರು. ಡಾ.ಸುರೇಶ್ ವೈ ವಂದಿಸಿದರು.
ತದನಂತರ ಆಸ್ಪತ್ರೆಯ ಕಾರ್ಯವೈಖರಿ, ಧ್ಯೇಯೋದ್ದೇಶ ಹಾಗೂ ಕಿರಿಯ ವೈದ್ಯರ ಪಾತ್ರದ ಕುರಿತು ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕರು ಡಾ.ಪ್ರವೀಣ್ ಬಿ.ಎಸ್ ಮಾಹಿತಿ ನೀಡಿದರು.