ಆಳ್ವಾಸ್ ಆರೋಗ್ಯ ರಕ್ಷಾ ಔಷಧ ವಿತರಣಾ ಕಾರ್ಯಕ್ರಮ
ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಇದರ ಸಹಭಾಗಿತ್ವದಲ್ಲಿ, ಮೂಡುಬಿದಿರೆಯಲ್ಲಿ ಕೋವಿಡ್19 ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಪೆÇೀಲಿಸ್ ಸಿಬ್ಬಂಧಿ ಹಾಗೂ ಪೌರ ಕಾರ್ಮಿಕರಿಗೆ ಆಯುರ್ವೇದ ರೋಗ ನಿರೋಧಕ ಗುಣಗಳುಳ್ಳ ಔಷಧ (ಗಿಡಮೂಲಿಕೆ) ಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪೆÇೀಲಿಸ್ ಠಾಣೆಯ ಎಸ್.ಐ ದಿನೇಶ್ ಕುಮಾರ್, ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಹಾಗೂ ಪರಿಸರ ಅಧಿಕಾರಿ ಶಿಲ್ಪ ಉಪಸ್ಥಿತರಿದ್ದರು. ಆಳ್ವಾಸ್ ಹೆಲ್ತ್ ಸೆಂಟರ್, ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿನಯ್ ಆಳ್ವರವರು ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲೆ ಡಾ.ಝೆನಿಕಾ ಡಿಸೋಜ ಆಯುರ್ವೇದ ರೋಗ ನಿರೋಧಕ ಔಷಧಗಳ ಮಹತ್ವದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮಂಜುನಾಥ ಭಟ್ ಹಾಗೂ ಆಳ್ವಾಸ್ ಹೆಲ್ತ್ ಸೆಂಟರ್‍ನ ಆಡಳಿತಾಧಿಕಾರಿಯಾದ ಭಾಸ್ಕರ್ ಉಪಸ್ಥಿತರಿದ್ದರು.